May 14, 2024

Bhavana Tv

Its Your Channel

ಭಟ್ಕಳ ಗೌಸಿಯಾ ಸ್ಟ್ರೀಟ್ ತ್ಯಾಜ್ಯ ಘಟಕದಿಂದ ಮಲೀನ ನೀರು ಹೊಳೆಗೆ ಬಿಟ್ಟಿದ್ದ ಪುರಸಭೆ: ಹಾಳಾದ ಬಾವಿಗಳು, ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ.

ಭಟ್ಕಳ: ಕಳೆದ ಆಗಸ್ಟ 2ರಂದು ಇಡೀ ಭಟ್ಕಳವನ್ನು ಕಂಗೆಡಿಸಿದ ನೆರೆಯ ಛಾಯೆ ಹೊಸ ವರ್ಷ ಕಾಲಿಟ್ಟರೂ ಮಾಸದೇ ಉಳಿದುಕೊಂಡಿದೆ. ತಾಲೂಕಿನ ಪುರಸಭಾ ವ್ಯಾಪ್ತಿಯ ಗೌಸಿಯಾ ಸ್ಟ್ರೀಟ್‌ನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಪರಿವರ್ತಕ ನೀರಿನಲ್ಲಿ ತೇಲಿ ಹೋಗಿದ್ದು, ಅಂದಿನಿAದ ಅಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿದ್ದ ಯಂತ್ರಗಳು ಸ್ತಬ್ಧಗೊಂಡ ಪರಿಣಾಮವಾಗಿ ತ್ಯಾಜ್ಯ ನೀರು ಹೊಳೆಯನ್ನು ಸೇರಿ, ಹೊಳೆ ನೀರಿನ ಬಣ್ಣವನ್ನೇ ಬದಲಾಯಿಸಿ ಬಿಟ್ಟಿದೆ.

ಹೊಳೆಯಲ್ಲಿ ನೀರಿದ್ದಾಗ ಹೊಳೆಯ ನೀರಿನೊಂದಿಗೆ ಮುಂದಕ್ಕೆ ಹರಿದು ಸಮುದ್ರ ಸೇರುತ್ತಿದ್ದ ತ್ಯಾಜ್ಯ, ಮಲೀನ ನೀರು, ಇದೀಗ ಹೊಳೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದಂತೆಯೇ ಗೌಸಿಯಾ ಸ್ಟ್ರೀಟ್, ಮುಸ್ಮಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಡಾರಂಟಾ, ಡೊಂಗರಪಳ್ಳಿ ಭಾಗದಲ್ಲಿ ಶೇಖರಣೆಗೊಂಡು ಅಲ್ಲಿನ ಜನರಿಗೆ ನರಕ ಯಾತನೆಯನ್ನು ನೀಡುತ್ತಿದೆ. ಅಲ್ಲಿನ ಬಾವಿಗಳೆಲ್ಲ ಮಲೀನಗೊಂಡಿದ್ದು, ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶರಾಬಿ ಹೊಳೆ ಇಕ್ಕೆಲಗಳಲ್ಲಿ ದುರ್ವಾಸನೆ ಹರಡಿದ್ದು, ಮನೆಯಲ್ಲಿ ಕುಳಿತುಕೊಳ್ಳಲೂ ಆಗದಂತಹ ವಾತಾವರಣ ಕಂಡು ಬಂದಿದೆ. ಅಲ್ಲದೇ ತ್ಯಾಜ್ಯ ಶೇಖರಣೆಯಿಂದ ಹೊಳೆಯ ದಡದ ಜನರಿಗೆ ರೋಗದ ಆತಂಕ ಎದುರಾಗಿದೆ. ಪುರಸಭಾ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಸಮಸ್ಯೆ ಬಗೆ ಹರಿಯುತ್ತಿಲ್ಲ. ನಮಗೆ ತ್ಯಾಜ್ಯ ಸಂಗ್ರಹದಿAದ ನಿತ್ಯದ ಬದುಕು ಹದಗೆಟ್ಟು ಹೋಗಿದೆ. ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸದೇ ನಮಗೆ ಬೇರೆ ಮಾರ್ಗ ಇಲ್ಲದಾಗಿದೆ ಎಂದು ಅಲ್ಲಿನ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಆಗಸ್ಟ ತಿಂಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ವಿದ್ಯುತ್ ಪರಿವರ್ತಕ ಹಾಳಾಗಿ ಹೋಯಿತು. ನೂತನವಾಗಿ ವಿದ್ಯುತ್ ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿ ಇದೆ. ಇನ್ನು 8-10 ದಿನಗಳಲ್ಲಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಭಟ್ಕಳ ಪುರಸಭೆ ಮುಖ್ಯ ಅಧಿಕಾರಿಗಳು ಸುರೇಶ ಕೆ ತಿಳಿಸಿದ್ದಾರೆ.

error: