
ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ : ದಿನಕರ ವೇದಿಕೆ ಉತ್ತರಕನ್ನಡರವರ ಆಶ್ರಯದಲ್ಲಿ ಪಟ್ಟಣದ ಪಿ.ಎಮ್.ಜ್ಯೂನಿಯರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ” ದಿನಕರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ” ವನ್ನು ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರರವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.ಜಿಲ್ಲೆಯ ಹಿರಿಯ ಚೇತನ ದಿ.ದಿನಕರ ದೇಸಾಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಪ್ರಥಮ ವರ್ಷದ ” ದಿನಕರ ಶ್ರೀ ಪ್ರಶಸ್ತಿಯನ್ನು ” ಪ್ರಸಿದ್ದ ನಾಟಿ ವೈದ್ಯ ಹನುಮಂತ ಬೊಮ್ಮ ಗೌಡ ಅವರಿಗೆ ಪ್ರದಾನ ಮಾಡಿದರು.ಜಿಲ್ಲೆಯ ದನಿ ಇಲ್ಲದ ಸಮುದಾಯದವರನ್ನು ಅಕ್ಷರವಂತರನ್ನಾಗಿ ಮಾಡುವಲ್ಲಿ ಶ್ರಮಿಸಿದ ದಿನಕರ ದೇಸಾಯಿ ಹೆಸರಲ್ಲಿ ಇಡಲಾದ ಈ ಪ್ರಶಸ್ತಿ ಹಾಲಕ್ಕಿ ಸಮುದಾಯದ ಸಮಾಜಸೇವಕ ಹನುಮಂತ ಗೌಡರಿಗೆ ನೀಡಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಕೆನರಾ ವೆಲಫೇರ ಟ್ರಸ್ಟ್ ನ ಕೆ.ವಿ.ಶೆಟ್ಟಿ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ