May 15, 2024

Bhavana Tv

Its Your Channel

ಮೂಡಬಿದ್ರೆಯಲ್ಲಿ ನಡೆದ ಜೋಡುಕೆರೆ ಕಂಬಳದಲ್ಲಿ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಭಟ್ಕಳದ ಪಿನ್ನುಪಾಲ್ ತಂಡ

ಭಟ್ಕಳ: ಗ್ರಾಮೀಣ, ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಕಂಬಳವೂ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಇದರ ಪ್ರಭಾವ, ಆಸಕ್ತಿ ಕಡಿಮೆಯಿದೆ. ಆದರೆ ಇವೆಲ್ಲದರ ನಡುವೆ ಮೂಡಬಿದ್ರೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಜೂನಿಯರ್ ವಿಭಾಗದ ೧೦೦ ಮೀಟರ ಓಟದಲ್ಲಿ ಭಟ್ಕಳದ ಎಚ್.ಎನ್ ನಿವಾಸ್ ಪಿನ್ನುಪಾಲ್ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದು ಭಟ್ಕಳದ ಕಂಬಳ ಆಸಕ್ತರಿಗೆ ಹೆಮ್ಮೆ ಹಾಗೂ ಸಂತಸ ಪಡುವಂತಾಗಿದೆ.

ಸಾಮಾನ್ಯವಾಗಿ ಓರ್ವ ವ್ಯಕ್ತಿ ೧೦೦ ಮೀ. ಸ್ಪರ್ಧೇಯಲ್ಲಿ ಆತನ ಸಾಮರ್ಥ್ಯದಲ್ಲಿ ಸತತ ಪರಿಶ್ರಮದಲ್ಲಿ ಓಟ ಓಡುವುದು ಶಾಲಾ ದಿನದ ಸ್ಪರ್ಧೇಯಿಂದ ಹಿಡಿದು ಒಲಿಂಪಿಕ್ಸ ತನಕ ನೋಡಿರುತ್ತೀರಿ. ಆದರೆ ಕಂಬಳದಲ್ಲಿ ಹಾಗಲ್ಲ, ಎರಡು ಕೋಣಗಳ ವೇಗದ ಓಟಕ್ಕೆ ಸಮನಾಗಿ ವ್ಯಕ್ತಿ ಅವರೆಡರ ಹಗ್ಗವನ್ನು ಹಿಡಿದು ೧೦೦ ಮೀ. ದೂರದವರೆಗೆ ೧೦.೧೫ ಸೆಕೆಂಡನಲ್ಲಿ ಓಡಿ ಚಿನ್ನ ಪಡೆಯುವುದು ಸಾಮಾನ್ಯದ ವಿಷಯವಲ್ಲ.

ಈಗ ಈ ಅಸಾಮಾನ್ಯ ವಿಷಯಕ್ಕೆ ಭಟ್ಕಳದ ಬೆಳಕೆಯ ೨೨ ವರ್ಷದ ಯುವಕ ಶಂಕರ ನಾಯ್ಕರ ಜೋಡುಕರೆ ಕಂಬಳ ಓಟವೂ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಮೂಲದಲ್ಲಿ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದು ಅರ್ಧದಲ್ಲಿಯೇ ತಂದೆಯ ಹೊಲ ಗದ್ದೆಗಳ ಕಾರ್ಯದಲ್ಲಿ ಆಸಕ್ತಿದಾಯಕ ದುಡಿಯುತ್ತಿದ್ದ ಶಂಕರಗೆ ಚಿಕ್ಕಂದಿನಿAದಲೂ ಗದ್ದೆಯಲ್ಲಿ ಉಳುವುದು ಓಟದಲ್ಲಿ ಪಾಲ್ಗೊಳ್ಳುವುದು ಹವ್ಯಾಸವಾಗಿತ್ತು. ಈ ಹವ್ಯಾಸಕ್ಕೊಂದು ಸರಿಯಾದ ತರಬೇತಿಯ ಅವಶ್ಯಕತೆಯು ಕ್ರಮೇಣ ಶಂಕರಗೆ ಲಭಿಸಿದ್ದು, ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆಲ್ಲುವಲ್ಲಿ ಜಿಲ್ಲೆ ಹಾಗೂ ತಾಲೂಕಿನ ಹೆಸರು ರಾಜ್ಯದಲ್ಲಿ ಪಸರಿಸಲು ಸಾಧ್ಯವಾಯಿತು.ದಕ್ಷಿಣ ಕನ್ನಡದಲ್ಲಿ ಕಂಬಳ ಓಟದ ಮಾದರಿ ಅಲ್ಲಿನ ಶಿಸ್ತು ಅರಿತುಕೊಳ್ಳಲು ಶಂಕರನಿಗೆ ಸಮಯ ಸಿಕ್ಕಿತ್ತು. ಮತ್ತೆ ಸತತ ಶ್ರಮ, ಕೆಸರು ಗದ್ದೆಯ ಓಟ, ಆಸಕ್ತಿಯಿಂದ ಇನ್ನಷ್ಟು ಪ್ರಬುದ್ಧ ಕಂಬಳದ ಓಟಗಾರನಾರಲು ಅನುಕೂಲವಾಯಿತು. ಕೇವಲ ಓಟವಷ್ಟೇ ಅಲ್ಲದೇ ದೇಹ ದಂಡನೆ ಹಾಗೂ ನಿದ್ರೆ ಆಹಾರ ಪದ್ದತಿಯ ಸೂಕ್ತ ಪಾಲನೆಯ ಜೊತೆಗೆ ಶಂಕರ ಚಿನ್ನಕ್ಕೆ ಮುತ್ತಿಕ್ಕಿದ್ದು ಭಟ್ಕಳಿಗರಾದ ನಾವೆಲ್ಲ ಹೆಮ್ಮೆ ಪಡುವಂತಹದ್ದೇ ಸರಿ.

ದಕ್ಷಿಣ ಕನ್ನಡ, ಉಡುಪಿ ಕಡೆಗಳಲ್ಲಿಯೂ ಸಹ ಶಂಕರ ಪದಕ ಗೆಲುವು ನಡೆಯುತ್ತಿದ್ದು ಅಲ್ಲಿಯೂ ಸಹ ಎರಡು ಬಾರಿ ಪದಕ ಗೆದ್ದ ಅನುಭವವಿತ್ತು. ಇವೆಲ್ಲವೂ ಈ ಬಾರಿ ಮೂಡಬಿದ್ರೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಜೂನಿಯರ್ ವಿಭಾಗದ ೧೦೦ ಮೀಟರ ಓಟದಲ್ಲಿ ಭಟ್ಕಳದ ಎಚ್.ಎನ್ ನಿವಾಸ್ ಪಿನ್ನುಪಾಲ್ ತಂಡದ ಲಕ್ಕಿ- ಪಾಂಡು ಜೋಡು ಕೋಣಗಳ ಸಾಥ್‌ನಿಂದ ಶಂಕರ ನಾಯ್ಕ ಹಾಗೂ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆಲ್ಲು ಸಾಧ್ಯವಾಯಿತು ಎಂದರೆ ತಪ್ಪಿಲ್ಲ. ಈ ಹಿಂದೆ ಸೆಮಿ ಫೈನಲನಲ್ಲಿ ೯.೫೦ ಸೆಕೆಂಡ ಅವಧಿಯಲ್ಲಿ ೧೦೦ ಮೀ. ಓಟವೂ ಸದ್ಯ ದಾಖಲೆಯಾಗಿಯೇ ಇದ್ದು, ಈ ಹಿಂದೆ ಸಹ ಶಂಕರ ನಾಯ್ಕ ಒಲಿಂಪಿಕ್ಸ ಓಟಗಾರ ಉಸೈನ್ ಬೋಲ್ಟ ವೇಗದ ದಾಖಲೆಯನ್ನು ಸಹ ಕಂಬಳದ ಓಟದಲ್ಲಿ ಮುರಿದ್ದು ಇವರ ಓಟಕ್ಕೆ ಇನ್ನಷ್ಟು ಮನ್ನಣೆ, ಪ್ರೋತ್ಸಾಹ, ಬೇಡಿಕೆ ಸಿಗುವಂತಾಗಬೇಕು. ಸತತ ೨ ದಿನಗಳ ಕಾಲ ನಡೆದ ಈ ಕಂಬಳದಲ್ಲಿ ೭ ಬಾರಿ ಕೋಣದೊಂದಿಗೆ ಓಟ ಮಾಡಿ ಚಿನ್ನದ ಪದಕ ಪಡೆಯುವಲ್ಲಿ ಬೆಳಕೆಯ ಶಂಕರ ನಾಯ್ಕ ಸಾಧನೆ ಯಾವುದೇ ಓಲಿಂಪಿಕ್ಸ ಓಟಗಾರನಿಗೂ ಕಡಿಮೆಯಿಲ್ಲ ಎಂಬoತಿದೆ.

ಇನ್ನು ಇವರ ತಂಡಕ್ಕೆ ಪ್ರಮುಖ ಆಕರ್ಷಣೆ ಹಾಗೂ ಶೋಭೆಯೆಂದರೆ ಪ್ರೀತಿದಾಯಕ ಜೋಡು ಕೋಣಗಳಾದ ಲಕ್ಕಿ ಮತ್ತು ಪಾಂಡು. ಕಂಬಳದ ಓಟಗಾರ ಶಂಕರ ನಾಯ್ಕ ಶ್ರಮದ ಜೊತೆಗೆ ಈ ಜೋಡಿ ಕೋಣಗಳ ಓಟವೂ ಸ್ಪರ್ಧೇಯ ವೀಕ್ಷಕರನ್ನು ನಿಬ್ಬೆರಗುವಂತೆ ಮಾಡಿದೆ. ಕಾರಣ ಜೂನಿಯರ್ ವಿಭಾಗದ ೧೦೦ ಮೀಟರ ಓಟದ ಸ್ಪರ್ಧೆಯಲ್ಲಿ ಒಟ್ಟು ೧೧೫ ಜೋಡಿ ಕೋಣಗಳು ಭಾಗಿಯಾಗಿದ್ದು. ಇವುಗಳನ್ನು ಹಿಂದಿಕ್ಕೆ ಚಿನ್ನದ ಪದಕ ಪಡೆದುಕೊಳ್ಳುವಲ್ಲಿ ಜೋಡಿ ಕೋಣಗಳಾದ ಲಕ್ಕಿ ಮತ್ತು ಪಾಂಡು ಅಬ್ಬರದ ಓಟವೂ ಪ್ರಮುಖವಾಗಿದೆ. ಕಳೆದ ೩ ವರ್ಷದಿಂದ ಈ ಕಂಬಳದಲ್ಲಿ ಭಾಗಿಯಾಗಿ ಅರ್ಧದಲ್ಲಿ ಸೋತು ಮನೆಗೆ ಬರುತ್ತಿದ್ದ ಪಿನ್ನುಪಾಲ್ ತಂಡವೂ ಈ ಬಾರಿ ಛಲ ಬಿಡದೇ ಚಿನ್ನ ಭೇಟೆ ಆಡುವಲ್ಲಿ ಯಶಸ್ವಿಯಾಗಿದೆ ಎಂದರೆ ಅದು ಅವರಲ್ಲಿನ ಶ್ರದ್ದೆಯೇ ಕಾರಣ. ಎಚ್. ಎನ್. ಪಿನ್ನುಪಾಲ ತಂಡದ ಮಾಲೀಕರಾದ ಶಂಕರ ನಾಯ್ಕ ಹಾಗೂ ಹೊನ್ನಪ್ಪ ನಾಯ್ಕ ಇವರ ಪದಕದ ಓಟವೂ ಸದ್ಯ ಭಟ್ಕಳ ಸೇರಿ ಉತ್ತಕ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹದಾಗಿದೆ.

error: