April 29, 2024

Bhavana Tv

Its Your Channel

ಮಹಿಳಾ ಸಾಂತ್ವನ ಕೇಂದ್ರ ಮುಚ್ಚುವ ನಿರ್ಧಾರ ಹಿಂತೆಗೆದುಕೊಳ್ಳಬೇಕೆOದು ಆಗ್ರಹ

ಹೊನ್ನಾವರ: ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಹಿಂತೆಗೆದುಕೊಳ್ಳಬೇಕೆAದು ಆಗ್ರಹಿಸಿ ಕರವೇ ಗಜಸೇನೆ ವತಿಯಿಂದ ಸೋಮವಾರ ತಹಶಿಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಿನಿವಿಧಾನಸೌಧಕ್ಕೆ ತೆರಳಿ ತಹಶಿಲ್ದಾರ ನಾಗರಾಜ ನಾಯ್ಕಡ್ ಅವರಿಗೆ ಮನವಿ ಸಲ್ಲಿಸಿದರು.ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಿರುವುದು. ತೀವೃವಾಗಿ ಖಂಡನಿಯ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಮುಚ್ಚಲು ಹೊರಟಿರುವುದು ಮಹಿಳಾ ವಿರೋಧಿ ಕ್ರಮವಾಗಿದೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳು ಮಹಿಳಾ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು, ಸಾವಿರಾರು ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೇಂದ್ರಗಳಾಗಿದ್ದು ಈಗ ಕೋವಿಡ್ ನೆಪದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ಹೇಳಿ ೭೧ ಸಾಂತ್ವನ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಮನವಿಯಲ್ಲಿ ವಿನಂತಿಸಿದೆ.

ಈ ಕುರಿತು ಕರವೇ ಗಜಸೇನೆ ತಾಲೂಕಾಧ್ಯಕ್ಷ ಗಣೇಶ್ ನಾಯ್ಕ ಮಾತನಾಡಿ ಇಂದು ಕೇವಲ ಮನವಿ ಸಲ್ಲಿಸಲಾಗಿದೆ. ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಹಿಂದಕ್ಕೆ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಕರವೇ ಗಜಸೇನೆ ತಾಲೂಕಾ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಶೈಲಾ ನಾಯ್ಕ ಮಾತನಾಡಿ ಯಾವುದೇ ಅಹಿತಕರ ಘಟನೆಯಿಂದ ಮಹಿಳೆಯರು ನೊಂದAತಹ ಸಂದರ್ಭದಲ್ಲಿ ಸಾಂತ್ವನ ಕೇಂದ್ರಗಳು ಸಹಕಾರಿಯಾಗುತ್ತಿತ್ತು. ಸಾಂತ್ವನ ಕೇಂದ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವ ಬದಲು ಮುಚ್ಚುವ ಪ್ರಸ್ತಾಪ ನಡೆಯುತ್ತಿರುವುದು ಸರಿಯಾದ ನಿರ್ಧಾರವಲ್ಲ. ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಹೋರಾಟ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕರವೇ ಗಜಸೇನೆ ಕೋಶಾಧ್ಯಕ್ಷ ನೀಲಕಂಠ ನಾಯ್ಕ, ಜಿಲ್ಲಾ ಮಾಧ್ಯಮ ವಕ್ತಾರ ರಾಜೇಶ್ ನಾಯ್ಕ,ಕೇಶವ ಗೌಡ,ತಾಲೂಕಾ ಪ್ರಧಾನ ಕಾರ್ಯದರ್ಶಿ ಆದರ್ಶ ನಾಯ್ಕಸಂದೀಪ ನಾಯ್ಕ,ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಕಲ್ಪನಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಪವಿತ್ರಾ ನಾಯ್ಕ, ರತ್ನಾ ನಾಯ್ಕ,ಭಾರತಿ ನಾಯ್ಕ,ನಿರ್ಮಲಾ ನಾಯ್ಕ,ಮುಕ್ತಾ ನಾಯ್ಕ, ಶೈಲಾ ನಾಯ್ಕ ಮತ್ತಿತರಿದ್ದರು.

error: