April 28, 2024

Bhavana Tv

Its Your Channel

ಭಟ್ಕಳ: ತಾಲೂಕಿನ ತಣ್ಣಿರ್‌ಕಟ್ಟ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಮಣ್ ಬೆಂಗ್ರೆ ಇದರ ನೂತನ ದೇವಾಲಯದ ಉದ್ಘಾಟನೆ,

ಭಟ್ಕಳ : ಶ್ರೀ ದೇವಿಯ ಪುನರ್ ಪ್ರತಿಷ್ಟಾಪನೆ, ಶಿಖರ ಕಲಶ ಪ್ರತಿಷ್ಟೆ ಕಾರ್ಯಕ್ರಮವು ಮೇ.೭ ರಿಂದ ೯ರ ತನಕ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಸ್ವಾಮೀಜಿಯವರು ಹಾಗೂ ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ಪ್ರತಿಷ್ಟಾಪನಾ ಕಾರ್ಯ ನೆರವೇರಲಿದೆ ಎಂದು ಆಡಳಿತ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಾಡಿಗ ಸಮುದಾಯದಿಂದ ನಿರ್ಮಿಸಲಾಗಿರುವ ಭವ್ಯವಾದ ನೂತನ ದೇವಸ್ಥಾನದ ಉದ್ಘಾಟನೆ, ಶ್ರೀ ದೇವರ ಪ್ರತಿಷ್ಟಾ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತದಂಗವಾಗಿ ಮೇ.೭ರಂದು ಬೆಳಿಗ್ಗೆ ಗುರು ಪ್ರಾರ್ಥನೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ಸಂವಾಚನ, ದೇವನಾಂದಿ, ಕೌತುಕ ಬಂಧನ, ಜಲಾಧಿವಾಸ, ಸಯ್ಯಾಧಿವಾಸ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫.೩೦ರಿಂದ ಕಲಶ ಸ್ಥಾಪನೆ, ವಾಸ್ತು ಹೋಮ, ರಾಕ್ಷೆÆÃಘ್ನ ಹೋಮ, ಅಧಿವಾಸಾದಿ ಹೋಮ, ಪಿಂಡಿಕಾ ಶುದ್ಧಿ, ರತ್ನ ನ್ಯಾಸ, ಅಷ್ಟ ಬಂಧನ ನಡೆಯಲಿದೆ.
ಮೇ.೮ರಂದು ಬೆಳಿಗ್ಗೆ ಪೂಜಾಂಗ ಹೋಮ, ಪ್ರತಿಷ್ಟಾಂಗ ಹೋಮ, ಸುಮೂರ್ತದಲ್ಲಿ ಜಗದ್ಗುರುಗಳಿಂದ ಕಲಶ ಸ್ಥಾಪನೆ ಹಾಗೂ ಶ್ರೀ ದೇವಿಯ ಪ್ರತಿಷ್ಟಾಪನೆ, ಕುಂಭಾಭಿಷೇಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಗುರುಪಾದ ಪೂಜೆ, ಜಗದ್ಗುರುಗಳಿಂದ ಆಶೀರ್ವಚನ, ರಾತ್ರಿ ೮ ಗಂಟೆಗೆ ಮಹಾ ಮಂಗಳಾರತಿ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಎ.೯ರಂದು ಬೆಳಿಗ್ಗೆ ದುರ್ಗಾಪೂಜೆ ಹಾಗೂ ಶ್ರೀ ದೇವರಿಗೆ ಉಡಿ ತುಂಬುವ ಕಾರ್ಯಕ್ರಮವಿದ್ದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೩ ಗಂಟೆಯಿAದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದೂ ದೇವಸ್ಥಾನದ ಆಡಳಿತ ಕಮಿಟಿ ಹಾಗೂ ಪ್ರತಿಷ್ಟಾಪನಾ ಉತ್ಸವ ಸಮಿತಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ದೇವರ ಭಕ್ತಾದಿಗಳು, ಊರಿನ ನಾಗರೀಕರು, ಶ್ರೀ ಗುರುಗಳ ಶಿಷ್ಯ ವೃಂದದವರು ಭಾಗವಹಿಸಿ ಶ್ರೀ ದೇವರ ಹಾಗೂ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.

error: