May 10, 2024

Bhavana Tv

Its Your Channel

ರವಿವಾರ ಹೊದಾಗಿ 205 ಜನರು ಸೋಂಕಿಟ್ರು ಪತ್ತೆಯಾಗಿದ್ದು, ಒಟ್ಟು 624 ಸಂಕ್ರೀಯ ಪ್ರಕರಣಗಳಿವೆ.

ತಾಲ್ಲೂಕಿನಾದ್ಯಂತ ವ್ಯಾಕ್ಸಿನ್ ಬಗ್ಗೆ ಬೇಡಿಕೆ ಹೆಚ್ಚಾಗಿದ್ದು ಒಟ್ಟು 367 ಮಂದಿ ವ್ಯಾಕ್ಸೀನ್ ಪಡೆದಿದ್ದಾರೆ,

ಹೊನ್ನಾವರ : ಶನಿವಾರ ಹಾಗೂ ರವಿವಾರದ ವಾರಾಂತ್ಯ ಲಾಕಡೌನ್‌ಗೆ ಸಾರ್ವಜನಿಕರಿಂದ ಹೊನ್ನಾವರ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ ಅಧಿಕಾರಿಗಳು ಮುನ್ನೆಚ್ಚರಿಕೆಯ ಸೂಚನೆಗಳು ನೀಡಿರುವುದರಿಂದ ರಸ್ತೆಗಳ ಮೇಲೆ ಜನರ ಓಡಾಟ ಇರಲಿಲ್ಲ. ಸಾಮಾನ್ಯವಾಗಿ ಬೆಳಿಗ್ಗೆ 6ಘಂಟೆಯಿAದ 10ಘಂಟೆಯವರೆಗೆ ಯಾವುದೇ ಓಡಾಟ ಕಂಡು ಬರಲಿಲ್ಲ. ಆದರೂ ಅನಾವಶ್ಕವಾಗಿ ಓಡಾಟ ನಡೆಸುತ್ತಿದ್ದ 6ಮಂದಿಗೆ ಪೋಲೀಸರು ದಂಡಹಾಕಿ ಕಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ಹತ್ತು ಕಂಟೈನ್ ಮೆಂಟ್ ಜೋನ್ ಗುರುತಿಸಲಾಗಿದೆ. ಪಟ್ಟಣದ ಬಜಾರ ರಸ್ತೆ, ರಾಯಲ್‌ಕೇರಿ, ಕೆ ಚ್ ಬಿ ಕಾಲೋನಿ ಹಾಗೂ ಪ್ರಭಾತ ನಗರದಲ್ಲಿ ಕಂಟೈನ್ ಮೆಂಟನ್ ಜೋನ್‌ಗಳನ್ನು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗಗಳಾದ ಕರ್ಕಿ ,ನವಿಲಗೋಣ, ಹೊಸಾಕುಳಿ, ಮೇಲಿನ ಇಡಗುಂಜಿ ಅಗ್ರಹಾರವನ್ನು ಕಂಟೈನ್‌ಮೆAಟ್ ಜೋನಗಳಾಗಿ ಘೋಷಿಸಿದ್ದಾರೆ.

          ರವಿವಾರ ಹೊದಾಗಿ  205 ಜನರು ಸೋಂಕಿಟ್ರು ಪತ್ತೆಯಾಗಿದ್ದು, ಒಟ್ಟು 624 ಸಂಕ್ರೀಯ ಪ್ರಕರಣಗಳಿವೆ. 561 ಜನರು ಮನೆಗಳಲ್ಲಿ,31 ಮಂದಿ ತಾಲ್ಲೂಕು ಆಸ್ಪತ್ರೆಯಲ್ಲಿ 29ಮಂದಿ ಇತರೆ ಆಸ್ಪತ್ರೆಗಳಲ್ಲಿ ಹಾಗೂ ಮೂವರು ಕೋವಿಡ್ ಕೆಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 105  ಸೋಂಕಿತರು ಮನೆಗಳಲ್ಲಿ ಹಾಗೂ ಆಸ್ಪತ್ರೆಗಯಿಂದಮೂವರು ಗುಣಮುಖರಾಗಿದ್ದಾರೆ. ತಾಲ್ಲೂಕಿನಾದ್ಯಂತ ವ್ಯಾಕ್ಸಿನ್ ಬಗ್ಗೆ ಬೇಡಿಕೆ ಹೆಚ್ಚಾಗಿದ್ದು ಒಟ್ಟು 367 ಮಂದಿ ವ್ಯಾಕ್ಸೀನ್ ಪಡೆದಿದ್ದಾರೆ,

ವರದಿ ; ವೆಂಕಟೇಶ ಮೇಸ್ತ ಹೊನ್ನಾವರ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: