May 5, 2024

Bhavana Tv

Its Your Channel

ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತೀಕ ಅಮಾವಾಸ್ಯೆಯಂದು ಶಾರ್ವರಿ ಸಂವತ್ಸರದ ರಂಗಪೂಜೆ (ಎಡೆ ಅಮಾವಾಸ್ಯೆ) ಉತ್ಸವ, ರಥೋತ್ಸವ ಸಂಪನ್ನ

ಗೋಕರ್ಣ: ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು , ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ ೧೪-೧೨ -೨೦೨೦ ಸೋಮವಾರ ಕಾರ್ತೀಕ ಅಮಾವಾಸ್ಯೆಯಂದು ಶಾರ್ವರಿ ಸಂವತ್ಸರದ ರಂಗಪೂಜೆ (ಎಡೆ ಅಮಾವಾಸ್ಯೆ) ಉತ್ಸವ, ರಥೋತ್ಸವ ಸಂಪನ್ನಗೊoಡಿತು. ಅರ್ಚಕರಾದ ವೇ.ಮೂ. ಸಾಂಬ ಭಟ್ಟ ಷಡಕ್ಷರಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಶ್ರೀದೇವರಿಗೆ ೧೦೮ ಎಡೆ ವಿಶೇಷ ಭಕ್ಷ್ಯ ನೈವೇದ್ಯ ಸಲ್ಲಿಸಲಾಯಿತು. ಪೂಜೆಯ ನಂತರ
ಶ್ರೀ ದೇವಾಲಯದಲ್ಲಿ ಸೇವೆ ಸಲ್ಲಿಸುವ ವಿವಿಧ ಸಮಾಜದ ಕಾರ್ಯಕರ್ತರಿಗೆ ಎಡೆ ಪ್ರಸಾದವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳದ ಸದಸ್ಯರು ಹಾಗೂ ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು

error: