May 5, 2024

Bhavana Tv

Its Your Channel

ಹಿರಿಯ ಯಕ್ಷಗಾನ ಕಲಾವಿದ ಗಣೇಶ ನಾಯ್ಕ ಮುಗ್ವಾರವರಿಗೆ ನುಡಿನಮನ ಕಾರ್ಯಕ್ರಮ

ಹೊನ್ನಾವರ; ಹಿರಿಯ ಯಕ್ಷಗಾನ ಕಲಾವಿದ ಗಣೇಶ ನಾಯ್ಕ ಮುಗ್ವಾ ಇತ್ತಿಚೀಗೆ ನಿಧನರಾದರು, ಇವರಿಗೆ ನುಡಿನಮನ ಕಾರ್ಯಕ್ರಮ ಮುಗ್ವಾ ರಾಘವೇಶ್ವರ ಭಾರತೀ ಸಭಾಭವನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಸ್ಕ್ರತ ಪಾಠಶಾಲೆಯ ನಿವೃತ್ತ ಪ್ರಾಚಾರ್ಯರಾದ ವಿ.ಜಿ.ಹೆಗಡೆ ಗುಡುಗಿ ಮಾತನಾಡಿ ಗಣೇಶ ನಾಯ್ಕ ಸಂಘಜೀವಿಯಾಗಿ, ಸಾಂಸ್ಕೃತಿಕ ರೂವಾರಿಯಾಗಿ, ಸಾಮಾಜಿಕ ಚಿಂತರಾಗಿದ್ದರು. ಜಾತಿ ಮತ ಪಂಥ ಎಂದು ಭೇದವಿಲ್ಲದೇ ರಾಜಕೀಯವಾಗಿ ಎಲ್ಲರ ಮನ ಗೆದ್ದರು.ಇಡೀ ನಾಡಿಗೆ ಮುಗ್ವಾ ಗ್ರಾಮವನ್ನು ಪರಿಚಯಿಸಿದ ಹಿರಿಮೆ ಇವರಿಗೆ ಸಲ್ಲಲಿದೆ ಎಂದರು.
ಮಾಜಿ ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಎಲ್ಲ ವಯೋಮಾನದವರೊಂದಿಗೆ ಬೆರೆಯುತ್ತಿದ್ದ ಅಪರೂಪದ ವ್ಯಕ್ತಿ. ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸೇವೆ ತನ್ನನ್ನು ತಾನು ಮುಡುಪಾಗಿಟ್ಟಿದ್ದರು. ಕಲಾವಿದರಾಗಿ ಜನಪ್ರತಿನಿಧಿ ರಂಗದ ಪ್ರಾಮಾಣಿಕತೆ ನಮಗೆಲ್ಲರಿಗೂ ಮದರಿಯಾಗಬೇಕಿದೆ ಎಂದರು.
ಜೆ.ಡಿ.ಎಸ್. ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ ಹಲವು ರಂಗದಲ್ಲಿ ತನ್ನನ್ನು ನಾನು ಗುರುತಿಸಿಕೊಂಡ ಮಹಾನ ಚೇತನ. ೮ ಬಾರಿ ಗ್ರಾಮ ಪಂಚಾಯತಿಗೆ ಆಯ್ಕೆಯಾಗಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಮಾದರಿಯಾಗಿದ್ದರು ಎಂದು ಸ್ಮರಿಸಿದರು.
ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಮಾತನಾಡಿ ಗಡ್ಡದ ಗಣೇಶ ಎಂದೇ ಯಕ್ಷಗಾನ ರಂಗದಲ್ಲಿ ಮಿಂಚಿದ್ದರು. ಪ್ರತಿಭೆ ಇದ್ದವರು ಹೆಸರು ಮಾಡಲು ಸಾಧ್ಯವಿಲ್ಲ. ಯೋಗತ್ಯೆ ಪ್ರತಿಭೆ ಅವಕಾಶ ಜೊತೆ ಬಾಲಬಡುಕರಿದ್ದರೆ ಮಾತ್ರ ಯಕ್ಷಗಾನದಲ್ಲಿ ಹೆಸರು ಮಾಡಲು ಸಾಧ್ಯವಿದೆ. ಆದರೆ ಅವರ ಜೊತೆ ಬಾಲಬಡುಕರಿಲ್ಲದ ಕಾರಣ ನಿರೀಕ್ಷೀತ ಪ್ರಮಾಣದಲ್ಲಿ ಹೆಸರು ಮಾಡಲು ಸಾಧ್ಯವಾಗಿಲ್ಲ. ಯಕ್ಷಗಾನದ ಜೊತೆ ರಾಜಕೀಯ ರಂಗದಲ್ಲಿಯೂ ಸಾಧನೆ ಮಾಡಿದ್ದಾರೆ. ಇವರ ಕೊಡುಗೆ ಶಾಶ್ವತವಾಗಿಡಲು ವರ್ಷಕ್ಕೊಮ್ಮೆ ಅವರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು
ಗಣೇಶ ನಾಯ್ಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಿ ಮೌನ ಸಲ್ಲಿಸಿದರು.
ಯಕ್ಷಗಾನ ಕಲಾವಿದರಾದ ಕುಮಾರ ಗಣೇಶ, ಗ್ರಾ.ಪಂ.ಸದಸ್ಯ ಐ.ವಿ.ನಾಯ್ಕ, ಎಚ್.ಆರ್ ಗಣೇಶ, ಆಶಾ ನಾರಾಯಣ ಹೆಗಡೆ, ಗಜಾನನ ನಾಯ್ಕ ಸಾಲ್ಕೋಡ್, ರಾಜು ನಾಯ್ಕ ಕಾಸಿನಬೆಣ, ಜಿ ಹೆಚ್ ನಾಯ್ಕ ಮುಂತಾಚವರು ಅಗಲಿದ ಗಣೇಶ ನಾಯ್ಕರೊಡಗಿನ ಒಡನಾಟದ ಸ್ಮರಿಸಿ ನುಡಿನಮನ ಸಲ್ಲಿಸಿದರು.

error: