May 19, 2024

Bhavana Tv

Its Your Channel

ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ವೇದಿಕೆ ವತಿಯಿಂದ ನ್ಯಾಯವಾದಿ- 2023 ಅದ್ದೂರಿಯಾಗಿ ಆಚರಣೆ

ಭಟ್ಕಳ:- ಸೋಮವಾರದಂದು ಭಟ್ಕಳದ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ವೇದಿಕೆ ವತಿಯಿಂದ ನ್ಯಾಯವಾದಿ 2023ರನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಂಜುಮಾನ್ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಕಾಜಿಯಾ ಮೊಹಮ್ಮದ್ ಮುಝಾಮಿಲ್ ಸಾಹೇಬರು ಮಾತನಾಡಿ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಮತ್ತು ಅದಕ್ಕೆ ಸಿಕ್ಕ ಸ್ಥಾನಮಾನಗಳು ಕಡಿಮೆಯಾಗಿದೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕು ಎಂದರು. ಈಗ ನ್ಯಾಯಾಲಯಗಳಲ್ಲಿ ತೀರ್ಪುಗಳು ಕನ್ನಡ ಭಾಷೆಯಲ್ಲಿ ಲಭ್ಯವಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರವೀಂದ್ರ ಆರ್. ಶ್ರೇಷ್ಟಿ ಅವರು ಮಾತನಾಡಿ ಕನ್ನಡಕ್ಕಾಗಿ ನಾವು ಎಲ್ಲರೂ ಯಾವ ತ್ಯಾಗಕ್ಕೂ ಸಿದ್ಧರಾಗಿರಬೇಕೆಂದರು.ಕನ್ನಡದಲ್ಲಿ ಮಾತನಾಡಲು ರೂಡಿಸಿಕೊಳ್ಳಿ ಎಂದು ಕಿವಿ ಮಾತು ನೀಡಿದರು.

.ಇನ್ನೊಬ್ಬ ಅತಿಥಿಯಾದ ಶೇಖರ್ ಹರಿಕಾಂತ್ ಅವರು ಮಾತನಾಡಿ ಕನ್ನಡ ಲಿಪಿ ಪ್ರಾರಂಭವಾಗಿದ್ದು ಕಲ್ಲಿನ ಮೇಲೆ,ಕನ್ನಡ ಅಕ್ಷರಗಳನ್ನು ರಾಜ ಮಹಾರಾಜರ ಕಾಲದಲ್ಲಿ ಕೆತ್ತುತ್ತಿದ್ದರು ಎಂದು ನೆನಪಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಜ್ಲೂರು ರೆಹಮಾನ್,ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಜಾಹಿದ್ ಕರೂರಿ ಮತ್ತು ವೇದಿಕೆ ಸಂಚಾಲಕರಾದ ಡಾ. ಪದ್ಮಯ್ಯ ನಾಯ್ಕ,ವಿದ್ಯಾರ್ಥಿ ಸಂಚಾಲಕ ವಾಸುದೇವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕುಮಾರಿ ಸನ್ನಿಧಿ ಮತ್ತು ಕುಮಾರಿ ಶ್ರೀನಿಧಿ ಅವರು ನಿರೂಪಣೆ ಮಾಡಿದರು.ವಾಸುದೇವ ನಾಯ್ಕ ಸ್ವಾಗತಿಸಿದರು ಮತ್ತು ಸಾಬೀತ್ ಸಾಹೇಬ್ ವಂದಿಸಿದರು.

error: