May 17, 2024

Bhavana Tv

Its Your Channel

ಕೇರಳದ ರಾಜಧಾನಿಯಿಂದ ಲಂಡನ್‌ಗೆ ಸೈಕಲ್ ಅಭಿಯಾನ

ಭಟ್ಕಳ : ಫಯೀಸ್ ಅಶ್ರಫ್ ಅಲಿ ಎಂಬುವವರು ಇತ್ತೀಚಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸುವ ಮೂಲಕ ಕೇರಳದ ರಾಜಧಾನಿಯಿಂದ ಲಂಡನ್‌ಗೆ ತಮ್ಮ ಸೈಕಲ್ ಅಭಿಯಾನವನ್ನು ಆರಂಭಿಸಿದ್ದಾರೆ.

ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಯಾತ್ರೆಗೆ ಚಾಲನೆ ನೀಡಿದ್ದರು. ಅಲ್ಲಿ ಅವರು ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಿದ್ದಾರೆ. ರೋಟರಿ ಮಿಷನ್‌ನ ಎಂಡ್ ಪೋಲಿಯೊ ನೌ, ಸಂಘರ್ಷ ಪರಿಹಾರ ಮತ್ತು ಶಾಂತಿ ನಿರ್ಮಾಣವನ್ನು ಉತ್ತೇಜಿಸುವುದು, ಜಾಗತಿಕವಾಗಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ಸದ್ಗುಣಗಳು ಮತ್ತು ಮಲಯಾಳಂನ ಸೌಂದರ್ಯ ಮತ್ತು ಕ್ಯಾಂಪಸ್‌ಗಳಲ್ಲಿ ಝೀರೋ ಕಾರ್ಬನ್ ಎಮಿಷನ್ ಮತ್ತು ಆಂಟಿ ಡ್ರಗ್ ಕೇಂದ್ರೀಕರಿಸುವ ನಿಟ್ಟಿನಲ್ಲಿ ತಮ್ಮ ಅಭಿಯಾನ ಉದ್ದೇಶಿಸಿದ್ದಾರೆ.
ಸುಮಾರು ೪೫೦ ದಿನಗಳಲ್ಲಿ ಪ್ರಪಂಚದಾದ್ಯAತ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನ ಸಾರುವುದು ಇವರ ಉದ್ದೇಶವಾಗಿದೆ. ಅಲಿ ಅವರು ೩೫ ದೇಶಗಳಲ್ಲಿ ೩೦,೦೦೦ ಕಿ.ಮೀ ಕ್ರಮಿಸಿ ಸುಮಾರು ೪೫೦ ದಿನಗಳಲ್ಲಿ ಲಂಡನ್ ತಲುಪುವ ನಿರೀಕ್ಷೆಯಿದೆ.
ಅವರು ಮಾರ್ಗ ಮಧ್ಯೆದಲ್ಲಿ ವಿದ್ಯಾರ್ಥಿ ಗುಂಪುಗಳೊAದಿಗೆ ಚರ್ಚೆಗಳು ಮತ್ತು ಪ್ರಸ್ತುತಿಗಳನ್ನು ಯೋಜಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಲಕ್ಕುಲತ್ತೂರ್‌ನ ಫಯೀಸ್ ಅಸ್ರಫ್ ಅಲಿ ಅವರು ೩೫ ದೇಶಗಳು, ೫೦೦ ಸ್ಥಳಗಳು, ೧೫೦ ಶಾಲೆಗಳು ಮತ್ತು ೨೫ ವಿಶ್ವವಿದ್ಯಾನಿಲಯಗಳನ್ನು ಸವಾರಿಯ ಸಮಯದಲ್ಲಿ ಕವರ್ ಮಾಡುವ ಯೋಜನೆಯನ್ನು ಹೊಂದಿದ್ದಾರೆ.
ಅಲಿ ೩೫ ದೇಶಗಳಲ್ಲಿ ೩೦,೦೦೦ ಕಿಲೋಮೀಟರ್ ಕ್ರಮಿಸಿ ೪೫೦ ದಿನಗಳಲ್ಲಿ ಲಂಡನ್ ತಲುಪುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಅವರಿಗೆ ವೀಸಾ ನೀಡದ ಕಾರಣ, ಸೈಕ್ಲಿಸ್ಟ್ ತನ್ನ ಪ್ರವಾಸವನ್ನ ಕೈಗೊಳ್ಳುವುದಿಲ್ಲ.
ಸೈಕಲ್ ಮೂಲಕ ಮುಂಬೈ ತಲುಪಿದ ನಂತರ, ಅಲಿ ಅವರು ಓಮನ್‌ಗೆ ವಿಮಾನವನ್ನು ಏರುತ್ತಾರೆ ಮತ್ತು ಅಲ್ಲಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸುವರು . ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕುವೈತ್, ಇರಾಕ್, ಇರಾನ್ ಮತ್ತು ಟರ್ಕಿ ಸೇರಿದಂತೆ ದೇಶಗಳಲ್ಲಿ ಪ್ರಯಾಣಿಸುತ್ತಾರೆ.
ಅವರು ಲಂಡನ್ ತಲುಪುವ ಮೊದಲು ಬಲ್ಗೇರಿಯಾ, ರೊಮೇನಿಯಾ, ಉಕ್ರೇನ್, ಆಸ್ಟ್ರಿಯಾ, ಇಟಲಿ, ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಯುರೋಪಿಯನ್ ದೇಶಗಳ ಮೂಲಕ ಪೆಡಲ್ ಮಾಡುತ್ತಾರೆ ಎಂದು ಅವರು ಹೇಳಿದರು.
೩೪ ವರ್ಷದ ಯುವಕ ಐಟಿ ಮೇಜರ್ ವಿಪ್ರೋದಲ್ಲಿ ತನ್ನ ಕೆಲಸವನ್ನು ತೊರೆದ ನಂತರ ವರ್ಷಗಳ ಹಿಂದೆ ಸೈಕಲ್ ದಂಡಯಾತ್ರೆಯನ್ನು ಪ್ರಾರಂಭಿಸಿದರು. ಅವರ ಮೊದಲ ಏಕವ್ಯಕ್ತಿ ಪ್ರವಾಸವು ೨೦೧೯ ರಲ್ಲಿ ಅವರ ಸ್ಥಳೀಯ ಜಿಲ್ಲೆ ಕೋಝಿಕೋಡ್‌ನಿಂದ ಸಿಂಗಾಪುರಕ್ಕೆ ಆಗಿತ್ತು.
ಭಟ್ಕಳದಲ್ಲಿ ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಸ್ವಾಗತಿಸಿ, ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಬಿ.ಇಬ್ರಾಹಿಂ, ಟಿಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಇಮ್ಶಾದ್ ಮುಕ್ತೇಸರ, ಸಮಾಜ ಸೇವಕ ನಜೀರ್ ಕಾಸಿಮಿಜಿ, ನೂರ್ ಮಸೀದಿ ಕಾರ್ಯದರ್ಶಿ ಜೀಶಾನ್ ಖತೀಬ್, ಫರ್ಹಾನ್ ಖತೀಬ್, ಬಿಎಂವೈಎಫ್ ಸದಸ್ಯ ಫೈಸಲ್ ಅರ್ಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: