May 15, 2024

Bhavana Tv

Its Your Channel

ಇಂದಿನಿoದ ಅಗಸ್ಟ 29 ರವರೆಗೆ ಉಜಿರೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ

ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳಾದ ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತವು ಜುಲೈ ೧೩ ರಿಂದ ಪ್ರಾರಂಭಗೊAಡು ಅಗಸ್ಟ ೨೯ ರವರೆಗೆ ಉಜಿರೆಯ ಶ್ರೀರಾಮ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾಹಿತಿ ನೀಡಿದ್ದಾರೆ.

ನಾಮಧಾರಿ ಸಭಾಭವನದಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕುಲಗುರುಗಳಾದ ದಿವಂಗತ ಶ್ರೀ ಆತ್ಮಾನಂದ ಸರಸ್ವತಿಗಳು ಹಲವು ವರ್ಷಗಳ ಹಿಂದೆ ಹಿಂದುಳಿದ ಸಮಾಜದಲ್ಲಿ ಧಾರ್ಮಿಕವಾಗಿ ಮುಂದುವರಿಯಬೇಕು ಹಾಗೂ ಧಾರ್ಮಿಕ ಪ್ರಜ್ಞೆ ಮೂಡಿಸುವ ಸಂಭAದ ಚಾತುರ್ಮಾಸ್ಯ ಆಚರಣೆ ಮಾಡಬೇಕೆಂದು ಇಚ್ಚೆ ಹೊಂದಿದ್ದರು ಆದರೆ ಕಾಲ ಕೂಡಿ ಬಂದಿಲ್ಲ. ಈಗಿನ ನಮ್ಮ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಕಳೆದ ಮೂರು ವರ್ಷಗಳಿಂದ ಚಾತುರ್ಮಾಸ್ಯ ವೃತಾಚರಣೆಯನ್ನು ದೇವರಗುಡ್ಡ ಮಠದಲ್ಲಿ ಹಮ್ಮಿಕೊಳ್ಳುತ್ತಿದ್ದು ಜುಲೈ ೧೩ ರಿಂದ ಚಾತುರ್ಮಾಸ ವೃತ ಆರಂಭಗೊಳ್ಳಲಿದ್ದು ಅಗಸ್ಟ ೨೯ರಂದು ಕೊನೆಗೊಳ್ಳಲಿದೆ ಎಂದರು.
ಸ್ವಾಮೀಜಿಗಳು ಸಮಸ್ತ ಜನರ ಪರವಾಗಿ ಲೋಕಕಲ್ಯಾಣಕ್ಕಾಗಿ ಈ ಚಾತುರ್ಮಾಸ ವೃತವನ್ನು ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ನಮ್ಮ ನಾಮಧಾರಿ ಸಮಾಜದ ಎಲ್ಲರೂ ಸ್ವಾಮೀಜಿಗಳ ಈ ಚಾತುರ್ಮಾಸ್ಯ ವೃತಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಟ್ಕಳದ ಸಮಾಜ ಬಾಂದವರು ಜುಲೈ ೩೧ ರಂದು ಒಂದು ದಿನ ಸೇವೆ ಸಲ್ಲಿಸಲಿದ್ದಾರೆ. ನಾಮಧಾರಿ ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದರು.
ಹಿAದುಳಿದ ವರ್ಗದವರಿಗೆ ಚಾತುರ್ಮಾಸ್ಯ ವೃತಾಚರಣೆಯ ಕುರಿತು ತಿಳಿದುಕೊಳ್ಳಲು, ಪಾಲ್ಗೊಳ್ಳಲು ಇದೊಂದು ಅವಕಾಶವಾಗಿದ್ದು ಹಿಂದುಳಿದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಅವರು ಕರೆ ನೀಡಿದರು.
ಶಿರಾಲಿ ಸಾರದಹೊಳೆ ಶ್ರೀ ಹನುಮಂತ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ಅಗಸ್ಟ ೭ ರಂದು ಒಂದು ದಿನ ಶಿರಾಲಿ ಕೂಟದಿಂದ ಸೇವೆ ನಡೆಯಲಿದೆ. ಚಾತುರ್ಮಾಸ ವೃತವು ಹಿಂದುಳಿದ ವರ್ಗದವರಿಗೆ ಒಂದು ಸೌಭಾಗ್ಯವಾಗಿದ್ದು, ಎಲ್ಲ ಸಮಾಜದ ಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ, ಮಾಜಿ ಶಾಸಕ ಜೆ.ಡಿ. ನಾಯ್ಕ, ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಸದಸ್ಯ ಮುಕುಂದ ನಾಯ್ಕ ಸಾರದಹೊಳೆ, ಪ್ರಮುಖರಾದ ಭವಾನಿಶಂಕರ ನಾಯ್ಕ, ಕೆ.ಆರ್. ನಾಯ್ಕ, ಮಾಸ್ತಿ ನಾಯ್ಕ, ಈರಪ್ಪ ಗರ್ಡಿಕರ, ವಿಠ್ಠಲ್ ನಾಯ್ಕ, ವಿನಾಯಕ ನಾಯ್ಕ, ವೆಂಕಟೇಶ ನಾಯ್ಕ ತಲಗೋಡು, ಶಿವರಾಮ ನಾಯ್ಕ, ಶ್ರೀಧರ ನಾಯ್ಕ, ಗಿರೀಶ ನಾಯ್ಕ, ಸತೀಶಕುಮಾರ್ ನಾಯ್ಕ ಮುಂತಾದವರಿದ್ದರು.

error: