May 18, 2024

Bhavana Tv

Its Your Channel

ಮೀನಿನ ಮಾರುಕಟ್ಟೆ ಹಸ್ತಾಂತರಿಸುವ ವಿಷಯದಲ್ಲಿ ಜನಸಾಮನ್ಯರಲ್ಲಿ ಗೊಂದಲ

ಶಿರಸಿ: ಸ್ಥಳೀಯ ಹಳೆ ಬಸ್ ನಿಲ್ದಾಣಕ್ಕೆ ಹೊಂದಿಕೊoಡಿರುವ ಮೀನಿನ ಮಾರುಕಟ್ಟೆ ಆವರಣವನ್ನು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸುವ ವಿಷಯದಲ್ಲಿ ಸಾರಿಗೆ ಸಂಸ್ಥೆ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರರವರು ಶಿರಸಿ ನಗರಸಭಾ ಆಯುಕ್ತರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಶಿರಸಿ ನಗರಸಭೆಯ ವಿಶೇಷ ಸಾಮನ್ಯ ಸಭೆಯಲ್ಲಿ ಡಿ೧೭ ಚರ್ಚಿಸುವ ವಿಷಯದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಕಾನೂನು ಬಾಹಿರವಾಗಿರುವುದರಿಂದ ಉಸ್ತುವಾರಿ ಸಚಿವರು ಬರೆದ ಪತ್ರದ ಕಾನೂನಿನ ಮೌಲ್ಯತೆಯ ಕುರಿತು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಎಡಿಬಿ ಆರ್ಥಿಕ ನೆರವಿನಿಂದ ಕಟ್ಟಿದ ಕಟ್ಟಡದೊಂದಿಗೆ ಮೀನಿನ ಸಂಕೀರ್ಣದ ಆವರಣವನ್ನು ಹಸ್ತಾಂತರಿಸಲು ಎಡಿಬಿ ಯ ನಿಯಮದಲ್ಲಿ ಇರುವ ನಿರ್ಬಂಧನೆ ನಾಗರಿಕ ಅವಶ್ಯ ಉದ್ದೇಶದ ಮಿತಿ ಸಡಿಲಿಸಲು ಸಾರ್ವಜನಿಕ ಅಭಿಪ್ರಾಯ ಕ್ರೂಢೀಕರಣ ನಾಗರಿಕ ಅವಶ್ಯಕತೆಗೆ ಮೀಸಲಾಗಿರುವ ಆಸ್ತಿ ಹಸ್ತಾಂತರಿಕೆಗೆ ಇರುವ ಕಾನೂನಿನ ಮಾನದಂಡದ ಕುರಿತು ಸಾರ್ವಜನಿಕರಲ್ಲಿ ಚರ್ಚಿಸಲಾಗುತ್ತಿದೆ.
ಕಳೆದ ೬೦ ವರ್ಷಕ್ಕೂ ಮಿಕ್ಕಿ ಸದ್ರಿ ಸ್ಥಳವು ಮೀನು ವ್ಯಾಪಾರಕ್ಕೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಗೆ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾದಾಗ ನಗರಸಭೆ ಆಯುಕ್ತರು ಮತ್ತು ತಹಸೀಲ್ದಾರರವರು ಹಸ್ತಾಂತರಕ್ಕೆ ಇರುವ ತೊಂದರೆಯ ಅಂಶಗಳನ್ನು ಪ್ರಕಟಿಸಿದ್ದಾಗಲೂ, ಉಸ್ತುವಾರಿ ಸಚಿವರು ನಗರಸಭಾ ಆಯುಕ್ತರಿಗೆ ಪತ್ರ ಬರೆದು ಒತ್ತಡ ಹೇರುತ್ತಿರುವ ಕ್ರಮ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಕಾನೂನು ಬಾಹಿರ: ನಾಗರೀಕ ಅವಶ್ಯಕತೆಗೆ ಮೀಸಲಿಟ್ಟು ಇಂದಿಗೂ ನಾಗರಿಕರ ಅವಶ್ಯವಾಗಿ ಉಪಯೋಗಿಸುತ್ತಿರುವುದರಿಂದ ಇಂತಹ ನಾಗರಿಕ ಅವಶ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸುವ ಕ್ರಿಯೆ ಕಾನೂನು ಬಾಹಿರ. ಇಂತಹ ಪ್ರಕ್ರಿಯೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸಂಸ್ಥೆಯೊಡೆತನದಲ್ಲಿರುವ ನಾಗರೀಕ ಅವಶ್ಯಕತೆಗೆ ಮೀಸಲಿಟ್ಟ ಕ್ಷೇತ್ರ ಪರಾಧೀನ ಮಾಡಬಾರದೆಂಬ ನಗರಾಭಿವೃದ್ಧಿ ಇಲಾಖೆಯ ಇತ್ತೀಚಿನ ಆದೇಶ ನೀತಿ ಮತ್ತು ನಿಯಮವನ್ನು ಪರಿಗಣಿಸದೇ ಉಸ್ತುವಾರಿ ಸಚಿವರ ಪತ್ರವನ್ನು ನಗರಸಭೆ ಆಯುಕ್ತರು ಗಣನೆಗೆ ತೆಗೆದುಕೊಂಡಿರುವುದು ವಿಷಾದಕರ. ಕಾನೂನಿಗೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ನಗರಸಭೆಯಲ್ಲಿ ತೀರ್ಮಾನ ತೆಗೆದುಕೊಂಡರೆ ಸೂಕ್ತ ನ್ಯಾಯಾಲಯದಲ್ಲಿ ಸದ್ರಿ ತೀರ್ಮಾನದ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

error: