May 18, 2024

Bhavana Tv

Its Your Channel

ಜುಲೈ 27- 28 ರಂದು ಅದ್ದೂರಿ ಸಂಪ್ರದಾಯದ ಭಟ್ಕಳ ಮಾರಿ ಜಾತ್ರೆ ಆರಂಭ, ಆಮಟೆ ಮರದ ಮೂಹೂರ್ತದೊಂದಿಗೆ ಭಟ್ಕಳದ ಮಾರಿ ಜಾತ್ರೆಗೆ ಅಧಿಕೃತ ಚಾಲನೆ

ಭಟ್ಕಳ:  ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಟ್ಕಳದ ಐತಿಹಾಸಿಕ  ಮಾರಿ ಜಾತ್ರೆಯು ಜುಲೈ 27 ಮತ್ತು 28 ರಂದು ನಡೆಯಲಿದ್ದು, ಇದರ ಪೂರ್ವ ತಯಾರಿಯಾಗಿ ಮಾರಿ ಮೂರ್ತಿ ತಯಾರಿಕಾ ಹರಕೆ ಹುಳಿ ಆಮಟೆ ಮರವನ್ನು ಗುರುತಿಸಿ ವಿಶೇಷ ಪೂಜೆ ಸಲ್ಲಿಸಿ ಮರದ ಮೂಹೂರ್ತ ಮಾಡುವುದರೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಪ್ರತಿ ವರ್ಷ ಆಷಾಢ ಅಮವಾಸ್ಯೆಯ ಮೊದಲ ಬುಧವಾರ ಮತ್ತು ಗುರುವಾರ ಮಾರಿ ಜಾತ್ರೆ ನಡೆಯುವುದು ಮೊದಲಿಂದಲೂ ನಡೆದು ಬಂದ ಪದ್ಧತಿಯಾಗಿದ್ದು, ಈ ಸಂಬAಧ ರಘುನಾಥ ನಾಯಕ ಸ್ಟ್ರೀಟ್ ನಲ್ಲಿರುವ ಪಡಿಯಾರ ಮನೆಯ ಎದುರು ಭಾಗದ ಓಣಿಯಲ್ಲಿರುವ ಹುಳಿ ಆಮಟೆ ಮರವನ್ನು ಮೂರ್ತಿ ತಯಾರಿಸುವ ಮಣ್ಕುಳಿ  ಆಚಾರ್ಯರ ಮನೆಯ ಹಿರಿಯರು ಹಾಗೂ ಮೂರ್ತಿ ಕೆತ್ತನೆಯ ರೂವಾರಿ ಮಾರುತಿ ಆಚಾರ್ಯರು ಅವರು ಮಾರಿ ಮೂರ್ತಿಗೆ ಬೇಕಾದ ಹುಳಿ ಅಮಟೆ ಮರವನ್ನು ಪೂಜಿಸಿ ನಂತರ ಮರವನ್ನು ತುಂಡರಿಸಲು ಬೇಕಾಗುವ  ಸಲಕರಣೆಗಳ ಸಹಿತ ಪೂಜೆ ಸಲ್ಲಿಸಿದರು. ಆ ಮೂಲಕ ಮಾರಿ ಮೂರ್ತಿ ಕೆತ್ತನೆಯ ಮೂಹೂರ್ತವನ್ನು ನೆರವೇರಿಸಿದರು.
ಜಿಲ್ಲೆಯ ಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ತಾಲೂಕಿನ ಮಾರಿ ಜಾತ್ರೆಗೆ ಕಳೆದ ವರ್ಷದಂತೆ ಕೋವಿಡ ಮಾರ್ಗಸೂಚಿಯ ಕಾನೂನು ಇಲ್ಲದೇ ಈ ವರ್ಷ ಯಾವುದೇ ಆತಂಕ ಇಲ್ಲದೇ ಅದ್ದೂರಿಯಾಗಿ ಸಕಲ ಧಾರ್ಮಿಕ ವಿಧಿ ವಿಧಾನದಲ್ಲಿ ನಡೆಯಲಿದೆ.

ಜುಲೈ 27 ಮತ್ತು 28 ರಂದು ಮಾರಿ ಜಾತ್ರೆಯು ನಿಗದಿಯಾಗಿದ್ದು, ಮಂಗಳವಾರದಿAದಲೇ ಮಾರಿ ಮೂರ್ತಿ ಕೆತ್ತನೆ ಕಾರ್ಯವೂ ಮರದ ಮೂಹೂರ್ತದ ದಿನದಿಂದ ಮರ ಇದ್ದ ಸ್ಥಳದಿಂದಲೇ ಕೆತ್ತನೆ ಕಾರ್ಯದಲ್ಲಿ ಮೂರ್ತಿ ತಯಾರಕರು ಸಿದ್ದಗೊಂಡಿದ್ದಾರೆ. ಅತ್ತ ಮಾರಿಕಾಂಬಾ ದೇವಸ್ಥಾನದಲ್ಲಿಯೂ ಸಹ ಎರಡು ದಿನ ನಡೆಯುವ ಅದ್ದೂರಿ ಮಾರಿ ಪೂಜೆಯ ತಯಾರಿಕೆ ಅವಶ್ಯಕ ಕೈಂಕರ್ಯಗಳು ನಡೆಯಲಿದೆ.

ಮಾರಿ ಮೂರ್ತಿ ತಯಾರಿಕೆ ಮರದ ಪೂಜೆಯ ನಂತರ ಮಾತನಾಡಿದ  ಮಣ್ಕುಳಿಯ ಮಾರುತಿ ಆಚಾರ್ಯ ‘ ಆಷಾಢ ಮಾಸದ ಹುಣ್ಣಿಮೆ ನಂತರ ಬರುವ ಮಂಗಳವಾರದAದು ಮರದ ಮೂಹೂರ್ತ ನೆರವೇರಿಸಿದ ನಂತರ ಶ್ರೀ ದೇವಿಯ ಬಿಂಬವು ಮೂಡುವ ರೀತಿಯಲ್ಲಿ ಪ್ರಾಥಮಿಕವಾಗಿ ಒಯ್ಯಲು ಅನೂಕೂಲವಾಗುವ ರೀತಿಯಲ್ಲಿ ಮೂರ್ತಿಯನ್ನು ಸಿದ್ದಪಡಿಸಿಕೊಳ್ಳಲಿದ್ದೇವೆ. ಪೂರ್ಣ ಪ್ರಮಾಣದ ಮೂರ್ತಿಯಾಗಿ ನಿರ್ಮಿಸಲು ಶುಕ್ರವಾರದಂದು ಮಣ್ಕುಳಿಯ ಆಚಾರ್ಯರ ಮನೆಯ ಗದ್ದುಗೆಗೆ ಒಯ್ಯಲಾಗುವುದು. ನಂತರದ ಆಚಾರ್ಯರ ಮನೆಯಲ್ಲಿ 4 ದಿನಗಳಲ್ಲಿ ಸಕಲ ಶುದ್ದತೆಯಲ್ಲಿ ಸಂಪೂರ್ಣವಾದ ಮೂರ್ತಿ ಕೆತ್ತನೆ ಮಾಡಿ ಮಂಗಳವಾರದAದು ರಾತ್ರಿ ದೇವಿಗೆ ವಿಶೇಷವಾಗಿ ಸಿಂಗರಿಸಿ ಸುಹಾಸಿನಿ ಪೂಜೆಯನ್ನು ಮಾಡಲಿರುವುದು ಆಚಾರ್ಯ ಮನೆತನದವರು ತಲತಲಾಂತರದಿAದ ನಡೆಸಿಕೊಂಡು ಬಂದAತಹ ಪದ್ಧತಿಯಾಗಿದೆ.
ಮಾರನೇ ದಿನ ಬುಧವಾರ ಬೆಳಗಿನ ಜಾವದ ಪೂಜೆಯನ್ನು  ಸಲ್ಲಿಸಿ ನಂತರ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗೆ ದೇವಿಯ  ಮೂರ್ತಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದರು. 

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಸುರೇಂದ್ರ ಭಟ್ಕಳಕರ, ಸುರೇಶ ಆಚಾರ್ಯ, ಶಂಕರ ಶೆಟ್ಟಿ ಸೇರಿದಂತೆ ಆಚಾರ್ಯರ ಮನೆ ಸದಸ್ಯರು, ಮರ ತುಂಡರಿಸಿ ಕೊಡುವ ಮಣ್ಕುಳಿಯ ಮಾರುತಿ ಆಚಾರ್ಯರ ಕುಟುಂಬದ ಸದಸ್ಯರು, ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು

error: