May 17, 2024

Bhavana Tv

Its Your Channel

ನೆರೆಹಾವಳಿಯಿಂದ ಸಂತಸ್ತçರಿಗೆ ತಕ್ಷಣದ ಸ್ಪಂದನೆ ದೊರಕಿದ್ದರಿಂದ ಭಾರೀ ಅನಾಹುತ ತಪ್ಪಿದೆ -ಶಾಸಕ ಸುನಿಲ್ ನಾಯ್ಕ

ಭಟ್ಕಳ: ಭೀಕರ ನೆರೆಹಾವಳಿಯಿಂದ ಸಂತಸ್ತçರಿಗೆ ತಕ್ಷಣದ ಸ್ಪಂದನೆ ದೊರಕಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.

ಅವರು ಭಟ್ಕಳ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾ ಗೋಷ್ಟಿ ನಡಸಿ ಮಾತನಾಡುತ್ತಿದ್ದರು. ನೆರೆಹಾವಳಿಯ ಕುರಿತು ದೂರವಾಣಿ ಕರೆ ಬಂದ ತಕ್ಷಣ ಮನೆಯಿಂದ ಹೊರ ಬಂದು ಪ್ರಥಮವಾಗಿ ಮಣ್ಕುಳಿ ಭಾಗಕ್ಕೆ ತಲುಪಿ ಕಾರ್ಯಕರ್ತರೊಂದಿಗೆ ಅನೇಕರ ರಕ್ಷಣೆಗೆ ತೊಡಗಲಾಯಿತು, ಅಲ್ಲಿಯ ಪರಿಸ್ಥಿತಿ ನೋಡಿ ಒಮ್ಮೇಲೆ ಮಾತೆ ಹೊರಡದಂತಾಯಿತು ಎಂದ ಅಚರು ಮುಟ್ಟಳ್ಳಿಯಲ್ಲಿ ಮನೆಯೊಂದು ಕುಸಿದು ನಾಲ್ವರು ಮನೆಯೊಳಗೆ ಸಿಲುಕಿರುವ ಸುದ್ದಿ ತಿಳಿದು ತಕ್ಷಣ ಧಾವಿಸಿ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತಾದರೂ ಅವರು ಮೃತ ಪಟ್ಟಿದ್ದಾರೆನ್ನುವುದು ತಿಳಿದು ತೀವ್ರ ಆತಂಕವಾಯಿತು. ತಕ್ಷಣ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಆರ್. ಅಶೋಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಷಯ ತಿಳಿಸಿ ಕಾರ್ಯೋನ್ಮುಖನಾಗಿರುವಾಗ ಖುದ್ದು ಮುಖ್ಯಮಂತ್ರಿಗಳೇ ಬಂದು ನೆರೆಹಾವಳಿಯಿಂದ ಸಂತ್ರಸ್ತçರಾದವರಿಗೆ ಸಾಂತ್ವನ ಹೇಳುವುದಾಗಿ ಭರವಸೆಯನ್ನು ಕೊಟ್ಟಂತೆ ಆ.3ರಂದು ನನ್ನ ಕ್ಷೇತ್ರಕ್ಕೆ ಬಂದು ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ 5 ಲಕ್ಷದಂತೆ 20 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದ್ದು ಅಲ್ಲದೇ ಈ ಭಾಗದಲ್ಲಿ ಹಾನಿಯಾದ ಅಂಗಡಿಗಳಲ್ಲಿನ ವಸ್ತುಗಳಿಗೆ, ರಸ್ತೆ, ಕಂಪೌAಡ್ ಗೋಡೆಗಳಿಗೆ ಕೂಡಾ ಪರಿಹಾರ ವದಗಿಸುವ ಭರವಸೆಯನ್ನು ನೀಡಿದ್ದಾರೆ. ಇದು ಈ ಭಾಗದ ತೊಂದರೆಗೊಳಗಾದವರಿಗೆ ತೀರಾ ಅನುಕೂಲವಾಯಿತು ಎಂದರು.

ನೆರೆಹಾವಳಿಯ ಸಮಯದಲ್ಲಿ ಖುದ್ದು ಬಂದು ಜನರ ಸಂಕಷ್ಟಕ್ಕೆ ಸ್ಪಂಧಿಸಿದ ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರು ಹಾಗೂ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರು, ತನ್ನೆಲ್ಲ ಕಾರ್ಯಕರ್ತರಿಗೆ ಅಭಿನಂದಿಸುವುದಾಗಿಯೂ ಹೇಳಿದರು.
ಮಳೆಹಾನಿಯಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ 20 ಲಕ್ಷ ಪರಿಹಾರ, 88 ಮನೆಗಳು ಹಾನಿಯಾಗಿದ್ದು 50 ಮನೆಗಳಿಗೆ ಪರಿಹಾರ, 4483 ಮನೆಗಳಿಗೆ ನೀರು ನುಗ್ಗಿದ್ದು 3890 ಮನೆಗಳಿಗೆ ಪರಿಹಾರ, 365 ಅಂಗಡಿಗಳಿಗೆ ನೀರು ನುಗ್ಗಿದ್ದು 135 ಅಂಗಡಿಗಳಿಗೆ ಪರಿಹಾರ ನೀಡುವ ಕಾರ್ಯ ದಿನಾಂಕ 7 ತನಕ ಮಾಡಲಾಗಿದ್ದು 36 ದೋಣಿಗಳು, 107 ಬಲೆಗಳು ನಾಶವಾಗಿದ್ದು ಅವುಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಅಧ್ಯಕ್ಷ ಸುಬ್ರಾಯ ದೇವಡಿಗ, ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಭಾಸ್ಕರ ದೈಮನೆ, ದಿನೇಶ ನಾಯ್ಕ, ಮೋಹನ ನಾಯ್ಕ, ಸುಬ್ರಾಯ ಜೆ. ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

error: