May 19, 2024

Bhavana Tv

Its Your Channel

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ -ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯ್ಕ

ಹೊನ್ನಾವರ: ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ. ಸಮಾಜಸೇವೆಗೆಂದೆ ಈ ಸಂಸ್ಥೆ ಮೀಸಲಾಗಿರುವುದು ಪ್ರಶಂಸನಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯ್ಕ ಹೇಳಿದರು.

ಅವರು ಗಾಂಧಿನಗರದ ರೋಟರಿ ಪಾರ್ಕ ಹೌಸ್ ನಲ್ಲಿ ೭ ಹಿಲ್ಸ ಪಬ್ಲಿಕೇಶನ್ ಬೆಂಗಳೂರು, ವಿಜಯವಾಣಿ, ದ್ವಿಗೀಜಯ ನ್ಯೂಸ್ ಹಾಗೂ ರೋಟರಿ ಕ್ಲಬ್ ಶಿರಸಿ ಇವರ ಸಹಕಾರದಲ್ಲಿ ಜರುಗಿದ ವಿದ್ಯಾಸೇತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋರೋನಾ ಸಂಕಷ್ಟದಿAದ ಶಾಲೆಗಳು ಪ್ರಾರಂಭವಾಗದೇ ಆನಲೈನ್ ತರಗತಿ ನಡೆಯುತ್ತಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅನೂಕೂಲವಾಗಲು ರಾಜ್ಯದ ವಿವಿಧಡೆ ವಿದ್ಯಾಸೇತು ಮೂಲಕ ರೋಟರಿ ಪುಸ್ತಕ ನೀಡುತ್ತಿದೆ. ಆನಲೈನ್ ತರಗತಿಯಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕಡಿಮೆ ಆಗದಂತೆ ಈ ಪುಸ್ತಕ ಸೇತುವೆಯ ರೀತಿಯಲ್ಲಿ ಅನೂಕೂಲವಾಗಲಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ರೋಟರಿ ಶ್ರಮಿಸುತ್ತಿದೆ ಎಂದು ಅಭಿನಂದಿಸಿದರು.


ಅಸಿಸ್ಟೆAಟ್ ಗವರ್ನರ್ ನಾಗರಾಜ ಜೋಶಿ ಮಾತನಾಡಿ ಎರಡು ವರ್ಷದಿಂದ ಪ್ರತ್ಯಕ್ಷ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಲು ಕಷ್ಟವಾಗಬಾರದು ಎಂದು ವಿದ್ಯಾಸೇತು ಮೂಲಕ ಕೈಪಿಡಿ ನೀಡಲಾಗುತ್ತಿದೆ. ರೋಟರಿ ಕ್ಲಬ್ ಶೈಕ್ಷಣಿಕ ಸಾಧನೆಗೆ ವಿದ್ಯಾರ್ಥಿಗಳಿಗೆ ಪೇರೆಪಿಸುತ್ತಿದ್ದು ಇದರ ಸದುಪಯೋಗ ಪಡೆಯಲು ಶಾಲಾ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದರು.
೨೭ ಶಾಲಾ ಮುಖ್ಯೊಪಧ್ಯಾಯರು ೯೦೦ ಸೆಟ್ ವಿದ್ಯಾಸೇತು ಕೈಪಿಡಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಅಧ್ಯಕ್ಷ ಸ್ಟೀಪನ್ ರೊಡ್ರಗೀಸ್ ಸೇವೆಗಾಗಿಯೇ ಹುಟ್ಟಿಕೊಂಡ ಸಂಸ್ಥೆ ಶೈಕ್ಷಣಿಕ ಆರೋಗ್ಯ ಕ್ಷೇತ್ರಕ್ಕೆ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಹೊನ್ನಾವರ ರೋಟರಿ ಕಳೆದ ೩೦ ವರ್ಷದಿಂದ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸುತ್ತಾ ಬಂದಿದೆ. ಕಳೆದ ಎರಡು ವರ್ಷದಿಂದ ಕೊರೋನಾ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿಲ್ಲ. ಇಂದು ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ೧ ಲಕ್ಷ ಮೌಲ್ಯದ ೯೦೦ ಸೆಟ್ ವಿದ್ಯಾಸೇತು ಕೈಪಿಡಿ ನೀಡಿದ್ದೇವೆ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ವಿತರಿಸುತ್ತಿದ್ದು, ಇದು ನೂತನ ಪಠ್ಯಕ್ರಮ ಬದಲಾಗುವರೆಗೂ ಪ್ರತಿವರ್ಷವು ಬಳಸಬಹುದು. ಇದರಿಂದ ತಾಲೂಕಿನ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಇದರ ಸದುಪಯೋಗವಾಗಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮಿಸಬೇಕಿದೆ ಎಂದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಮಹೇಶ ಕಲ್ಯಾಣಪುರ್, ಎಸ್.ಎನ್.ಹೆಗಡೆ ಉಪಸ್ಥಿತರಿದ್ದರು. ದಿನೇಶ ಕಾಮತ್ ವಂದಿಸಿದರು.

ಭಾವನಾ ಟಿವಿಗಾಗಿ ವೆಂಕಟೇಶ ಮೆಸ್ತ ಹೊನ್ನಾವರ

error: