May 19, 2024

Bhavana Tv

Its Your Channel

ಭಟ್ಕಳ ಭಾಗದ ಕಡಲತೀರದಲ್ಲಿ ರಾಶಿ ರಾಶಿ ಗೊಬ್ರ ಮೀನು

ಭಟ್ಕಳ: ಗಾಳಿ, ಮಳೆಯಿಂದಾಗಿ ಬೋಟುಗಳು ಮೀನುಗಾರಿಕೆಗೆ ಇಳಿಯದೆ ಬಂದರುಗಳಲ್ಲಿ ಲಂಗರು ಹಾಕಿರೋದು ಒಂದ್ಕಡೆಯಾದ್ರೆ, ಭಟ್ಕಳ ಭಾಗದ ಕಡಲತೀರಗಳಲ್ಲಿ ರಾಶಿ ರಾಶಿ ಗೊಬ್ರ ಮೀನು ದೊರೆತು ಅಚ್ಚರಿಗೆ ಕಾರಣವಾಗಿದೆ.

ಹೌದು, ಜಿಲ್ಲೆಯಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ಮತ್ತೆ ಹೆಚ್ಚಾಗಿದ್ದು, ಆಗಸ್ಟ್ 11ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಇದರಿಂದಾಗಿ ಮೀನುಗಾರರು ಕಡಲಿಗೆ ಇಳಿಯದೆ, ತಮ್ಮ ಬೋಟುಗಳನ್ನ ಬಂದರುಗಳಲ್ಲೇ ಲಂಗರು ಹಾಕಿ ಮಳೆ-ಗಾಳಿ ಕಡಿಮೆಯಾಗುವುದನ್ನ ಕಾದುಕುಳಿತಿದ್ದಾರೆ. ಈ ನಡುವೆ ಭಟ್ಕಳ ತಾಲೂಕಿನ ಜಾಲಿ, ಮುರುಡೇಶ್ವರ, ಮಾವಿನಕುರ್ವಾ ಬಂದರು ಸೇರಿದಂತೆ ವಿವಿಧೆಡೆ ಗೊಬ್ರ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿವೆ. ಸಣ್ಣ ಮರಿ ಮೀನುಗಳು ಇವಾಗಿದ್ದು, ಈ ಭಾಗದಲ್ಲಿ ಮುರಿಯ ಅಂತಲೂ ಇದಕ್ಕೆ ಕರೆಯುತ್ತಾರೆ.

ಈ ಮೀನುಗಳು ಈ ಸಂದರ್ಭದಲ್ಲಿ ಹೆಚ್ಚಾಗಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತಿರುತ್ತವೆ. ಆದರೆ ಈ ರೀತಿ ದಡಕ್ಕೆ ಬಂದು ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ತನ್ನಿಂದ ತಾನೆ ಅಲೆಗಳ ಜೊತೆಗೆ ದಡಕ್ಕೆ ಬಂದು ಬೀಳುತ್ತಿದ್ದ ಈ ಮೀನುಗಳನ್ನ ಹಿಡಿಯಲು ಕಡಲತೀರಗಳಲ್ಲಿ ಜನರ ದಂಡೇ ನೆರೆದಿತ್ತು. ದಡಕ್ಕೆ ಮೀನುಗಳು ಬರುತ್ತಿರುವ ಸುದ್ದಿ ತಿಳಿದು ಅನೇಕರು ಕಡಲತೀರಗಳತ್ತ ಧಾವಿಸಿದ್ದು, ನೂರಾರು ಮೀನುಗಳನ್ನ ಹಿಡಿದು ಬಾಡೂಟಕ್ಕೆ ಕೊಂಡೊಯ್ದಿದ್ದಾರೆ.
ಈ ರೀತಿ ಮೀನುಗಳು ದಡಕ್ಕೆ ಬಂದು ಬೀಳುತ್ತಿರುವುದು ಹವಾಮಾನ ವೈಪರೀತ್ಯದ ಸಂಕೇತ ಕಾರಣ ಎಂಬುದು ಮೀನುಗಾರರು ಹಾಗೂ ಕಡಲಜೀವ ಶಾಸ್ತ್ರಜ್ಞರು ಎನ್ನುತ್ತಿದ್ದಾರೆ.

error: