April 27, 2024

Bhavana Tv

Its Your Channel

ಲಯನ್ಸ್ ವಿದ್ಯಾಭವನದಲ್ಲಿ ಲಿಯೋ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ

ಹೊನ್ನಾವರ: ಯುವಶಕ್ತಿ ರಾಷ್ಟçಶಕ್ತಿಯಾಗಿದ್ದು, ನಾಯಕತ್ವ ಗುಣ, ಅನುಭವ ಮತ್ತು ಅವಕಾಶ ನೀಡಬಲ್ಲ ಲಿಯೋ ಕ್ಲಬ್ ಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ನೊಂದವರಿಗೆ ಸಹಾಯ ಮಾಡಲು ಮುಂದಾಗಬೇಕು. ಗಳಿಸಿದ ಸಂಪತ್ತು ಶಾಶ್ವತವಲ್ಲ. ಈ ಲೋಕವನ್ನೇ ಬಿಟ್ಟು ಹೋಗುವಾಗ ನಾವು ಗಳಿಸಿದ ಸಂಪತ್ತನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಅದನ್ನು ಪುಣ್ಯದ ರೂಪದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯ. ಆದ್ದರಿಂದ ಲಿಯೋ ಕ್ಲಬ್ ತಂಡವು ಸೇವಾ ಮನೋಭಾವನೆಯಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು s ಸಮಾಜ ಸೇವೆಗೆ ಸನ್ನದ್ಧರಾಗಿ ಎಂದು ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಒಎಈ ಲಾಯನ್ ಎಸ್. ಜೆ. ಕೈರನ್ನ ಕರೆ ನೀಡಿದರು. ಅವರು ಹೊನ್ನಾವರದ ಲಯನ್ಸ್ ವಿದ್ಯಾಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಅಡಿಯಲ್ಲಿ ಬರುವ ಲಿಯೋ ಕ್ಲಬ್ಬಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸುವುದರ ಜೊತೆಗೆ ಈ ಮೇಲಿನಂತೆ ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊನ್ನಾವರ ಎಸ್.ಡಿ.ಎಮ್. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷಿöÃ ನಾಯ್ಕರವರು ಮಾತನಾಡಿ ಮನಸ್ಸಿದ್ದೆಡೆ ಮಾರ್ಗವಿದ್ದು, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಧ್ಯಯನದ ನಡುವೆಯು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿದ್ದು, ಲಯನ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಅವಕಾಶಗಳನ್ನು ಬಳಸಿಕೊಂಡು, ಬಿಡುವಿನ ವೇಳೆಯಲ್ಲಿ ಸಮಾಜಮುಖಿ ಕಾರ್ಯಗಳತ್ತ ಗಮನಹರಿಸುವ ಮೂಲಕ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಲಿಯೋಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ತಿಳಿಸಿದರು.

ಸಭಾ ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ವಿನೋದ ನಾಯ್ಕ ಮಾತನಾಡಿ ಲಿಯೋ ಕ್ಲಬ್ಬಿನ ಚಟುವಟಿಕೆಗಳಿಗೆ ತಾವು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸುವ ಮೂಲಕ ಲಿಯೋ ಕ್ಲಬ್‌ನ ನೂತನ ಪದಾಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ಪ್ರವೃತ್ತರಾಗಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿದ್ದ ಜೋನ್ ಚೇರ್ ಪರ್ಸನ್ ಎಂ.ಜೆ.ಎಫ್ ಲಾಯನ್ ರಾಜೇಶ ಸಾಳೇಹಿತ್ತಲ್, ನಿಕಟಪೂರ್ವ ಅಧ್ಯಕ್ಷರಾದ ಲಾಯನ್ ಪ್ರದೀಪ ಶೆಟ್ಟಿ, ಲಿಯೋ ಕ್ಲಬ್ಬಿನ ನೂತನ ಅಧ್ಯಕ್ಷರಾದ ಸ್ವಾತಿ ಶೇಟ್ ಮಾತನಾಡಿದರು. ಲಯನ್ ಕೃಷ್ಣಮೂರ್ತಿ ಭಟ್ಟ ಮತ್ತು ಲಯನ್ ಎಂ.ಜಿ.ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಚರಣಾ ಎಸ್. ಪ್ರಾರ್ಥಿಸಿದರು. ಕಾರ್ಯದರ್ಶಿ ಲಾಯನ್ ಉದಯ ನಾಯ್ಕ ಸ್ವಾಗತಿಸಿದರು. ಸಂಕೇತ ಶೇಟ ವರದಿ ವಾಚನ ಮಾಡಿದರು. ಎಂ.ಜೆ.ಎಫ್ ಲಾಯನ್ ಡಾ.ಸುರೇಶ ಎಸ್ ಹಾಗೂ ಲಾಯನ್ ಸಜಿತಾ ಶಿವಪ್ರಸಾದ ನಿರೂಪಿಸಿದರು. ಲಾಯನ್ ಎನ್.ಜಿ.ಭಟ್ಟ ವಂದಿಸಿದರು. ವೇದಿಕೆಯಲ್ಲಿ ಲಿಯೋ ಕ್ಲಬ್ಬಿನ ಡಾ.ಸುಬ್ರಹ್ಮಣ್ಯ ಭಟ್ಟ, ಧನ್ಯಾ ಭಟ್ಟ, ಚಿತ್ರಾ ಭಟ್ಟ ಮುಂತಾದವರು ಉಪಸ್ಥಿತರಿದ್ದರು

.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ.

error: