May 18, 2024

Bhavana Tv

Its Your Channel

ಅಂಜುಮನ್ ಪದವಿ ಕಾಲೇಜಿನಲ್ಲಿ ‘ಸ್ವ-ಉದ್ಯೋಗ ತರಬೇತಿ’ ಕಾರ್ಯಾಗಾರ

ಭಟ್ಕಳ: “ಸ್ವಾತಂತ್ರö್ಯ ಲಭಿಸಿ 75 ವರ್ಷಗಳಾದರು ಸಹ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçವಾಗಿದೆಯೇ ಹೊರತು ಅಭಿವೃದ್ಧಿ ಹೊಂದಿದ ರಾಷ್ಟçವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತೀಯರಲ್ಲಿ ಬಹುಸಂಖ್ಯಾತರು ದುಡಿಯುವ ವಯಸ್ಸಿನಲ್ಲಿ ದುಡಿಯದೇ ಇರುವುದೇ ಕಾರಣವಾಗಿದೆ” ಎಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ರುಡ್‌ಸೆಟ್ ಕೇಂದ್ರದ ಹಿರಿಯ ಉಪನ್ಯಾಸಕರಾದ ಕುತ್ಲೂರು ಕರುಣಾಕರ ಜೈನ್ ನುಡಿದರು.
ಶ್ರೀ ಕರುಣಾಕರ ಜೈನ್ ಸ್ಥಳೀಯ ಅಂಜುಮನ್ ಪದವಿ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಘಟಕವು ಹಮ್ಮಿಕೊಂಡ ಒಂದು ದಿನದ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಈ ಮೇಲಿನಿಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ವಿದೇಶಗಳಲ್ಲಿ ಯಾವುದೇ ಮಗು 15 ವರ್ಷ ಪೂರೈಸಿದ ಮೇಲೆ ಸ್ವಂತ ದುಡಿದು ಸ್ವಾವಲಂಬಿಯಾಗಿ ಬದುಕಲು ಆರಂಭಿಸುತ್ತದೆ. ಆ ಮೂಲಕ ಆ ಮಗು ತಾನು ಬೆಳೆಯುವುದರ ಜೊತೆಗೆ ತನ್ನ ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತದೆ ಎಂದು ಜೈನ್ ತಿಳಿಸಿದರು.
ಸ್ವಂತ ಉದ್ಯೋಗ ಮಾಡಬಯಸುವವರಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯಾವ ರೀತಿಯ ಅವಕಾಸಗಳಿವೆ, ಆ ಅವಕಾಶಗಳನ್ನು ಬಳಸಿಕೊಂಡು ಯುವಕ ಯುವತಿಯರು ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದೆಂಬುದನ್ನು ನಿದರ್ಶನಗಳ ಮೂಲಕ ಶ್ರೀ ಕರುಣಾಕರ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಬ್ರಹ್ಮಾವರದ ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಸ್ವಂತ ಉದ್ಯೋಗ ಮಾಡಲು ಬಯಸುವವರನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ತರಬೇತಿ ನೀಡುವ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ನೀಡುವ ತರಬೇತಿ ಸಂಪೂರ್ಣ ಉಚಿತವಾಗಿರುವುದರ ಜೊತೆಗೆ ಊಟ ವಸತಿಯನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ತಮ್ಮ ಸಂಸ್ಥೆಯಿAದ ತರಬೇತು ಪಡೆದು ಬಂದ ಸಾವಿರಾರು ಜನ ಸ್ವಾವಲಂಬಿಗಳಾಗಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದಿಂದ ಬದುಕುತ್ತಿರುವುದು ನಮ್ಮ ರುಡ್‌ಸೆಟ್ ಸಂಸ್ಥೆಗೆ ಸಾರ್ಥಕತೆಯ ಭಾವವನ್ನು ತಂದುಕೊಟ್ಟಿದೆ ಎಂದು ಶ್ರೀ ಕರುಣಾಕರ ಜೈನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಎಸ್. ಎ. ಇಂಡಿಕರ್ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ನಿಶ್ಚಿತವಲ್ಲ. ಅದಕ್ಕಾಗಿ ಸ್ವಂತ ಉದ್ಯೋಗ ಅಥವಾ ಉದ್ದಿಮೆಯನ್ನು ಸ್ಥಾಪಿಸುವುದರ ಮೂಲಕ ನಿರುದ್ಯೋಗಿಗಳಿಗೆ ನೀವೇ ಉದ್ಯೋಗ ನೀಡುವತ್ತ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಆರ್. ಎಸ್. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರಂಭದಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕರಾದ ಪ್ರೊ. ಗಾನಿಮ್ ಸರ್ವರನ್ನೂ ಸ್ವಾಗತಿಸಿದರೆ, ಕೊನೆಯಲ್ಲಿ ವಿದ್ಯಾರ್ಥಿ ಅಮೃತ ನಾಯಕ ವಂದಿಸಿದರು. ವಿದ್ಯಾರ್ಥಿ ನಯನಾ ಮೊಗೇರ ಅತಿಥಿಗಳನ್ನು ಪರಿಚಯಿಸಿದರೆ, ಕುಮಾರ್ ನವೀನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

error: