April 26, 2024

Bhavana Tv

Its Your Channel

ಸರಕಾರಿ ಪ್ರೌಢಶಾಲೆ ಸೋನಾರಕೇರಿ ಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ

ಭಟ್ಕಳ:ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಹಬ್ಬ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿರುತ್ತದೆ.
ಸೋನಾರಕೇರಿ ಕ್ಲಸ್ಟರ್ ಮಟ್ಟದ 12 ಶಾಲೆಗಳಿಂದ 120ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕಲಿಕಾ ಹಬ್ಬವು ಸರಕಾರಿ ಪ್ರೌಢಶಾಲೆ ಸೋನಾರಕೇರಿ ಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು.
ಕಲಿಕಾ ಹಬ್ಬವನ್ನು ಹಾಡು ಆಡು,ಮಾಡು ಆಡು,ಉರು ತಿಳಿಯೋಣ,ಕಾಗದ ಕತ್ತರಿ ಬಣ್ಣ 4 ಕೊರ್ನರ ಗಳ ಮೂಲಕ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಶಿಕ್ಷಕರ ಸಹಾಯದಿಂದ ಮಕ್ಕಳು ತಯಾರಿಸಿ ಸಂಭ್ರಮಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ಶಾಲೆ ಮಕ್ಕಳಯಿಂದ ಬ್ಯಾಂಡ್ ವಾದ್ಯ,ಪೂರ್ಣ ಕುಂಭ ದೊಂದಿಗೆ ಮಕ್ಕಳಿಗೆ ಕಿರೀಟ ಧರಿಸುವ ಮೂಲಕ ಮೇರೆವಣಿಗೆ ನಡೆಯಿತು. ಸಿ.ಆರ್.ಪಿ ಗೋಪಾಲ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸೋನಾರಕೇರಿ ಹೈಸ್ಕೂಲ ಮುಖ್ಯಾಧ್ಯಾಪಕರಾದ ಶ್ರೀಮತಿ ಯಲ್ಲಮ್ಮ ಕಲಿಕಾ ಹಬ್ಬದ ಕುರಿತು ಮಾತನಾಡಿದರು ಚನ್ನವೀರಪ್ಪ ಹೊಸ್ಮನಿ ವಂದಿಸಿದರು.
ಈ ಸಂದರ್ಭದಲ್ಲಿ ಹೈಸ್ಕೂಲ್ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ನಾಯ್ಕ,ಶಿಕ್ಷಣ ಸಂಯೋಜಕರಾದ ಗೀತಾ ನಾಯ್ಕ, ಶಿಕ್ಷಕರಾದ ಮಂಜುನಾಥ ನಾಯಕ,ಗಣೇಶ ಹೆಗಡೆ,ಪುಸ್ಪಾ ನಾಯ್ಕ,ಮಾರುತಿ ಆಚಾರಿ ಇದ್ದರು.

error: