May 13, 2024

Bhavana Tv

Its Your Channel

ಅಂಜುಮನ್ ಪಿಯು ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಶೇ.82.58 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಪೂರ್ವ ಕಾಲೇಜ್ ನ ದ್ವಿತೀಯ ಪಿ.ಯು ಪರೀಕ್ಷಾ ಫಲಿತಾಂಶ ಉತ್ತಮಗೊಂಡಿದ್ದು ಶೇ.82.58 ಫಲಿತಾಂಶದಾಖಲಾಗಿದೆಎAದು ಪ್ರಾಂಶುಪಾಲ ಯೂಸೂಫ್ ಕೋಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಶೇ.88.88, ವಿಜ್ಞಾನ ವಿಭಾಗದಲ್ಲಿ ಶೇ.76.31 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.87.25 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ಹಿಶಾಮ್‌ಖಾಝಿಯಾ ಶೇ.94.33, ಆಹ್ಮದ್ ಸಾಲೀಫ್ ಫಕರ್ದೆ ಶೇ.92.5, ಮುಹಮ್ಮದ್‌ಅಫ್ಫಾನ್ ಶೇ.92.5, ಮುಹಮ್ಮದ ನಫಾಫ್ ಮನೆಗಾರ್ ಶೇ.90.16 ಫಲಿತಾಂಶ ಪಡೆದುಕೊಂಡು ವಾಣಿಜ್ಯ ವಿಭಾಗದಲ್ಲಿಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮುಹಮ್ಮದ್‌ಝಯ್ಯಾನ್ ಖಾಶಿಮಜಿ ಶೇ.91.16, ಝುರೈಫ್‌ಆಹಮದ್ ಶೇ. 90.66, ಅಬ್ದುಲ್‌ರಹ್ಮಾನ್‌ರುಕ್ನುದ್ದೀನ್ ಶೇ.90 ಅಂಕ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿಅರ್ಬಾಝ್‌ಖಾನ್ ಶೇ.74.8, ಮಹೇಶ್ ನಾಯ್ಕ74.66 ಹಾಗೂ ಹಸನೈನ್ ಹೊಂಬೈಲ್ 74.33 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಲರು ಹಾಗೂ ಸಿಬ್ಬಂದಿ ವರ್ಗ ಅಭಿನಂಧಿಸಿದೆ.

error: