May 15, 2024

Bhavana Tv

Its Your Channel

ಆಂಗ್ಲೋ ಉರ್ದು ಹೈಸ್ಕೂಲ್ ಮೈದಾನದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಹಾಗೂ ವಿವಿಧ ಸ್ಪರ್ಧೆ

ಭಟ್ಕಳ:-ಭಟ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ , ಸರಕಾರಿ ನಿವೃತ್ತ ನೌಕರ ಸಂಘ ಇವರ ಸಹಯೋಗದಲ್ಲಿ ಭಟ್ಕಳದ ಆಂಗ್ಲೋ ಉರ್ದು ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಏರ್ಪಡಿಸಲಾದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ವಿವಿಧ ಸ್ಪರ್ಧೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ ಡಿ ಆಚಾರ್ಯ ಉದ್ಘಾಟಿಸಿದರು.

ಉಪಸ್ಥಿತರಿದ್ದ ಭಟ್ಕಳ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಎಂ ಆರ್ ನಾಯ್ಕ ಮಾತನಾಡಿ. ಹಿರಿಯ ನಾಗರಿಕರು ಕೀಳರಿಮೆ, ಹಿಂಜರಿಕೆ ಬಿಟ್ಟು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಒತ್ತಡ ರಹಿತವಾದ ಆರಾಮದ ಬದುಕು ಹಿರಿಯ ನಾಗರಿಕರದ್ದಾಗಬೇಕು. ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಅಷ್ಟೇ ಅಗತ್ಯವಿದೆ. ಹಿರಿಯ ನಾಗರಿಕರ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಆನಂದಕ್ಕೆ ಭಜನೆ, ಭಗವಂತನ ಸ್ಮರಣೆ, ವ್ಯಾಯಾಮವೂ ಮುಖ್ಯ ಎಂದ ಅವರು ಸರಕಾರ ಹಿರಿಯ ನಾಗರಿಕರ ದಿನ ಆಚರಿಸುವುದರ ಮೂಲಕ ಅವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಹಿರಿಯ ನಾಗರಿಕರು ಸದಾ ಆನಂದವಾಗಿದ್ದು,ಬದುಕನ್ನು ಸುಂದರವಾಗಿ ಅನುಭವಿಸಬೇಕೆಂದು ಅವರು ಕರೆ ನೀಡಿದರು. ಶಿಶು ಅಭಿವೃದ್ಧಿ ಅಧಿಕಾರಿ ಸುಶೀಲಾ ಮೊಗೇರ, ಹಿರಿಯ ನಾಗರಿಕರಾದ ಕೆ ಆರ್ ನಾಯ್ಕ, ಪಾರೂಕ್ ಮಾಸ್ಟರ್, ಎ ಎ ಘನಿ, ಐ ಡಿ ಖಾನ, ಗಜಾನನ ನಾಯ್ಕ, ಜಿ ಎಸ್ ವೈದ್ಯ, ವಿ ಎನ್ ಶೆಟ್ಟಿ, ಗುರುದಾಸಿ ಮೊಗೇರ, ಜಿ ಎನ್ ನಾಯ್ಕ,ಗುಬ್ಬಿ ಶೆಟ್ಟಿ, ಕರ್ಕಿ, ನಾರಾಯಣ ದೇವಡಿಗ, ಎಂ ಡಿ ನಾಯ್ಕ, ಅಬ್ದುಲ್ ಖಾದರ್, ಶಾರದಾ ದೇವಡಿಗ, ಟಿ ಡಿ ಗೊಂಡ, ಶಾರದಾ ಎಸ್ ಬೋಕಿ ಮುಂತಾದವರಿದ್ದರು. ಶ್ವೇತಾ ಬೋಮ್ಕರ್ ಸ್ವಾಗತಿಸಿ, ನಿರೂಪಿಸಿದರು.
ಹಿರಿಯ ನಾಗರಿಕರಿಗೆ ನಡಿಗೆ, ಹಾಡು, ಏಕಪಾತ್ರ ಅಭಿನಯ,ಬಕೆಟ್‌ನಲ್ಲಿ ರಿಂಗ್ ಎಸೆಯುವುದು ಮುಂತಾದ ಸ್ಪರ್ಧೆ ಏರ್ಪಡಿಸಲಾಗಿತ್ತು.

error: