April 28, 2024

Bhavana Tv

Its Your Channel

ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅಮೃತ ಪುಸ್ತಕಾಲಯ’ ಯೋಜನೆ ತಾಲೂಕಿನ ಶಿಕ್ಷಣ ಸಂಸ್ಥೆಗಳಿOದ ಶ್ಲಾಘನೆ.

ಹೊನ್ನಾವರ: ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಅಭಿನವದ ಸಹಕಾರದಲ್ಲಿ “ಅಮೃತ ಪುಸ್ತಕಾಲಯ” ಎನ್ನುವ ವಿನೂತನ ಯೋಜನೆಯನ್ನು ಆರಂಭಿಸಿದ್ದು ಇದಕ್ಕೆ ತಾಲೂಕಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ೫ ವರ್ಷಗಳಲ್ಲಿ ಉಳಿತಾಯ ಮಾಡಿದ ಸಮಾರು ೧ ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರö್ಯದ ಅಮೃತ ಮಹೋತ್ಸವದ ನಿಮಿತ್ತ ೭೫ ರ ಹೊತ್ತಿಗೆ; ೭೫ ಹೊತ್ತಿಗೆ ಎನ್ನು ಕಲ್ಪನೆಯಲ್ಲಿ ಪ್ರತಿ ಸಂಸ್ಥೆಗೆ ೬ ರಿಂದ ೮ ಸಾವಿರ ರೂಪಾಯಿ ವೆಚ್ಚದ ಪುಸ್ತಕಗಳನ್ನು ವಿತರಿಸಲಾಗಿದೆ.
ಬೆಂಗಳೂರಿನ ಅಭಿನವದ ಸಹಕಾರದಿಂದ ಮುಂದಿನ ದಿನಗಳಲ್ಲಿ ಇದನ್ನು ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ವಿತರಿಸುವ ಉದ್ದೇಶವಿದೆ..
ಕ.ಸಾ.ಪ.ದ ಅವಧಿ ಪೂರ್ಣಗೊಳ್ಳುವ ಪೂರ್ವದಲ್ಲಿಯೇ ತಾಲೂಕಿನ
ಎಸ್.ಡಿ.ಎಮ್ ಪದವಿ ಮಹಾವಿದ್ಯಾಲಯ, ಸಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ.ಪೂ ಕಾಲೇಜು ಆಳ್ಕಂಕಿ, ಎಸ್.ಕೆ.ಪಿ ಪ.ಪೂ ಕಾಲೇಜು ಅರೇಅಂಗಡಿ, ಜನತಾ ವಿದ್ಯಾಲಯ ಕಡತೋಕಾ, ಕರಾವಳಿ ಪ್ರೌಢ ಶಾಲೆ ಗುಣವಂತೆ, ಸರ್ಕಾರಿ ಪ್ರೌಢ ಶಾಲೆ ಗೇರುಸೊಪ್ಪಾ, ಆರೋಗ್ಯಮಾತಾ ಪ್ರೌಢ ಶಾಲೆ ಗುಂಡಬಾಳ, ಶ್ರೀ ಚೆನ್ನಕೇಶವ ಪ್ರೌಢ ಶಾಲೆ ಕರ್ಕಿ, ಸರ್ಕಾರಿ ಪ್ರೌಢ ಶಾಲೆ ಹಡಿನಬಾಳ, ಸ.ಹಿ.ಪ್ರಾ ಶಾಲೆ ಕಡ್ಲೆಕೊಪ್ಪ, ಸ.ಹಿ.ಪ್ರಾ ಶಾಲೆ ಮಾಡಗೇರಿ, ಸ.ಹಿ.ಪ್ರಾ ಶಾಲೆ ಗುಂಡಬಾಳ, ಸ.ಹಿ.ಪ್ರಾ ಶಾಲೆ ಗುಂಡಿಬೈಲ ನಂ.೧ , ಸ.ಹಿ.ಪ್ರಾ ಶಾಲೆ ವಂದೂರು.

ಈ ೧೫ ಶಿಕ್ಷಣ ಸಂಸ್ಥೆಗಳಿಗೆ ಅವಶ್ಯವಿರುವ ಪುಸ್ತಕಗಳನ್ನು ವಿತರಿಸಲಾಗಿದ್ದು ಅಲ್ಲಿನ ಎಲ್ಲ ಶಿಕ್ಷಕರು ಕ.ಸಾ.ಪ.ದ ಈ ಕಾರ್ಯ ನಿಜವಾಗಿಯೂ ಮಾದರಿಯಾದದ್ದು ಮುಂದಿನ ಪೀಳಿಗೆಗೆ ಇದು ಆದರ್ಶಪ್ರಾಯವಾಗಲಿ ಎಂದಿದ್ದಾರೆ.

error: