May 4, 2024

Bhavana Tv

Its Your Channel

ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟ ; ಐವರು ಶಿಕ್ಷಕೀಯರ ಗೆಲುವು

ಕುಮಟಾ: ತಾಲೂಕಿನಲ್ಲಿ ಮಂಗಳವಾರ ನಡೆದ ಶಿಕ್ಷಕರ ಚುನಾವಣೆಯಲ್ಲಿ ಮಹಿಳಾ ಕೋಟಾದ ಫಲಿತಾಂಶ ರಾತ್ರಿ ಹೊರಬಿದ್ದಿದೆ. ಚುನಾವಣೆ ಸ್ಪರ್ಧಿಸಿದ ೭ ಶಿಕ್ಷಕಿಯರ ಪೈಕಿ ೫ ಮಂದಿ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ ೭:೩೦ ರಿಂದ ಸಂಜೆ ೪ ಗಂಟೆಗೆ ವರೆಗೂ ನಡೆದ ಚುನಾವಣೆಯಲ್ಲಿ ಶೈಲಾ ಮಡಿವಾಳ , ಕಲ್ಪನಾ ಬಿ.ನಾಯಕ , ಶ್ರೀಮತಿ ಎನ್ ನಾಯ್ಕ, ರಾಜೇಶ್ವರಿ ಹೆಗಡೆ, ಹಾಗೂ ಅಹಲ್ಯಾ ಹೆಗಡೆ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು ೭೦೩ ಮತದಾರರಿದ್ದು ೬೬೨ ಮಂದಿ ಮತ ಚಲಾವಣೆ ಮಾಡಿದ್ದಾರೆ.ಅಂದರೆ ಶೇ.೯೪ ರಷ್ಟು ಮತದಾನವಾಗಿದೆ.ಶಿಕ್ಷಕರಲ್ಲಿ ೯ ಜನರ ಆಯ್ಕೆಗೆ ೧೮ ಮಂದಿ ಸ್ಪರ್ಧೆ ನಡೆಸಿದ್ದು ತಡರಾತ್ರಿ ಫಲಿತಾಂಶ ಬರುವ ಸಾಧ್ಯತೆಯಿದೆ. ಶೈಲಾ ಮಡಿವಾಳ(೪೫೦) , ಕಲ್ಪನಾ ಬಿ.ನಾಯಕ(೩೫೯) , ಶ್ರೀಮತಿ ಎನ್ ನಾಯ್ಕ(೩೨೭), ರಾಜೇಶ್ವರಿ ಹೆಗಡೆ(೩೧೭), ಹಾಗೂ ಅಹಲ್ಯಾ ಹೆಗಡೆ (೩೦೮), ಮತಗಳನ್ನು ಪಡೆದಿದ್ದಾರೆ ಇನ್ನು ಮಾಲಬಾಯಿ ನಾಯ್ಕ ೨೬೭ ಹಾಗೂ ಶಶಿಕಲಾ ಭಟ್ಟ
೨೬೫ ಮತಗಳಿಗೆ ತೃಪ್ತಿ ಪತ್ತುಕೊಂಡಿದ್ದಾರೆ ೫ ಮತಗಳ ತಿರಸ್ಕೃತಗೊಂಡಿವೆ

error: