May 16, 2024

Bhavana Tv

Its Your Channel

ಭಟ್ಕಳದ ಶ್ರೀ ನಾಗಚೌಡೇಶ್ವರಿ ದೇವಸ್ಥಾನದಲ್ಲಿ, ಆಷಾಢ ಏಕಾದಶಿ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಸಂಪನ್ನ

ಭಟ್ಕಳ ತಾಲೂಕಿನ ಬೆಳ್ನಿ ಮೊಗೇರಕೇರಿ ಶ್ರೀ ನಾಗಚೌಡೇಶ್ವರಿ ದೇವಸ್ಥಾನದಲ್ಲಿ, ಆಷಾಢ ಏಕಾದಶಿ ಏಕಾಹ ಅಖಂಡ ಭಜನಾ ಕಾರ್ಯಕ್ರಮವು ನಿರಂತರ ೨೪ ಗಂಟೆಗಳ ಭಜನೆಯೊಂದಿಗೆ ಶೃದ್ದಾ ಭಕ್ತಿಯಿಂದ ಸಂಪನ್ನಗೊAಡಿತು.

“ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತು ಪಾಡಲು ನಿಲುವ, ನಿಂತರೆ ನಲಿವ, ನಲಿದರೆ ಒಲಿವೆ ನಾ ನಿಮಗೆಂಬ ಸುಲಭನೋ ಹರಿ”. ಎಂಬುದಾಗಿ ಭಜನೆಯ ಕುರಿತು ಶ್ರೀ ಜಗನ್ನಾಥ ದಾಸರು ಹೇಳಿದ್ದಾರೆ.

ಅಂದರೆ “ಅನಾರೋಗ್ಯ ವೃದ್ದಾಪ್ಯ ದಿಂದ ಮಲಗಿ ಭಜನೆಯನ್ನು ಹಾಡಿದರೆ, ಭಗವಂತ ತಾನೇ ಸಮೀಪ ಬಂದು ಕುಳಿತು ಆಲಿಸುವನು. ಯೋಗ್ಯ ಸ್ಥಳದಲ್ಲಿ ಕುಳಿತು ಹಾಡಿದರೆ ಭಗವಂತ ನಿಂತು ಸ್ವೀಕರಿಸುವನು. ನಿಂತು ಹಾಡಿದರೆ ಸಂತಸದಿAದ ನಲಿಯುವನು. ನಲಿದು ಮೈಮರೆತು ಹಾಡಿದರೆ ಭಗವಂತ ಮೆಚ್ಚಿ ಒಲಿಯುವನು.” ಎಂಬುದೇ ಇದರ ತಾತ್ಪರ್ಯ.
ದೇವರನ್ನು ಒಲಿಸಿಕೊಳ್ಳಲು ಸುಲಭದ ಮಾರ್ಗವೆಂದರೆ ಭಜನೆಯೊಂದೆ ಎಂಬುದು ದಾಸಶ್ರೇಷ್ಠರು ಕಂಡು ಹೇಳಿದ ಸತ್ಯ. ಇಂತಹ ಭಜನಾ ಸಂಕೀರ್ತನೆಯನ್ನು ಪ್ರತಿವರ್ಷವೂ ಶ್ರೀ ನಾಗಚೌಡೇಶ್ವರಿ ದೇವಸ್ಥಾನದಲ್ಲಿ ಶೃದ್ದೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆಯೇ ಈ ವರ್ಷವೂ ಆಷಾಢ ಏಕಾದಶಿಯಂದು ಬೆಳಿಗ್ಗೆ ೭ ಗಂಟೆಗೆ ದೀಪ ಸ್ಥಾಪನೆ ಮಾಡಿ ಭಜನೆ ಆರಂಭಿಸಿ, ಮಾರನೇ ದಿನ ಬೆಳಿಗ್ಗೆ ೭ ಗಂಟೆಯ ವರೆಗೆ ತಾಳವನ್ನು ನಿಲ್ಲಿಸದೆ, ನಿರಂತರ ೨೪ ಗಂಟೆಗಳ ಕಾಲ ಭಜನೆ ಮಾಡಲಾಯಿತು. ಕೆಲವು ಭಜನಾ ಮಂಡಳಿಯವರು ಕುಳಿತು ಭಜನೆ ಮಾಡಿದರೆ, ಇನ್ನು ಕೆಲವು ಭಜನಾ ಮಂಡಳಿಯವರು ದೀಪದ ಸುತ್ತಲೂ ಕುಣಿತ ಭಜನೆ ಮಾಡಿದರು. ಈ ಭಜನಾ ಕಾರ್ಯಕ್ರಮದಲ್ಲಿ ಊರಿನ ಹಾಗೂ ಪರಊರಿನ ಭಜಕರು, ವಿವಿಧ ವೃತ್ತಿಪರ ಭಜನಾ ತಂಡಗಳು ಮತ್ತು ಜನಪ್ರಿಯ ಗಾಯಕರು, ಸಾಥಿ ವಾದಕರು ಪಾಲ್ಗೊಂಡು ಶ್ರೀ ದೇವರ ಸಂಕೀರ್ತನೆ ಮಾಡಿದರು.

ವಿಶೇಷ ವರದಿ: ನರಸಿಂಹ ನಾಯ್ಕ್ ಹರಡಸೆ

error: