May 15, 2024

Bhavana Tv

Its Your Channel

ಭಟ್ಕಳ ತಾಲೂಕು ಕಸಾಪದಿಂದ ಸಮೂಹ ಗೀತ ಗಾಯನ ಸಂಪನ್ನ

ಭಟ್ಕಳ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಎಂಬ ಪರಿಕಲ್ಪನೆಯ ನವೆಂಬರ್ ತಿಂಗಳಿಡೀ ಸಾಹಿತ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕು ಕಸಾಪದಿಂದ ಕನ್ನಡ ನಾಡು ನುಡಿಗೆ ಸಂಬAಧಿಸಿದ ಸಮೂಹ ಗೀತ ಗಾಯನ ಸ್ಪರ್ಧೆಯು ಇಲ್ಲಿನ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯಲ್ಲಿ ನಡೆಯಿತು.

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ಕನ್ನಡ ನಾಡು ನುಡಿಗೆ
ಸಂಬAಧಿಸಿದ ಗೀತೆಗಳ ಗಾಯನದ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಅರಿಯುವಂತೆ ಮಾಡಿ ನಾಡು ನುಡಿಯ ಬಗೆಗೆ ಅಭಿಮಾನವನ್ನು ಮೂಡಿಸುವುದು ಹಾಗೂ ಸಾಹಿತ್ಯಾಸಕ್ತಿಯನ್ನು ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ನುಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಆಭಿನಂದಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಎಲ್ಲರನ್ನು ಸ್ವಾಗತಿಸಿ ಸಾಹಿತ್ಯ ಪರಿಷತ್ತು ಕನ್ನಡ ನಾಡು, ಭಾಷೆಯ ಕುರಿತು ವಿದ್ಯಾರ್ಥಿಗಳನ್ನು ಆಸಕ್ತಿ ಮೂಡಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ನಿಜಕ್ಕೂ ಸಂತಸ ಕೊಡುವಂಥದ್ದು ಎಂದು ನುಡಿದರಲ್ಲದೇ ಕನ್ನಡದ ಕೆಲಸಕ್ಕೆ ಕೈಜೋಡೊಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನುಡಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಭAಢಾರಿ ಸ್ಪರ್ಧಾ ವಿಜೇತರನ್ನು ಘೋಷಿಸಿ ಅಭಿನಂದಿಸಿದರು.

ಶಾಲೆಯ ಆರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹತ್ತನೇ ತರಗತಿಯ ಸಂಜನಾ ಸಂಗಡಿಗರು ಪ್ರಥಮ, ಒಂಭತ್ತನೇ ತರಗತಿಯ ಪೂರ್ಣಿಮಾ ಸಂಗಡಿಗರು ದ್ವಿತೀಯ ಹಾಗೂ ಎಂಟನೇ ತರಗತಿಯ ಸಚಿನ್ ಸಂಗಡಿಗರು ತ್ರತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಪ್ರಶಂಸನಾ ಪತ್ರದೊಂದಿಗೆ ಸಾಹಿತಿ ಡಾ.ಆರ್.ವಿ.ಸರಾಫ್ ರಚಿಸಿದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವಾಸುದೇವ ಪೂಜಾರಿ ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಕ್ಷಕರಾದ ಸಂಜಯ ಗುಡಿಗಾರ, ಶಿವಾನಂದ ಮೊಗೇರ, ಶ್ರೀಧರ ನಾಯ್ಕ, ಕಾಂಚನಾ ಮೇಸ್ತ, ರಮ್ಯಾ ನಾಯ್ಕ, ಮಮತಾ ಮೊಗೇರ, ತ್ರಿವೇಣಿ ನಾಯ್ಕ, ಶಾಲಾ ಕಚೇರಿ ಅಧೀಕ್ಷಕ ವಿನಾಯಕ ಚಿತ್ರಾಪುರ, ಸಂತೋಷ ಚಿತ್ರಾಪುರ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಎಂ.ಪಿ.ಭಂಡಾರಿ ಗಾಯನ ಸ್ಪರ್ಧೆಯ ನಿರ್ಣಾಯರಾಗಿ ಕಾರ್ಯ ನಿರ್ವಹಿಸಿದರು.

error: