May 17, 2024

Bhavana Tv

Its Your Channel

ಒಕ್ಕಲಿಗರ ಯುವ ವೇದಿಕೆ ಹೊನ್ನಾವರ ವತಿಯಿಂದ ಯುವ ಪತ್ರಕರ್ತರಿಗೆ ಸನ್ಮಾನ.

ಹೊನ್ನಾವರ ತಾಲೂಕಿನ ಒಕ್ಕಲಿಗ ಯುವ ವೇದಿಕೆ ವತಿಯಿಂದ ೭೫ನೇ ಸ್ವಾತಂತ್ರೋತ್ಸವದ ನಿಮಿತ್ತ ತಾಲೂಕಿನ ಯುವ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಗುಣವಂತೆಯ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಭಾವನಾ ಟಿ.ವಿ.ಯ ವರದಿಗಾರರಾದ ವೆಂಕಟೇಶ ಮೇಸ್ತ, ಮಂಕಿ, ಕೆನರಾ ಪ್ಲಸ್ ವರಿದಿಗಾರ ಸುದೀರ ನಾಯ್ಕ ಕಡ್ನಿರ, ನೂತನ ಟಿ.ವಿ ಮತ್ತು ಕನ್ನಡ ಜನಾ೦ತರಂಗ ಪತ್ರಿಕೆಯ ವರದಿಗಾರರಾದ ನಾಗರಾಜ ನಾಯ್ಕ ಖರ್ವಾ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ ಮೇಸ್ತ ಒಕ್ಕಲಿಗ ಯುವ ವೇದಿಗೆ ಎಲ್ಲಾ ಸಮಾಜದವರನ್ನು ಗುರುತಿಸಿ ಸನ್ಮಾನಿಸಿ ಮಾದರಿ ಕಾರ್ಯಕ್ರಮ ಮಾಡುತ್ತಿದೆ. ಇಂದಿನ ಕಾಲದಲ್ಲಿ ನೈಜ ಮತ್ತು ನೇರ ಬರವಣಿಗೆ ಕಷ್ಟವಾಗುತ್ತಿದೆ. ಹಿಂದಿನ ಬರವಣಿಗೆಗೆ ಇಂದಿನ ಬರವಣಿಗೆಗೆ ತುಂಬಾ ವ್ಯತ್ಯಾಸ ಕಂಡು ಬರುತ್ತಿದೆ ಎಂದರು. ನಮಗೆ ಹಿರಿಯ ವರದಿಗಾರರಾದ ಜಿ. ಯು. ಭಟ್ಟ ಮತ್ತು ಕೃಷ್ಣಮೂರ್ತಿ ಹೆಬ್ಬಾರರವರು ಮಾರ್ಗದರ್ಶಕರು ಮತ್ತು ಕರಾವಳಿ ಮುಂಜಾವಿನ ಟಿ.ವಿ ಹರಿಕಾಂತ ರವರ ಆತ್ಮೀಯ ಒಡನಾಟ ನಾನು ಪತ್ರಿಕಾ ಕ್ಷೇತ್ರದಲ್ಲಿ ಗಟ್ಟಿ ಯಾಗಲಿಕ್ಕೆ ಕಾರಣವಾಯಿತು. ಈ ಹಿಂದೆ ನಾನು ಮಾಡಿದ ವರದಿಗೆ, ಸಾರ್ವಜನಿಕರಿಗೆ ಅನುಕೂಲವಾಗಿ ನನ್ನ ಮನೆಗೆ ಬಂದು ಸನ್ಮಾನ ಮಾಡಿದ ಸಂದರ್ಭ ಮರೆಯಲಾಗುವುದಿಲ್ಲ ಎಂದರು.

ಮತ್ತೊರ್ವ ಸನ್ಮಾನಿತರಾದ ಸುಧೀರ ಕಡ್ನಿರ ಮಾತನಾಡಿ ಒಕ್ಕಲಿಗ ಯುವ ವೇದಿಕೆಯ ಕಾರ್ಯವನ್ನು ಶ್ಲಾಘನೇ ಮಾಡಿ ಪತ್ರಿಕಾ ಕ್ಷೇತ್ರದಲ್ಲಿ ತಾನು ನಡೆದು ಬಂದ ಹಾದಿಯ ಬಗ್ಗೆ, ಸಹಕಾರ ನೀಡಿದವರ ಬಗ್ಗೆ ಹೇಳಿದರು.

ಸನ್ಮಾನಿತ ನಾಗರಾಜ ನಾಯ್ಕ ಮಾತನಾಡಿ ಒಕ್ಕಲಿಗ ಯುವ ವೇದಿಕೆ ನನ್ನನ್ನು ಗುರುತಿಸಿದಕ್ಕೆ ನಾನು ಋಣಿ ಯಾಗಿದ್ದೇನೆ. ನನಗೆ ಸೈನಿಕ ಆಗಬೇಕು ಎನ್ನುವ ಕನಸಿತ್ತು. ಆದರೆ ಇಂದು ನನಗೆ ನಿವೃತ್ತ ಸೈನಿಕರಿಂದ ಸನ್ಮಾನ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ ಎಂದರು.

ಮಾಜಿ ಸೈನಿಕ ತಿಮ್ಮಪ್ಪ ಗೌಡ ಮಾತನಾಡಿ ಒಕ್ಕಲಿಗ ಯುವ ವೇದಿಕೆ ಉತ್ತಮ ಕೆಲಸ ಮಾಡುತ್ತಿದೆ. ಪತ್ರಕರ್ತ ಕೂಡಾ ಸೈನಿಕರೇ, ವೈದ್ಯರಿಗೆ ಮತ್ತು ಪತ್ರಕರ್ತರಿಗೆ ಸೈನಿಕರಷ್ಟೇ ಜವಾಬ್ದಾರಿ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ವರದಿಗಾರರನ್ನು ಸನ್ಮಾನ ಮಾಡಿ ಒಕ್ಕಲಿಗ ಯುವ ವೇದಿಕೆ ಉತ್ತಮ ಕೆಲಸ ಮಾಡಿದೆ. ಇದು ನನ್ನ ತಮ್ಮಂದಿರರನ್ನು ಸನ್ಮಾನ ಮಾಡಿದಂತೆ. ಪತ್ರಿಕಾ ವರದಿಗಾರರಿಗೆ ಸಮಾಜವನ್ನು ತಿದ್ದುವ ಜವಾಬ್ದಾರಿ ಇದೆ. ನೇರ ಬರೆಯುವ ಎದೆಗಾರಿಕೆ ಬೇಕು ಎಂದರು.

ಯುವ ವೇದಿಕೆಯ ಜಗದೀಶ ಗೌಡ ಸ್ವಾಗತಿಸಿದರು. ಶಂಕರ ಗೌಡ ಪ್ರಸ್ತಾವಿಕ ಮಾತನಾಡಿದರು. ಮಂಜುನಾಥ ಗೌಡ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಯುವ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: