May 16, 2024

Bhavana Tv

Its Your Channel

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಸಾಂಸ್ಕೃತಿಕ, ಯುವ ರೆಡ್‌ಕ್ರಾಸ್ ಘಟಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

ಭಟ್ಕಳ : ಇಂದು ವಿದ್ಯಾರ್ಥಿ ಜೀವನದಿಂದ ಹೊರ ಹೋದ ನಂತರ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಿದ್ದು, ಕಾಲೇಜು ಜೀವನವನ್ನು ನಿರ್ಲಕ್ಷ ಮಾಡದೇ ಉತ್ತಮವಾಗಿ ಬಳಸಿಕೊಳ್ಳಿ ಎಂದು ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಕರೆ ನೀಡಿದರು.

ಅವರು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಸಾಂಸ್ಕೃತಿಕ, ಯುವ ರೆಡ್‌ಕ್ರಾಸ್ ಘಟಕ, ಕ್ರೀಡಾ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ಭಾಗೀರಥಿ ನಾಯ್ಕ ಅವರು ವಹಿಸಿದ್ದರು.
ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಹಾಗೂ ನಗರದ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿ ನಾವು ಎಲ್ಲಿದ್ದರೂ ಸಹ ಮಾತೆ, ಮಾತೃಭೂಮಿ, ಮಾತೃಭಾಷೆಯನ್ನು ಜೀವನದಲ್ಲಿ ಎಂದೂ ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸರಕಾರ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೋಸ್ಕರ ವಾರ್ಷಿಕವಾಗಿ 3 ಲಕ್ಷ 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ಅದು ಸದುಪಯೋಗವಾಗಬೇಕು ಎಂದರೆ ನೀವು ನಿಮ್ಮ ಉಪನ್ಯಾಸಕರಿಂದ ಸೂಕ್ತ ಜ್ಞಾನವನ್ನು ಕೇಳಿ ಪಡೆಯಬೇಕು. ನಿಮ್ಮಲ್ಲಿ ಶಿಸ್ತು ಇಲ್ಲವೆಂದಾದರೆ ನಿಮಗೆ ಜ್ಞಾನ ಗಳಿಸಲು ಸಾಧ್ಯವಿಲ್ಲ ಎಂದ ಅವರು ನಿಮಗೆ ನೀವೇ ಬುದ್ದಿವಂತರು, ನಿಮ್ಮ ಬುದ್ದಿಮತ್ತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಶ್ರಮಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ವೃದ್ಧಿಸುವ ಹೊಣೆಯನ್ನು ಉಪನ್ಯಾಸಕರು ಹೊಂದಿರುತ್ತಾರೆ. ಸರಕಾರ ವಿದ್ಯಾರ್ಥಿಗಳಿಗಾಗಿ ಎಲ್ಲವನ್ನು ನೀಡುತ್ತಿದ್ದು ಅದರ ಸದುಪಯೋಗ ಪಡೆಯಿರಿ ಎಂದು ಕರೆ ನೀಡಿದರು.
ಸರಕಾರಿ ಕಚೇರಿ, ಕಟ್ಟಡವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದ ಅವರು ನಮ್ಮ ಸರಕಾರಿ ಆಸ್ಪತ್ರೆ ಅದಕ್ಕೊಂದು ಉತ್ತಮ ಉದಾಹರಣೆಯಾಗಿದೆ ಎಂದರು. ಸರಕಾರಿ ಆಸ್ಪತ್ರೆಯಿಂದು ಸಾವಿರಾರು ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದು ಅತ್ಯಂತ ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂದರು. ಉಪನ್ಯಾಸಕರು ಸಮಯಕ್ಕೆ ಮಹತ್ವವನ್ನು ಕೊಡಬೇಕು, ಓರ್ವ ಉತ್ತಮ ಉಪನ್ಯಾಸಕ ಪ್ರತಿಯೊಂದು ವಿದ್ಯಾರ್ಥಿಯನ್ನೂ ಕೂಡಾ ಉತ್ತಮ ಸಾಧನೆಯತ್ತ ಪ್ರಚೋದಿಸುವಂತಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರಕಾರಿ ಪದವಿಪೂರ್ವ ಕಾಜೇಜಿನ ಪ್ರಾಂಶುಪಾಲ ಗಜಾನನ ನಾಯಕ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು. ಉಪನ್ಯಾಸಕ ಸುರೇಶ ಮೆಟಗಾರ್ ವಿವಿಧ ಕಾರ್ಯಚಟುವಟಿಕೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿನಿ ಪ್ರೀತಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಗ್ರಂಥಪಾಲಕ ಡಾ. ನರಸಪ್ಪ ಕೆ.ಸಿ. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಯನಾ ಮತ್ತು ನಾಗರತ್ನ ನಿರೂಪಿಸಿದರು. ವಿದ್ಯಾರ್ಥಿ ರಮ್ಯ ವಂದಿಸಿದರು.

error: