April 28, 2024

Bhavana Tv

Its Your Channel

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ದೀಪದಾನ ಕಾರ್ಯಕ್ರಮ

ಭಟ್ಕಳ ; ಬಿ.ಎಡ್.ಪ್ರಶಿಕ್ಷಣಾರ್ಥಿಗಳು ತಾವು ಪಡೆದತರಬೇತಿಯನ್ನು ಮುಂದೆ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಅನುಸರಿಸಿ ಉತ್ತಮ ಶಿಕ್ಷಕರಾಗಬೇಕು ಎಂದು ಅಂಕೋಲಾದಕೆ.ಎಲ್.ಇ.ಎಸ್. ಬಿ.ಎಡ್.ಕಾಲೇಜಿನ ಪ್ರ‍್ರಾಂಶುಪಾಲ ವಿನಾಯಕ ಹೆಗಡೆ ಹೇಳಿದರು.

ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ದೀಪದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡುತ್ತಾ ಶಿಕ್ಷಕರು ಆಧುನಿಕ ಶಿಕ್ಷಣದಲ್ಲಿ ಪರಿವರ್ತನೆಗೆ ಒಳಪಡುವ ಸಂದರ್ಭ ಮತ್ತು ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿದವರು ಮಾತ್ರ ಯಶಸ್ಸನ್ನು ಪಡೆಯುತ್ತಾರೆ, ಕೊರೋನಾ ಸಂದರ್ಭದಲ್ಲಿ ಕ್ಯಾಮೆರಾ ಮುಂದೆ ನಿಂತು ಪಾಠ ಮಾಡುವ ಶಿಕ್ಷಕರು ಮಾತ್ರ ಯಶಸ್ವಿಯಾದರು ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟಿನಚೇರಮೆನ್ ಡಾ.ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ವರ್ಷದ ಉತ್ತಮ ವಿದ್ಯಾರ್ಥಿಯಾಗಿ ದಾಕ್ಷಾಯಿಣಿ ಕಲಬಾಗ್, ಭವಿಷ್ಯದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಭಾರ್ಗವಿ ಭಟ್ ಮತ್ತು ಉತ್ತಮ ನಾಯಕತ್ವಗುಣದ ಶಿಕ್ಷಕಿ ಪ್ರಶಸ್ತಿಯನ್ನು ವೀಣಾ ನಾಯ್ಕ ಪಡೆದುಕೊಂಡರು. ನಿವೃತ್ತ ಪ್ರಾಂಶುಪಾಲ ಡಾ.ಅಜಾತ ಸ್ವಾಮಿಅವರು, ಅವರ ತಂದೆಯವರಾದÀ ಎಚ್.ಎಮ್.ಜಿ.ಮೂರ್ತಿ ಅವರ ನೆನಪಿನಲ್ಲಿ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಪನ್ಯಾಸಕ ಸುಬ್ರÀ್ರಮಣ್ಯ ಮತ್ತು ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಭಾರ್ಗವಿ ಭಟ್ ಪಡೆದುಕೊಂಡರು. ಪ್ರಾಂಶುಪಾಲ ಡಾ.ವಿರೇಂದ್ರ ಶಾನಭಾಗ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ ವರದಿ ವಾಚಿಸಿದರು. ಮತ್ತು ಗಜಾನನ ಶಾಸ್ತಿç ದೀಪದಾನ ಕಾರ್ಯಕ್ರಮವನ್ನು ನೆರವೇರಿಸಿದರು. ಬಿ.ಎಡ್.ಪ್ರಶಿಕ್ಷಣಾರ್ಥಿಗಳಾದ ವಿಶಾಲಾ ಮತ್ತು ಸಂಗಡಿಗರು ಪ್ರಾರ್ಥಿಸಿದರು ಅನುಪ್ರಿಯಾ ವಂದಿಸಿದರು ಹಾಗೂ ಅನುಶ್ರೀ ಮತ್ತು ವರದಾ ಕಾರ್ಯಕ್ರಮವನ್ನು ನಿರೂಪಿಸಿದರು.

error: