May 15, 2024

Bhavana Tv

Its Your Channel

ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ, ಭಟ್ಕಳ ೨೧ನೇ ವಾರ್ಷಿಕ ಮಹಾಸಭೆ

  ಭಟ್ಕಳ ನಗರದ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ  ೨೦೨೦-೨೧ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ ೧೧-೧೨-೨೦೨೧ರಂದು ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿತ್ತು. ಸಂಘದ ಬಸ್ತಿ ಶಾಖಾ ವ್ಯವಸ್ಥಾಪಕರಾದ ಶ್ರೀ ನಿತ್ಯಾನಂದ ಶೆಟ್ಟಿ ಇವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಾರ್ಷಿಕ ವರದಿಯನ್ನು ಅಧ್ಯಕ್ಷರಾದ  ಶ್ರೀಧರ ಮಂಜು ಶೆಟ್ಟಿ ಇವರು ಮಂಡಿಸಿದರು. ಸಂಘವು ಕಳೆದ ವರ್ಷಾಂತ್ಯಕ್ಕೆ ೨೨೭೭ ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ ರೂ ೭೦.೮೪ ಲಕ್ಷಕ್ಕೆ ಏರಿರುತ್ತದೆ. ಆಕರ್ಷಕ ಬಡ್ಡಿದರದಲ್ಲಿ ಸಂಘವು ಠೇವುಗಳನ್ನು ಸ್ವೀಕರಿಸುತ್ತಿದ್ದು ವರ್ಷಾಂತ್ಯಕ್ಕೆ ಠೇವು ಸಂಗ್ರಹಣೆ ರೂ ೨೧೬೨.೩೫ ಲಕ್ಷದಷ್ಟಾಗಿದೆ. ದುಡಿಯುವ ಬಂಡವಾಳ ರೂ ೨೫೩೮.೭೬ ಲಕ್ಷದಷ್ಟಾಗಿದ್ದು, ವರದಿ ವರ್ಷದ ಕೊನೆಗೆ ಸಂಘವು ನೀಡಿರುವ ಎಲ್ಲಾ ವಿಧವಾದ ಸಾಲಗಳ ಮೊತ್ತ ರೂ ೧೭೬೧.೬೫ ಲಕ್ಷದಷ್ಟಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಸಂಘವು ವರ್ಷದ ಕೊನೆಗೆ ೯೭.೭೭% ರಷ್ಟು ವಸೂಲಾತಿ ಮಾಡಿರುತ್ತದೆ. ವರ್ಷದ ಕೊನೆಗೆ ರೂ ೮೧.೮೨ ಲಕ್ಷ ನಿವ್ವಳ ಲಾಭ ಗಳಿಸಿರುವ ಸಂಘವು ತನ್ನೆಲ್ಲಾ ಶೇರುದಾರ ಸದಸ್ಯರಿಗೆ ವರದಿಯ ವರ್ಷಕ್ಕೆ ೧೦% ರಷ್ಟು ಲಾಭಾಂಶವನ್ನು ಘೋಷಿಸಲಾಯಿತು.

          ಮಹಾಬಲೇಶ್ವರ ನಾರಾಯಣ ಶೆಟ್ಟಿ,  ಶಂಕರ ಎಂ ಶೆಟ್ಟಿ,  ನಾರಾಯಣ ರಾಮ ಕಲ್ಮನೆ,  ವೆಂಕಟೇಶ ವಾಮನ ಶೆಟ್ಟಿ,  ಮಹೇಶ ನಾಗೇಶ ಶೆಟ್ಟಿ,  ಮಂಜುನಾಥ ನಾರಾಯಣ ಶೆಟ್ಟಿ ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದು ಸರ್ವ ಸದಸ್ಯರ ಪರವಾಗಿ ಸಂಘದ ಅಭಿವೃದ್ದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಂಘಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ಎಲ್ಲಾ ಹಿತೈಷಿಗಳಿಗೂ ಕೃತಜ್ಞತೆಗಳನ್ನು ಅರ್ಪಿಸಿದ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ಸಮಿತಿಯ ಎಲ್ಲಾ ಸದಸ್ಯರ ಹಾಗೂ ಸರ್ವಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರು. 

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಾರಾಯಣ ಮಂಜುನಾಥ ಶೆಟ್ಟಿ, ನಿರ್ದೇಶಕರುಗಳಾದ ಗಣಪತಿ ವಿಠ್ಠಲ ಶೆಟ್ಟಿ, ರಾಧಾಕೃಷ್ಣ ಕುಪ್ಪಯ್ಯ ಶೆಟ್ಟಿ, ಗಿರೀಶ ಲೊಕೇಶ್ವರ ಶೆಟ್ಟಿ, ಶ್ರೀಧರ ತಿಮ್ಮಪ್ಪ ಶೆಟ್ಟಿ, ಕೃಷ್ಣಮೂರ್ತಿ ಶೇಷಗಿರಿ ಶೆಟ್ಟಿ, ಉದಯ ನಾಗೇಶ ಶೆಟ್ಟಿ, ಲಕ್ಷö್ಮಣ ಮಂಜಯ್ಯ ಶೆಟ್ಟಿ ಶ್ರೀಮತಿ ಉಷಾ ಉದಯ ಶೆಟ್ಟಿ ಹಾಗೂ ಶ್ರೀಮತಿ ಗೀತಾ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಗಣೇಶ ಎಮ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

error: