November 1, 2024

Bhavana Tv

Its Your Channel

ಕಟಗಾರಕೊಪ್ಪ ಗ್ರಾಮದಲ್ಲಿ ಹೊಸ್ಮಕ್ಕಿ ರಸ್ತೆಯ ಮಧ್ಯದಲ್ಲಿ ಸುರಂಗ ಮಾರ್ಗದಂತಹ ಭಾರೀ ಗಾತ್ರದ ಹೊಂಡ

ಭಟ್ಕಳ: ಕಳೆದ ಆ.1 ಮತ್ತು 2ರಂದು ಸುರಿದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿ ಮನೆವಾರ್ತೆ ವಸ್ತುಗಳು ಹಾನಿಯಾಗಿದ್ದು ಒಂದೆಡೆಯಾದರೆ, ಅಂಗಡಿಗಳು, ಅಕ್ಕಿ ಗಿರಣಿಗಳು, ಶಾಲೆಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ನೀರು ನುಗ್ಗಿ ಅನಾಹುತ ಸೃಷ್ಟಿಸಿದ್ದರೆ, ಕಟಗಾರಕೊಪ್ಪ ಗ್ರಾಮದಲ್ಲಿನ ಹೊಸ್ಮಕ್ಕಿ ರಸ್ತೆಯ ಮಧ್ಯದಲ್ಲಿ ಒಂದು ಸುರಂಗ ಮಾರ್ಗದಂತಹ ಭಾರೀ ಗಾತ್ರದ ಹೊಂಡ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಹೊಸ್ಮಕ್ಕಿ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಆರಂಭದಲ್ಲಿ ಸಣ್ಣ ಹೊಂಡ ಕಾಣಿಸಿಕೊಂಡಿದ್ದು ಇಂದು ಬೃಹತ್ ಗಾತ್ರಕ್ಕೆ ತಿರುಗಿ ಜನರ ಗಮನ ಸೆಳೆಯುತ್ತಿದ್ದರೆ, ಮುಂದೆ ಭಾರೀ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆಯೇ ಎನ್ನುವ ಭಯ ಕೂಡಾ ಕಾಡುತ್ತಿದೆ. ಸುಮಾರು ಸುಮಾರು 30 ಮೀಟರಿಗೂ ಹೆಚ್ಚು ಆಳ ಮತ್ತು ಅಷ್ಟೇ ನಿಖರವಾಗಿ ಗುಂಡಿಯಾಗಿದ್ದು ಬಾವಿಯಾಕಾರವಾಗಿದ್ದರೂ ಕೂಡಾ ಸುರಂಗದAತೆ ಭಾಸವಾಗುತ್ತಿದ್ದು ಹಿಂದೆ ಯಾವುದೋ ರಾಜರ ಕಾಲದಲ್ಲಿ ಸುರಂಗ ಮಾರ್ಗವಿದ್ದುದು ಈಗ ತೆರೆದುಕೊಂಡಿತ್ತೇ ಎನ್ನುವ ಸಂಶಯ ಕೂಡಾ ಬಾರದೇ ಇರದು.
ಅಗಲ ಸುಮಾರು 15 ಅಡಿ ಇದ್ದು ಕೆಳಭಾಗದಿಂದ ನೀರಿನ ಜುಳುಜುಳು ಶಬ್ದ ಕೇಳಿ ಬರುತ್ತಿರುವುದರಿಂದ ಹಿಂದೆ ಇದ್ದ ಯಾವುದೋ ಒಂದು ನದಿ ಮತ್ತ ತನ್ನ ಹರಿವನ್ನು ಪ್ರಾರಂಭಿಸಿದೆಯೇ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸುರಂಗ ಮಾರ್ಗ ಎನ್ನುವ ಸಂಶಯ ಅಲ್ಲಿನ ನಿವಾಸಿಗಳದ್ದಾಗಿದೆ. ಮಳೆಗೆ ರಸ್ತೆಯಲ್ಲಿ ದಿಢೀರ್ ಬೃಹತ್ ಗಾತ್ರದ ಹೊಂಡ ತನ್ನಷ್ಟಕ್ಕೇ ನಿರ್ಮಾಣವಾಗಿರುವುದು ಸುತ್ತಮುತ್ತಲಿನ ಜನರಲ್ಲೂ ಅಚ್ಚರಿ ಜೊತೆಗೆ ಭಯಭೀತರನ್ನಾಗಿಸಿದೆ. ಈ ಸುರಂಗ ಮಾತ್ರ ಎಲ್ಲಿಯ ತನಕ ಇದೆ. ಇದರ ಹುಟ್ಟು ಮತ್ತು ಅಂತ್ಯವನ್ನು ಕಾಣದೇ ಇದ್ದರೆ ಮುಂದೆ ಮತ್ತೇನೋ ಅನಾಹುತ ಸಂಭವಿಸಬಹುದು ಎನ್ನುವುದು ಊರವರ ಆತಂಕವಾಗಿದೆ.
ಒಟ್ಟಾರೆ ಹೊಸ್ಮಕ್ಕಿ ರಸ್ತೆಯಲ್ಲಿ ಭಾರೀ ಮಳೆಗೆ ಉಂಟಾಗಿರುವ ಬಾವಿಯ ರೀತಿಯ ಸುರಂಗ ಎಲ್ಲರನ್ನೂ ಆಕರ್ಷಿಸುತ್ತಿದ್ದು, ಇದು ಯಾವ ಕಾರಣದಿಂದ ನಿರ್ಮಾಣವಾಗಿದೆ ಎನ್ನುವುದನ್ನು ತಜ್ಞರು ಭೇಟಿ ನೀಡಿ ಪರಿಶೀಲಿಸಿ ತಿಳಿದುಕೊಂಡು ಜನತೆಗೆ ತಿಳಿಸುವ ಅಗತ್ಯತೆ ಇದೆ. ಕಟಗಾರಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಭೂ ಕುಸಿತವಾಗಿದೆ. ಮಹಾಮಳೆಗೆ ಬೆಟ್ಕೂರು ಕಿರಿಯ ಪ್ರಾಥಮಿಕ ಶಾಲೆಯ ಬಾವಿ ಮತ್ತು ಹೊಸ್ಮಕ್ಕಿ ಬಾಬು ಹೆಗಡೆಯವರ ತೋಟದ ಕಾಲುವೆ ಉಕ್ಕಿ ಹರಿದು ಎಲ್ಲರ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಟಗಾರಕೊಪ್ಪದ ಹೊಸ್ಮಕ್ಕಿ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ದೊಡ್ಡ ಹೊಂಡ ಬಿದ್ದಿದ್ದು, ಇದು 30 ಮೀಟರ್ ಗೂ ಹೆಚ್ಚು ಆಳವಿದ್ದಂತೆ ಕಾಣುತ್ತಿದೆ. ಕೆಳಭಾಗದಲ್ಲಿ ನೀರಿನ ಶಬ್ದ ಕೇಳಿಬರುತ್ತಿದ್ದು, ಸ್ಥಳೀಯರಲ್ಲಿ ಒಂದು ಕಡೆ ಕುತೂಹಲ, ಮತ್ತೊಂದು ಕಡೆ ಆತಂಕವೂ ಉಂಟಾಗಿದೆ.

error: