May 16, 2024

Bhavana Tv

Its Your Channel

ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಗುರುಗಳ ಆಶೀರ್ವಾದ ಪಡೆದ ಉ.ಕ ವಿವಿಧ ನಾಮಧಾರಿ ಸಮಾಜ

ಭಟ್ಕಳ:- ಚಾತುರ್ಮಾಸ್ಯದ 26 ನೇ ದಿನ ರವಿವಾರದಂದು ಧರ್ಮಸ್ಥಳದ ಶ್ರೀ ಗುರುದೇವ ಮಠದಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ವಿವಿಧ ನಾಮಧಾರಿ ಸಮಾಜದವರು ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಾಮಧಾರಿ ಸಮಾಜದ ಬಂಧುಗಳು ಉಪಸ್ಥಿತಿಯಲ್ಲಿ ಪಾದುಕಾ ಪೂಜೆ ನೆರವೇರಿತು. ಹೊನ್ನವರ ನಾಮಧಾರಿ ಸಂಘದ ಮುಕಂಡರಾದ ಟಿ ಟಿ ನಾಯ್ಕ ದಂಪತಿಗಳು ಗುರುಗಳ ಪಾದಸೇವೆ ಸಮಾಜದ ಪರವಾಗಿ ನೇರವೇರಿಸಿದರು, ವಾಮನ ನಾಯ್ಕ ಮಂಕಿ, ಎಮ್ ಆರ್ ನಾಯ್ಕ ವಕೀಲರು, ಎಲ್ ಆರ್ ನಾಯ್ಕ ವಕೀಲರು, ಶೇಖರ ನಾಯ್ಕ, ಎಮ್ ಆರ್ ನಾಯ್ಕ, ಆರ್ ಹೆಚ್ ನಾಯ್ಕ ಮುಂತಾದ ಪ್ರಮುಖರು ಹಾಜರಿದ್ದು ಗುರುಗಳ ದರ್ಶನ ಪಡೆದರು.

ಭಟ್ಕಳದ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳು ತಮ್ಮ ಆಧ್ಯಕ್ಷರಾದ ಈರಪ್ಪ ನಾಯ್ಕ ಗರಡಿಕರ ಇವರ ನೇತ್ರತ್ವದಲ್ಲಿ ಗುರುಗಳ ಪಾದ ಪೂಜೆ ನೇರವೇರಿಸಿದರು, ನಿರ್ದೇಶಕರುಗಳಾದ ಶ್ರೀಧರ ನಾಯ್ಕ, ಪರಮೇಶ್ವರ ನಾಯ್ಕ, ಗಣಪತಿ ನಾಯ್ಕ ತಲಾಂದ, ಗಣೇಶ ನಾಯ್ಕ, ಆನಂದ ನಾಯ್ಕ, ರಾಜೇಶ ದೇವಾಡಿಗಾ, ದಿನೇಶ ಗೊಂಡ, ಮಾದೇವ ನಾಯ್ಕ ಹೊಸಮನೆ ಹಾಗೂ ಮುಖ್ಯಕಾರ್ಯನಿರ್ವಾಹಕ ರಮೇಶ ನಾಯ್ಕ ಉಪಸ್ಥಿತರಿದ್ದರು.

ಶಿರಾಲಿ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನ ಸಾರದಹೊಳೆ ಕೂಟದವರಿಂದ ಸಹ ರವಿವಾರ ಗುರುಗಳ ಪಾದ ಪೂಜೆ ನೆರವೇರಿತು, ಕೃಷ್ಣ ನಾಯ್ಕ ಮತ್ತು ದಂಪತಿಗಳು ಪಾದ ಪೂಜೆ ನೇರವೇರಿಸಿದರು, ಈ ಸಂದರ್ಭದಲ್ಲಿ ಸದಾನಂದ ನಾಯ್ಕ ದಂಪತಿಗಳು, ಚಂದ್ರಕಾAತ ನಾಯ್ಕ ದಂಪತಿಗಳು ಮತ್ತು ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಬದಲ್ಲಿ ಶಿರ್ಸಿಯಿಂದ ಬೀಮಣ್ಣ ನಾಯ್ಕ ಮತ್ತು ಸಂಗಡಿಗರು ಮತ್ತು ಉದಯ ನಾಯ್ಕ ಡಿಎಪ್‌ಒ ದಂಪತಿಗಳು ಗುರುಗಳ ಪಾದ ಪೂಜೆ ನೇರವೇರಿಸಿದರು,
ಹೊನ್ನಾವರದ ಉಪ್ಪೋಣಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರಾದ ರವಿ ನಾಯ್ಕ ದಂಪತಿಗಳು ಹಾಗೂ ಭಾವನಾ ಟಿವಿಯ ಭವಾನಿಶಂಕರ ದಂಪತಿಗಳು ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ವಿವಿಧ ಭಜನಾ ತಂಡದವರಿAದ ಭಜನೆಗಳು ನಡೆದವು, ವಿಶೇಷವಾಗಿ ಹೊನ್ನಾವರದ ಮಾರುತಿ ನಾಯ್ಕ ಹೆಬೈಲ್ ಇವರ ತಂಡದಿAದ ಭಕ್ತಿಸುಧೆ ಕಾರ್ಯಕ್ರಮ ನಡೆಯಿತು ಸಹಗಾಯನದಲ್ಲಿ ಶ್ರೀಕಾಂತ ನಾಯ್ಕ, ಕೀ ಬೋರ್ಡನಲ್ಲಿ ನವಿನ ಶೇಟ್ ಬಣಸಾಲೆ ಹಾಗೂ ತಬಲಾದಲ್ಲಿ ಹರೀಶ ಶೇಟ್ ಸಾಥ ನೀಡಿದರು.

error: