May 18, 2024

Bhavana Tv

Its Your Channel

ಚುಟುಕು ಬ್ರಹ್ಮ ಡಾ.ದಿನಕರ ದೇಸಾಯಿ ಸಂಸ್ಮರಣೆ : ಸಂಪನ್ನ.

ಭಟ್ಕಳ ತಾಲೂಕಾಕನ್ನಡ ಸಾಹಿತ್ಯ ಪರಿಷತ್ತು, ಜನತಾ ಸಂಯುಕ್ತ.ಪ.ಪೂ.ಕಾಲೇಜು ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ದಿನಕರ ದೇಸಾಯಿ ಸಂಸ್ಮರಣೆ ಕಾರ್ಯಕ್ರಮ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಸಂಪನ್ನ ಗೊಂಡಿತು.

ಪೂರ್ವ ವಿದ್ಯಾರ್ಥಿ ಪರಿವಾರದ ಗೌರವಾಧ್ಯಕ್ಷ ಡಿ.ಜೆ.ಕಾಮತ್ ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿ ಮಾತನಾಡಿ ದಿನಕರರು ಸಾಹಿತಿಯಾಗಿ ಮಾತ್ರವಲ್ಲ ಸಂಸದರಾಗಿ, ಹೋರಾಟಗಾರರಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅನೇಕರ ಬದುಕನ್ನು ಬೆಳಗಿದ್ದಾರೆ. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವದ ದಿನಕರರು ಚುಟುಕು ಬ್ರಹ್ಮನಾಗಿ ನಾಲ್ಕು ಸಾಲುಗಳ ಚೌಕಟ್ಟಿನಲ್ಲಿ ಸಮಾಜದ ಎಲ್ಲ ಸ್ತರಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಮೂಲಕ ಸಹಸ್ರಾರು ವ್ಯಕ್ತಿಗಳ ಬಾಳಿನಲ್ಲಿ ಬೆಳಕನ್ನು ಚೆಲ್ಲಿ ನಿಜವಾದ ಅರ್ಥದಲ್ಲಿ ದಿನಕರರಾಗಿ ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಸುಪಾಲ ಅಮೃತ ರಾಮರಥ ವಹಿಸಿದ್ದರು. ಸಾಹಿತಿ ಮಾನಾಸುತ ಸಾಹಿತ್ಯ ಪರಿಷತ್ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಭಾಷಣ,ಪ್ರಬಂಧ,ಗೀತಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಸ್ವರಚಿತ ಚುಟುಕು ವಾಚಿಸಿ ದಿನಕರ ದೇಸಾಯಿಯವರಿಗೆ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾದ ಉಪಸ್ಥಿತರಿಸ್ದ ಕಸಾಪ ಮಾಜಿ ಅಧ್ಯಕ್ಷ ಶಂಕರ ನಾಯ್ಕ, ಎನ್.ಐ.ಟಿ.ಕೆ.ಪ್ರಾಧ್ಯಾಪಕ ಜೋರ ಗೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಆರ್.ವಿ.ಸರಾಫ್, ಮುಖ್ಯಾಧ್ಯಾಪಕಿ ಆಶಾ ಭಟ್, ಮಿತಾ ರಾಮರಥ ಉಪಸ್ಥಿತರಿದ್ದರು. ಸಾಹಿತಿ ನಾರಾಯಣ ಯಾಜಿ ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ ನೂರು ಅಂಕಗಳಿಸಿದ ಜನತಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವೈಯಕ್ತಿಕ ನಗದು ಬಹುಮಾನವನ್ನು ಸಾಹಿತ್ಯ ಪರಿಷತ್ ಆಯೋಜಿಸುವ ಕಾರ್ಯಕ್ರಮದಲ್ಲಿ ನೀಡುವುದಾಗಿ ತಿಳಿಸಿದರು. ಆರಂಭದಲ್ಲಿ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ದಿನಕರ ದೇಸಾಯಿಯವರ ಬದುಕು ಸಾಧನೆಗಳ ಕುರಿತು ಮಾತನಾಡಿದರಲ್ಲದೇ ಚುಟುಕು ವಾಚಿಸಿ, ಗೀತಗಾಯನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರೆ ಉಪನ್ಯಾಸಕ ಹೊನ್ನಪ್ಪಯ್ಯ ಗುನಗ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಆಶಾ ಭಟ್ ವಂದಿಸಿದರು.ಉಪನ್ಯಾಸಕ ಟಿ.ಬಿ.ಮಡಿವಾಳ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

error: