ಭಟ್ಕಳ: ಬಿಜೆಪಿ ಎನ್ನುವುದು ಸಮಾಜದ ಅಂತಿಮ ವರ್ಗದ ಅಂತಿಮ ವ್ಯಕ್ತಿಯ ತನಕ ಸಿಗಬೇಕಾದ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಮಾಡುತ್ತಿರುವ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದ್ದು, ಪ್ರಧಾನಿ ಮೋದಿ ಅವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ ಎಂದು ಕೇರಳ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಅವರು ಹೇಳಿದರು.
ಅವರು ಮಂಗಳವಾರದAದು ಎರಡು ದಿನಗಳ ಕಾಲ ಭಟ್ಕಳ ಮಂಡಲದ ವಿವಿಧ ಭಾಗಗಳಲ್ಲಿ ಚುನಾವಣೆ ಪ್ರಚಾರದ ನಿಮಿತ್ತ ಭಟ್ಕಳಕ್ಕೆ ಆಗಮಿಸಿದ್ದು ಮಂಡಲದ ಕಾರ್ಯಾಲಯದಲ್ಲಿ ಮಾತನಾಡುತ್ತಿದ್ದರು.
ಸದ್ಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು, ಚುನಾವಣಾ ಕಾರ್ಯಗಳು ಬಿಜೆಪಿಯಿಂದ ಆರಂಭಗೊAಡಿವೆ. ಕಳೆದ 8 ವರ್ಷದಿಂದ ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿಯ ಅವಧಿಯಲ್ಲಿ ದೇಶವನ್ನು ಜಗತ್ತಿನಲ್ಲಿಯೇ ಬೇರೆಯದ್ದೇ ಭಾಷ್ಯಕ್ಕೆ ಕೊಂಡೊಯ್ದಿದ್ದಾರೆ. ಕಾರಣ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಜನರ ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣದ ಕ್ಷೇತ್ರದ ಜೊತೆಗೆ ಉಳಿದೆಲ್ಲ ಕ್ಷೇತ್ರದಲ್ಲಿ ದೇಶವು ಅತ್ಯುನ್ನತವಾಗಿ ಬೆಳೆದು ನಿಂತಿದೆ. ಇನ್ನು ಈ ದೇಶದ ಯುವಕರಿಗೆ ನೀವು ಕೆಲಸ ಹುಡುಕುವ ಬದಲು ಕೆಲಸ ನೀಡುವ ಸ್ಥಾನದಲ್ಲಿ ನಿಂತು ಉದ್ಯಮ ಆರಂಭಿಸುವತ್ತ ಚಿತ್ತ ಹರಿಸಿ ಎಂದು ಕಿವಿಮಾತು ಹೇಳಿದಂತೆ ಕೇಂದ್ರ ಸರಕಾರ ಯುವಕರ ಉದ್ಯೋಗ ಸಬಲೀಕರಣಕ್ಕಾಗಿ ಮುದ್ರಾ ಯೋಜನೆ ಜಾರಿ ತಂದು ಸದ್ಯ ದೇಶದಲ್ಲಿ ಒಟ್ಟು 41 ಕೋಟಿ ಸಾಲವನ್ನು ನೀಡಲಾಗಿದ್ದು ಇದರಲ್ಲಿ 50% ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿದ್ದು ಅವರಿಗೂ ಈ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದಾರೆ ಎಂದ ಅವರು 2014 ಕ್ಕೂ ಪೂರ್ವದಲ್ಲಿ ಕೇವಲ 400 ಸ್ಟಾರ್ಟ ಅಪ್ ಗಳಿದ್ದು ಈಗ 84 ಸಾವಿರಕ್ಕೆ ಏರಿದ್ದು, 16 ಐಐಟಿ ಸಂಸ್ಥೆಗಳಿದ್ದು ಈಗ 23 ಆಗಿದ್ದು ಐಐಎಮ್ ಸಹ 13 ರಿಂದ 20 ಕ್ಕೆ ಏರಿಕೆಯಾಗಿದೆ. ಇನ್ನು ಏಮ್ಸ ಸಂಖ್ಯೆಯಲ್ಲಿಯು ದುಪ್ಪಟ್ಟಾಗಿದ್ದು 7 ರಿಂದ 22 ಆಗಿವೆ. 387 ಮೆಡಿಕಲ್ ಕಾಲೇಜಗಳಿದ್ದು ಈಗ 607 ಗೆ ಏರಿಕೆಯಾಗಿದೆ ಎಂದರು.
ಇನ್ನು ಆದಿವಾಸಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಡುವ ಉದ್ದೇಶದಿಂದ ಏಕಲವ್ಯ ಆಧುನಿಕ ವಸತಿ ಶಾಲೆಯನ್ನು ತೆರೆಯಲಾಗಿದ್ದು ಈ ಹಿಂದೆ 19 ಶಾಲೆಗಳಿದ್ದು ಮೋದಿ ಅವರ ಅವಧಿಯಲ್ಲಿ 500 ಶಾಲೆಗಳು ನಿರ್ಮಾಣಗೊಂಡಿವೆ. ಅದರಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿಯು ಮೋದಿ ಸರಕಾರವು ಮುನ್ನಡೆ ಸಾಧಿಸಿದ್ದು 8 ಲಕ್ಷ ಕಿ.ಮೀ. ರಸ್ತೆಗಳಿದ್ದು ಈಗ 145,150 ಕಿ.ಮೀ. ಗೆ ಹೆಚ್ಚಳವಾಗಿದೆ ಎಂದರು.
ರಾಜ್ಯದಲ್ಲಿಯೂ ಎಸ್.ಸಿ. ಎಸ್.ಟಿ ಅವರಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪಕ್ಷದ ರಾಜ್ಯ ಸರ್ಕಾರ ಅವರ ಪರವಾಗಿದ್ದು ಎರಡು ತಿಂಗಳ ಹಿಂದೆ ಮೀಸಲಾತಿ ನೀಡಿ ಸರಕಾರ ಅವರ ಜೊತೆಗೆ ಇರುವ ಭರವಸೆಯನ್ನು ದ್ರಢಪಡಿಸಿತು. ಇದೇ ತರಹ ಬಿಜೆಪಿಯಿದ್ದರೆ ಮಾತ್ರ ರಾಜ್ಯದ ವಿಕಾಸ ಅಭಿವೃದ್ಧಿ ಸಾಧ್ಯ. ಅದರಂತೆ ಭಟ್ಕಳದ ಅಭಿವೃದ್ಧಿಗೂ ಸಹ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಿವಮೊಗ್ಗ ವಿಭಾಗದ ಸಹ ಪ್ರಬಾರಿ ಎನ್. ಎಸ್. ಹೆಗಡೆ ‘ ಈ ಬಾರಿ ಚುನಾವಣೆಯನ್ನು ಯಶಸ್ವಿಯಾಗಿ ಮಾಡಿ ರಾಜ್ಯದಲ್ಲಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದು ಮತ್ತೆ ಸರಕಾರ ರಚಿಸಬೇಕೆಂಬ ಉದ್ದೇಶದೊಂದಿಗೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಉತ್ತಮ ರಾಜಕೀಯ ವಾತಾವರಣ ಸ್ರಷ್ಟಿಗೆ ವಿಜಯ ಸಂಕಲ್ಪ ಯಾತ್ರೆಯನ್ನು ಸಹ ರಾಜ್ಯಾದ್ಯಂತ ನಡೆಸಲಾಗಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿAಸ ಬೇರೆ ಬೇರೆ ರಾಜ್ಯದ ಶಾಸಕರು, ಮಂತ್ರಿಗಳು, ಕೇಂದ್ರದ ಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಇಂದಿನಿAದ ಪ್ರತಿ ಮನೆ ಮನೆ ಪ್ರಚಾರ ಕಾರ್ಯವು ಚಾಲನೆಗೊಳ್ಳಲಿದೆ. ಏಪ್ರಿಲ್ 27 ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ಪ್ರಚಾರ ಕಾರ್ಯ ನಡೆಸಲಿದ್ದು, ಮೇ 3ರಂದು ನಿಗದಿತ ನೌಕಾನೆಲೆಯ ಜಾಗದಲ್ಲಿ ಜಿಲ್ಲೆಯ ಮಧ್ಯ ಭಾಗ ಅಂಕೋಲಾದಲ್ಲಿ ಪ್ರಚಾರದ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿಸಿದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ