May 3, 2024

Bhavana Tv

Its Your Channel

ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ವತಿಯಿಂದ ಸಮಾಜದ ಪ್ರತಿಭಾವಂತರಿಗೆ ಸನ್ಮಾನ

ಹೊನ್ನಾವರದ ನಾಮಧಾರಿ ವಿದ್ಯಾರ್ಥಿನಿಲಯದಲ್ಲಿ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ೬೨೫/೬೨೫ ಅಂಕ ಗಳಿಸಿದ ರಾಜ್ಯ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ಗೇರುಸೊಪ್ಪದ ಕುಮಾರಿ ಭೂಮಿಕಾ ಕೃಷ್ಣ ನಾಯ್ಕ್ ಹಾಗೂ ಚೊಕ್ ಪೀಸ್ ನಲ್ಲಿ(ಕಡು ) ರಾಷ್ಟ್ರಗೀತೆ ಬರೆದNational &Asian record ನಲ್ಲಿ ಪ್ರಶಸ್ತಿ ಗಳಿಸಿದ ಕುಮಾರ ಪ್ರದೀಪ್ ಮಂಜುನಾಥ್ ನಾಯ್ಕ್ ಇಬ್ಬರಿಗೂ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಕುಮಾರಿ ಭೂಮಿಕಾ ಕೃಷ್ಣ ನಾಯ್ಕ್ ಹಾಗೂ ಕುಮಾರ ಪ್ರದೀಪ್ ಮಂಜುನಾಥ್ ನಾಯ್ಕ್ ತಮ್ಮನ್ನು ಗುರುತಿಸಿ ನಮ್ಮ ಸಮಾಜದ ನಮ್ಮ ತಾಲೂಕಾ ಸಂಘ ನಮ್ಮನ್ನು ಸನ್ಮಾನ ಮಾಡಿ ಗೌರವಿಸಿದಕ್ಕೆ ತುಂಬಾ ಸಂತೋಷವಾಗಿದೆ ಮತ್ತು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು,


ಸಂಘದ ಪ್ರಧಾನ ಕಾರ್ಯದರ್ಶಿ ವಾಮನ್ ನಾಯ್ಕ ಮಾತನಾಡಿ ಗೇರುಸೊಪ್ಪಾದ ಬೊಮ್ಮನಕೊಡ್ಲಾನ ಬಡಕುಟುಂಬದ ಹುಡುಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ ಯಲ್ಲಿ ೬೨೫/೬೨೫ಅಂಕ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಪಡೆದದ್ದು ಒಂದು ವಿಶೇಷವಾದ ಸಾಧನೆ ಹಾಗೂ ಅವಳಿಗೆ ಹಾಗೂ ಆ ಶಾಲೆಯ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು
ಉಪಾಧ್ಯಕ್ಷರಾದ ವಿ.ಜೆ. ನಾಯ್ಕ್ ಮಾತನಾಡಿ ಭೂಮಿಕಾ ನಾಯ್ಕ್ ಸಾಧನೆಗೆ ಸಂತೋಷ ವ್ಯಕ್ತಪಡಿಸುತ್ತಾ ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದರು ಅವಳ ಇಷ್ಟದಂತೆ ಮುಂದಿನ ಭವಿಷ್ಯದ ಬಗ್ಗೆ ನಿನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕೆಂದು ಅವಳಿಗೆ ಬುದ್ಧಿ ವಾದ ತಿಳಿಸಿದ್ದಾರೆ .ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪ ಜಿ ನಾಯ್ಕ್ ಮಾತನಾಡಿ ಹುಡುಗಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ. ಶಿಕ್ಷಣ ಎಲ್ಲಾ ವರ್ಗದ ಸ್ವತ್ತು ಅಂತ ಭೂಮಿಕಾ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು
ಆಡಳಿತ ಸಮಿತಿ ಸದಸ್ಯ ಸಿ.ಎನ್ ನಾಯ್ಕ್ ಮಾತನಾಡಿ ಕುಮಾರಿ ಭೂಮಿಕಾ ಹಾಗೂ ಕುಮಾರ ಪ್ರದೀಪ್ ನಾಯ್ಕ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಮಂಜುನಾಥ್ ನಾಯ್ಕ ಮಾತನಾಡಿ ನಮ್ಮೂರಿನ ಇಬ್ಬರು ಮಕ್ಕಳು ಸಾಧನೆ ಮಾಡಿದ್ದಕ್ಕೆ ನಮ್ಮ ಸಮಾಜಕ್ಕೂ ನಮ್ಮೂರಿಗೆ ಹಾಗೂ ವಯಕ್ತಿಕವಗಿ ನನಗು ಬಹಳ ಹೆಮ್ಮೆಯ ವಿಷಯ. ಗೇರುಸೊಪ್ಪದ ಬೊಮ್ಮನಕೋಡ್ಲು ಎಂಬ ಕುಗ್ರಾಮಕ್ಕೆ ಡಿ. ಡಿ. ಪಿ. ಐ, ಶಾಸಕರು, ಮಾಜಿ ಶಾಸಕರು ತಹಶೀಲ್ದಾರರು ಹಾಗೂ ಹಲವಾರು ಸಂಘ -ಸಂಸ್ಥೆಗಳು ಅವಳ ಮನೆಗೆ ಬಂದು ಗೌರವಿಸಿದ್ದಾರೆ.
ಕಾರ್ಯಕ್ರಮದ ಪ್ರದಾನ ಕಾರ್ಯದರ್ಶಿ ಸ್ವಾಗತಿಸಿದರು ಸಂಘದ ಉಪಾಧ್ಯಕ್ಷ ಟಿ.ಟಿ ನಾಯ್ಕ್ ವಂದಿಸಿದರು.

error: