May 12, 2024

Bhavana Tv

Its Your Channel

ಭಟ್ಕಳದಲ್ಲಿ ವಿದ್ಯುತ್ ಸಮಸ್ಯೆ ಹಿನ್ನೆಲೆ ಹೆಬಳೆ ಗ್ರಿಡ್‌ಗೆ ಶಾಸಕ ಸುನೀಲ್ ನಾಯ್ಕ ಭೇಟಿ

ಭಟ್ಕಳ: ತಾಲೂಕಿನ ಹೆಬಳೆ ಗ್ರಿಡ್‌ನಲ್ಲು ಐಸಿ ವೈಫಲ್ಯ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಇಂದು ಹೆಬಳೆ ಗ್ರಿಡ್ ಗೆ ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ ಬೇಟಿ ನೀಡಿದ್ದಾರೆ.

ಹೆಬಳೆ ಗಿಡ್‌ನಲ್ಲಿನ ತಲಾ 5 ಮೆಗ್ ವ್ಯಾಟ್ ಆ್ಯಂಪ್‌ನ (ಎಂಎಎ) ಮೂರು ಟಿಸಿಗಳಲ್ಲಿ ಒಂದು ವೈಫಲ್ಯಗೊಂಡಿದೆ.
ಇದರಿoದಾಗಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯಗೊಂಡಿದ್ದು ಸ್ಥಗಿತಗೊಂಡಿರುವ
ಟ್ರಾನ್ಸಾಪಾರ್ಮರ್‌ನ್ನು ತೆರುವುಗೊಳಿಸಲಾಗಿದ್ದು, ಹೊಸಪೇಟೆಯಿಂದ ನೂತನ ಟ್ರಾನ್ಸಾಪಾರ್ಮರ್‌ನ್ನು ತರಿಸಲಾಗಿದೆ ಮತ್ತು ಜೋಡಣೆ ಕಾರ್ಯ ಮುಂದುವರಿದಿದೆ.
ಉನ್ನತ ಅಧಿಕಾರಿಗಳು ಜೊತೆ ಚರ್ಚಿಸಿ ಆದಷ್ಟು ಶೀಘ್ರವೇ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೆ ಅಧಿಕಾರಿಗಳಿಗೆ ನನ್ನ ಸಂಪೂರ್ಣ ಸಹಕಾರವನ್ನು ನೀಡಿದ್ದೇನೆ ಎಂದು ಶಾಸಕ ಸುನೀಲ್ ತಿಳಿಸಿದ್ದಾರೆ.

error: