May 18, 2024

Bhavana Tv

Its Your Channel

ಭಟ್ಕಳದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 53.26 ಲಕ್ಷ ರೂಪಾಯಿ ಲಾಭ, ವಾರ್ಷಿಕ ಮಹಾಸಭೆಯಲ್ಲಿ ತಾಲೂಕಿನ 16 ರೈತರಿಗೆ ಸನ್ಮಾನ

ಭಟ್ಕಳ- ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ. ಭಟ್ಕಳ ಇದರ 2021-22 ನೆ ಸಾಲಿನ 56 ನೆ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ,ಸಹಕಾರಿ ಧುರೀಣ ಈರಪ್ಪ ಎಂ ಗರ್ಡಿಕರ್ ಅಧ್ಯಕ್ಷತೆಯಲ್ಲಿ ಭಟ್ಕಳದ ಶ್ರೀ ವೀರಾಂಜನೆಯ ಸಭಾಂಗಣದಲ್ಲಿ ಸೆಪ್ಟೆಂಬರ್ 10 ಶನಿವಾರ ಶೇರುದಾರರ ಸಮ್ಮುಖದಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ರಮೇಶ್ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ನಂತರ ಸಂಘದ 2221-22 ನೆ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ನಮ್ಮ ಸಂಘವು 46.91 ಲಕ್ಷ ರೂ. ನಿಧಿಯನ್ನು ಹೊಂದಿದೆ, ಸಂಘವು 37.58 ಕೋಟಿ ರೂ. ಠೇವಣಿ ಹೊಂದಿದೆ, ಸಂಘವು ಆಡಿಟ್ ವರದಿಯಲ್ಲಿ” ಬಿ”ಶ್ರೇಣಿ ಪಡೆದಿದೆ, ಈ ವರ್ಷದಲ್ಲಿ ಸಂಘವು 53.26 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ವ್ಯವಸಾಯ ಸೇವಾ ಸಹಕಾರಿ ಸಂಘದ ಈ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಭಟ್ಕಳ ತಾಲೂಕಿನ 16 ಬಡ ರೈತರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಸನ್ಮಾನಗೊಂಡ ಮುಂಡಳ್ಳಿಯ ಹಿರಿಯ ರೈತ ಗೋವಿಂದ ಅವರು ಮಾತನಾಡಿ ಭಟ್ಕಳ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಬಡ ರೈತರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಈ ಸಂಘದ ಕಾರ್ಯವನ್ನು ಹೊಗಳಿದರು.
ಸಂಘದ ನಿರ್ದೇಶಕ ಶ್ರೀಧರ್ ನಾಯ್ಕ ಅಸರಕೇರಿ ವಂದಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ನಿರ್ದೇಶಕ ಮಾದೇವ ನಾಯ್ಕ , ಉಪಾಧ್ಯಕ್ಷ ಪರಮೇಶ್ವರ್ ನಾಯ್ಕ, ನಿರ್ದೇಶಕರಾದ ರಾಜೇಶ್ ದೇವಡಿಗ, ಆನಂದ್ ನಾಯ್ಕ, ಗಣಪತಿ ನಾಯ್ಕ, ವೆಂಕಟ್ರಮಣ ಮೊಗೇರ್, ದೀಪಾ ನಾಯ್ಕ, ಸುರೇಶ್ ನಾಯ್ಕ , ಗಣೇಶ್ ನಾಯ್ಕ, ದಿನೇಶ್ ಗೊಂಡ, ಲಕ್ಷ್ಮಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: