May 17, 2024

Bhavana Tv

Its Your Channel

ಶಿರಾಲಿ ಸಾರದಾಹೊಳೆ ಶ್ರೀ ಹಳೇಕೋಟೆ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಭಟ್ಕಳ: ಹಿಂದುಳಿದ ಸಮಾಜದವರಿಗೆ ಬಲ ತುಂಬುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವನ್ನು ಸ್ಥಾಪಿಸುವಂತೆ ಹಿಂದುಳಿದ ಸಮಾಜಕ್ಕೆ ಸೇರಿರುವ ಶಾಸಕರೆಲ್ಲರೂ ಮುಖ್ಯಮಂತಿಗಳನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದು. ಸರಕಾರ ನಮ್ಮೆಲ್ಲರ ಆಶಯವನ್ನು ಈಡೇರಿಸುವ ವಿಶ್ವಾಸ ಇದೆ ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹೇಳಿದರು.

ತಾಲೂಕು ಆಡಳಿತ. ಭಟ್ಕಳ, ತಾಲೂಕು ಪಂಚಾಯತ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಜಾಲಿ, ಮಾವಳ್ಳಿ ಹಾಗೂ ಸೂಸಗಡಿ ಹೋಬಳಿಯ ನಾಮಧಾರಿ ಸಮಾಜ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸಂಘ’ ಭಟ್ಕಳ ಇವರ ಸಂಯುಕ್ತ ಆಶಯದಲ್ಲಿ ತಾಲೂಕಿನ ಶಿರಾಲಿ ಸಾರದಾಹೊಳೆ ಶ್ರೀ ಹಳೇಕೋಟೆ ಸಭಾಭವನದಲ್ಲಿ ನಡೆದ
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸರಕಾರ ಗುರುಗಳ ಹೆಸರಿನಲ್ಲಿ ತಲಾ ರು.30 ಕೋ. ವೆಚ್ಚದಲ್ಲಿ ವಸತಿ ಶಾಲೆಯನ್ನು ಆರಂಭಿಸಲಾಗಿದ್ದು ಭಟ್ಕಳದಲ್ಲಿಯು ಕಲ್ಪಿಸಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಆಗಿನ ಕಾಲದಲ್ಲಿಯೇ ಆನೇಕ ಹೋರಾಟಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿದರು. ಮಹಿಳೆಯರ ಸಂಕಟಕ್ಕೂ ಸ್ಪಂದಿಸಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವಾದರು ಎಂದು ವಿವರಿಸಿದರು.
ಸಾಹಿತ್ಯಿ ಸುಮುಖಾನಂದ ಜಲವಳ್ಳಿ ಮಾತನಾಡಿ ಹಿಂದುಳಿದ ವರ್ಗದವರಿಗೆ ಸ್ವಾಭಿಮಾನ, ಸ್ವಾವಲಂಬಿ ಬದುಕು ನೀಡಿರುವ ನಾರಾಯಣ ಗುರುಗಳು, ಆಧ್ಯಾತವನ್ನೇ ಉಸಿರಾಗಿರಿಸಿಕೊಂಡು ಯಾವುದೇ ಸಂಘರ್ಷ ಇಲ್ಲದೇ ಕ್ರಾಂತಿ ಮಾಡಿದರು, ದೇವರು, ಧರ್ಮ ಏನು ಎನ್ನುವುದನ್ನು ಜನರಿಗೆ ಕಲಿಸಿಕೊಟ್ಟರು ಎಂದರು.

ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದರು
ತಹಶೀಲ್ದಾರ ಡಾ ಸುಮಂತ್ ಎಲ್ಲರನ್ನೂ ಸ್ವಾಗತಿಸಿದರು ತಾಪಂ ಕಾರ್ಯನಿರ್ವಹಣಾಧಿ ಕಾರಿ ಪ್ರಭಾಕರ ಚಿಕ್ಕನಮನೆ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ, ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ನಾಯ್ಕ, ಸಾರದಾಹೊಳೆ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ, ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನದ ಮೊಕ್ತಸರ ಸುಬ್ರಾಯ ನಾಯ್ಕ, ಶ್ರೀ ನಾರಾಯಣ ಗುರು ವಿಚಾರವೇದಿಕೆ ಬೆಂಗಳೂರು ಇದರ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ನಾಯ್ಕ,
ಖಾದಿ ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮುಕುಂದ ನಾಯ್ಕ, ಬ್ರಹ್ಮಶ್ರೀ ನಾರಾಯಣ ಗುರು ಸಂಘ ಭಟ್ಕಳ. ಇದರ ಅಧ್ಯಕ್ಷ ಮನಮೋಹನ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಪೂರ್ವದಲ್ಲಿ ಶಿರಾಲಿ ಪೇಟೆಯಿಂದ ಶ್ರೀ ಹಳೇಕೋಟಿ ಹನುಮಂತ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು, ದೇವಸ್ಥಾನದ ಸಭಾಭವನದಲ್ಲಿ ಗುರುಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

error: