May 19, 2024

Bhavana Tv

Its Your Channel

ಪ್ರವಾದಿ ಅವಹೇಳನ ಮಾಡಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಮುಸ್ಲಿಮ್ ಧರ್ಮಗುರುಗಳ ಆಗ್ರಹ

ಭಟ್ಕಳ: ಪ್ರವಾದಿ ಮಹ್ಮದ್ ಪೈಗಂಬರ್ ಗೌರವವನ್ನು ಉಳಿಸಲು ನಾವು ಪ್ರಾಣ ಕೊಡಲೂ ಸಿದ್ಧರಿದ್ದು, ಪ್ರವಾದಿ ಅವಹೇಳನ ಮಾಡಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಭಟ್ಕಳದಲ್ಲಿ ಮುಸ್ಲಿಮ್ ಧರ್ಮಗುರುಗಳು ಆಗ್ರಹಿಸಿದ್ದಾರೆ.

ಗುರುವಾರ ಸಂಜೆ ಭಟ್ಕಳ ತಾಲೂಕಿನ ಮಜ್ಜಿಸೇ, ಇಸ್ಲಾವ ತಂಜೀಮ್ ಕಚೇರಿಯಲ್ಲಿ ಭಟ್ಕಳ ಮರ್ಕಝ್ ಇ ಖಾಲೀಫಾ ಜಮಾತ್ ಉಲ್ ಮುಸ್ಲಿಮೀನ್ ಮುಖ್ಯ ಖಾಜಿ ಮೌಲಾನಾ ಖಾಜಾ ಅಕ್ರಮಿ ಮದನಿ, ಜಮಾತ್ ಮುಸ್ಲಿಮಿನ್ ಮುಖ್ಯ ಖಾಜಿ ಮೌಲಾನಾ ಅಬ್ದುರಬ್, ಖತೀ ನದ್ವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾದಿ ಮಹ್ಮದ್ ಪೈಗಂಬರರಿಗೆ ಗೌರವವನ್ನು ಕೊಡದೇ ಇದ್ದರೆ ಇಸ್ಲಾಮ್ ನಂಬಿಕೆ ಅಪೂರ್ಣವಾಗುತ್ತದೆ. ಜಗತ್ತಿನ 100 ಘನ ವ್ಯಕ್ತಿತ್ವವುಳ್ಳವರ ಹೆಸರುಗಳನ್ನು ಪಟ್ಟಿ ಮಾಡುವುದಾದರೆ ಪ್ರವಾದಿ ಮಹ್ಮದ್ ಪೈಗಂಬರ್ ಮೊದಲ ವ್ಯಕ್ತಿಯಾಗಿ ನಿಲ್ಲುತ್ತಾರೆ ಪ್ರವಾದಿಗಳು ಪ್ರಪಂಚದ ಸಕಲ ಚರಾಚರಗಳಿಗೂ ಲೇಸನ್ನು ಬಯಸಿದವರಾಗಿದ್ದಾರೆ. ಕರುಣಾಮಯಿ ಪ್ರವಾದಿಗಳನ್ನು ಅವಹೇಳನ ಮಾಡುವುದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯ ಇಲ್ಲ. ಸರಕಾರ ಕೂಡಲೇ ಅಪರಾಧಿಗಳನ್ನು ಶಿಕ್ಷಿಸಬೇಕು
ಎಂದು ಒತ್ತಾಯಿಸಿದರು.
ಸರಕಾರ ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರೆ ಜನರು ದೇಶದಲ್ಲಿ ರಸ್ತೆಗೆ ಇಳಿಯುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ.ದಾರ್ಮಿಕ ನಾಯಕರನ್ನು ಅವಹೇಳನ ಮಾಡುವರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗುವ ಕಾನೂನು ಜಾರಿಗೆ ತರಬೇಕು ತರಬೇಕು, ಇಂತಹ ಘಟನೆ ಮರುಕಳಿಸುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು. ತಂಜೀಮ್ ಮುಖಂಡ ಹನೀಫ್ ಶಬಾಬ್, ಪ್ರವಾದಿಗಳ ಅವಹೇಳನ ಮಾಡಿದವರ ಪರ ದೇಶದಲ್ಲಿ ಕೆಲವರು ದನಿಗೂಡಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರವಾದಿ. ಅವಹೇಳನವನ್ನು ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ ನಡೆಸುವುದು ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಸಂಬAಧ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ ಇದರ ಅಧ್ಯಕ್ಷ ಅಝೀಜ್ ಉಗ್ರಹಮಾನ್, ಸಿದ್ಧಿಕ್ ಡಿಎಫ್, ಮೌಲಾನಾ ಅಬ್ದುಲ್ ಅಲೀಮ್, ಖತೀಬ್ ನದ್ವಿ, ಮೌಲಾನಾ ಓಸಾಮಾ ನದ್ವಿ, ಅಂಜುಮ್, ಜೈಲಾನಿ ಶಾಬಂದ್ರಿ, ಜಾಫರ್ ಮೊಟೇಶಮ್ ಮೊದಲಾದವರು ಉಪಸ್ಥಿತರಿದ್ದರು.

error: