May 17, 2024

Bhavana Tv

Its Your Channel

ದೇಶವು ೭೫ನೇಯ ಸ್ವಾತಂತ್ರ‍್ಯೋತ್ಸವ ದಲ್ಲಿದ್ದರೂ ಹಲವು ಸಮಸ್ಯೆಗಳು ಎದುರಿಸುತ್ತಿದೆ. ಸಮಸ್ಯೆಗಳನ್ನು ಮೀರಿ ನಿಂತು ನಾವೆಲ್ಲ ದೇಶದ ಅಭಿವೃದಿಗೆ ಶ್ರಮಿಸಬೇಕು-ತಹಸೀಲ್ದಾರ ನಾಗರಾಜ ನಾಯ್ಕಡ

ಹೊನ್ನಾವರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಭಾನುವಾರ ಆಯೋಜಿಸಿದ ಸ್ವಾತಂತ್ರೊತ್ಸವ ಕಾರ್ಯಕ್ರಮದ ದ್ವಜಾರೋಹಣದ ನೇರವೇರಿಸಿದ ತಹಸೀಲ್ದಾರ ನಾಗರಾಜ ನಾಯ್ಕಡ ನಂತರ ಅವರು ಮಾತನಾಡಿ. ದೇಶವು ಅನೇಕ ಏಳು ಬೀಳುಗಳನ್ನು ಕಾಣುತ್ತಾ ಸಮಗ್ರತೆಯನ್ನು ಕಾಯ್ದುಕೊಂಡು ಪ್ರಗತಿಪಥದತ್ತ ದಾಪುಗಾಲು ಇಟ್ಟು ಪ್ರಪಂಚವೇ ಭಾರತವನ್ನು ದಿಟ್ಟಿಸಿ ನೋಡುವಂತೆ ಉಜ್ವಲ ರಾಷ್ಟ್ರವಾಗಿ ಪ್ರಗತಿಪಥದಲ್ಲಿ ಸಾಗುತ್ತಿದೆ. ಪೂರ್ವಜರ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶೃದ್ಧೆಯನ್ನು ನಾವು ಹಾಗೂ ನಮ್ಮ ಯುವಶಕ್ತಿ ಬಲಪಡಿಸೋಣ. ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸಿ ಸಮಗ್ರ ಭಾರತವು ಪ್ರಗತಿ ಪಥದಲ್ಲಿ ಸಾಗುವಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸೋಣ ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗೇರುಸೊಪ್ಪಾ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಯ್ಕ , ಕರೋನಾ ಮಹಾ ಮಾರಿಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ವಿವಿಧ ಇಲಾಖೆಯ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕ ಮಟ್ಟದ ಆನಲೈನ್ ಭಾಷಣ ಹಾಗೂ ಕೊರೋನಾ ಜಾಗೃತಿ ಗೀತೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಆಡಳಿತಾಧಿಕಾರಿ ವಿನೋಧ ಅನ್ವೆಕರ್, ಪ. ಪಂ. ಮುಖ್ಯಾಧಿಕಾರಿ ಪ್ರವೀಣ ಕುಮಾರ್, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪಿಎಸೈ ಶಶಿಕುಮಾರ, ನಿರಂಜನ, ಸಾವಿತ್ರಿ ನಾಯ್ಕ, ಜಗದೀಪ ತೆಂಗೇರಿ, ಹುಸೇನ್ ಖಾದ್ರಿ, ಯುವಜನಸೇವಾ ಕ್ರೀಡಾದಿಕಾರಿ ಸುಧೀಶ ನಾಯ್ಕ, ಲಯನ್ಸ ಕಾರ್ಯದರ್ಶಿ ಉದಯ ನಾಯ್ಕ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ.

error: