May 10, 2024

Bhavana Tv

Its Your Channel

ಉತ್ತರ ಕನ್ನಡ, ವಾರದಲ್ಲಿ ಎರಡೇ ದಿನ ಖರೀದಿಗೆ ಅವಕಾಶ. ದಿನಾಂಕ 7-6-2021ತನಕ ಜಾರಿ

ಕಾರವಾರ ; ದಿನಾಂಕ 24-5-2021 ರಿಂದ 7-6-2021ರ ತನಕ ವಿಸ್ತರಿಸಲಾದ ಲಾಕ್ ಡೌನ್‌ಗೆ ಹೆಚ್ಚುವರಿಯಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಬದಲಾವಣೆ ಸೂಚಿಸಿದ್ದು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದಿನನಿತ್ಯದ ಅಗತ್ಯ ವಸ್ತುಗಳು, ತರಕಾರಿ ಮತ್ತು ದಿನಸಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ,


ಮದುವೆ ಕಾರ್ಯಗಳಿಗೆ ಅನುಮತಿ ನೀಡಲಾಗುವುದಿಲ್ಲ. ಸೂಕ್ತ ಗುರುತಿನ ಚೀಟಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ, ಈ ಮೇಲಿನ ಎಲ್ಲಾ ನಿಯಮವನ್ನು ಕಟ್ಟು ನಿಟ್ಟಾಗಿ ಮಾಸ್ಕ ಹಾಗೂ ಸಾಮಾಜಿಕ ಅಂತರ ಪಾಲನೆಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ,

error: