April 26, 2024

Bhavana Tv

Its Your Channel

ಡಾ. ಸವಿತಾ ಕಾಮತ್ ಅವರ ೫೦ನೇ ಹುಟ್ಟುಹಬ್ಬ. ಲಸಿಕಾಕರಣದ ಕಟ್ಟಡಕ್ಕೆ ಎರಡು ತಿಂಗಳ ಸಂಬಳ ದೇಣಿಗೆ

ಭಟ್ಕಳ: ಕಳೆದ ಎರಡು ವರ್ಷಗಳಿಂದ ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ದಕ್ಷತೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ೫೦ನೇ ಹುಟ್ಟುಹಬ್ಬವನ್ನು ಸಾರ್ವಜನಿಕರು, ಆಸ್ಪತ್ರೆಯ ಹಿತೈಷಿಗಳು ಡಾ. ಸವಿತಾ ಕಾಮತ್‌ರಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಸಂತಸವನ್ನು ಹಂಚಿಕೊAಡ ಡಾ.ಸವಿತಾ ಕಾಮತ್ ಅವರು ತನ್ನ ಹುಟ್ಟುಹಬ್ಬದಂದೇ ಆಸ್ಪತ್ರೆಯ ಲಸಿಕಾಕರಣದ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭವನ್ನು ನಡೆಸುತ್ತಿರುವುದು ಸಂತಸ ತಂದಿದೆ. ನಾಗಯಕ್ಷೆ ಚಾರಿಟೇಬಲ್ ಟ್ರಷ್ಟನಿಂದ ನಿರ್ಮಾಣವಾಗುವ ಕಟ್ಟಡಕ್ಕೆ ತಮ್ಮ ಎರಡು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಪ್ರಮುಖರಾದ ನರೇಂದ್ರ ನಾಯಕ್, ರಾಮದಾಸ ಪ್ರಭು, ಶ್ರೀಕಾಂತ ನಾಯ್ಕ, ಮಹೇಂದ್ರ ನಾಯ್ಕ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: