May 4, 2024

Bhavana Tv

Its Your Channel

ಶಿಕ್ಷಕ ಡಿಯೋಗ ಎಸ್.ಹೊರ್ಟಾ ಆಕಸ್ಮಿಕವಾಗಿ ನಿಧನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ಇಲ್ಲಿಯ ಪದೋನ್ನತ ಮುಖ್ಯಾಧ್ಯಾಪಕರಾದ ಡಿಯೋಗ ಎಸ್.ಹೊರ್ಟಾ ಆಕಸ್ಮಿಕವಾಗಿ ನಿಧನರಾಗಿದ್ದಾರೆ.

ಹೊನ್ನಾವರ ; ಕಾಸರಕೋಡಿನವರಾದ ಇವರು ಕಳೆದ ೩೬ ವರ್ಷಗಳಿಂದ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ವಿವಿಧ ಶಾಲೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ಈಗ ಮಂಕಿಮಡಿ ಶಾಲೆಯಲ್ಲಿ ಪದೋನ್ನತ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮಡದಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಸವಿತಾ ನಾಯಕ, ಕ್ಷೇತ್ರ ಸಮನಯಾಧಿಕಾರಿಗಳಾದ ಎಸ್.ಎಮ್.ಹೆಗಡೆ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುರೇಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ,ಸAಘದ ಪದಾಧಿಕಾರಿಗಳು, ಸದಸ್ಯರು, ಮಂಕಿಮಡಿ ಶಾಲೆಯ ಶಿಕ್ಷಕರು,ಎಸ್.ಡಿ.ಎಮ್.ಸಿ ಅಧ್ಯಕ್ಷರು,ಸದಸ್ಯರು,ಪಾಲಕರು,ವಿದ್ಯಾರ್ಥಿಗಳು ಹಾಗೂ ಅವರ ಅನೇಕ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

error: