April 26, 2024

Bhavana Tv

Its Your Channel

ಕುಮಟಾ ಕಸವನ್ನು ಹೊನ್ನಾವರದ ಘನತ್ಯಾಜ್ಯ ಘಟಕಕ್ಕೆ ತರುವುದನ್ನು ನಿಲ್ಲಿಸುವಂತೆ ಮನವಿ

ಹೊನ್ನಾವರ: ನೆರೆಯ ಕುಮಟಾ ಪಟ್ಟಣದ ಕಸವನ್ನು ಹೊನ್ನಾವರದ ಘನತ್ಯಾಜ್ಯ ಘಟಕಕ್ಕೆ ತರುವುದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ತಾಲೂಕಿನ ಹಲವು ಪ್ರಮುಖರು ಒಟ್ಟಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಕಳೆದ ನಾಲ್ಕು ವರ್ಷದ ಹಿಂದೆ ತಾತ್ಕಲಿಕವಾಗಿ ಕಸ ಹಾಕಲು ಅವಕಾಶ ಪಡೆದು ನಿರಂತರವಾಗಿ ಕಸ ಹಾಕುತ್ತಿರುವುದು ತಾಲೂಕಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿರುವುದು ಒಂದಡೆಯಾದರೆ, ಕೆಲ ದಿನದ ಹೊಂದೆ ಕುಮಟಾ ಪುರಸಭೆ ಸ್ವಚ್ಚ ಸರ್ವೇಕ್ಷಣಾ ಪ್ರಶಸ್ತಿç ಸ್ವೀಕರಿಸಿ ಮಾದರಿ ಎಂದು ಬಿಂಬಿತವಾಗಿರುವುದು ತಾಲೂಕಿನ ನಿವಾಸಿಗಳಿಗೆ ಅಚ್ಚರಿ ಮೂಡಿಸಿದೆ. ಸ್ವತಃ ನಾಲ್ಕೆದು ವರ್ಷದಿಂದ ಸಮಸ್ಯೆ ಬಗ್ಗೆ ಕುಮಟಾ ಹೊನ್ನಾವರ ಹಾಲಿ ಮಾಜಿ ಶಾಸಕರಾದಿ ಪ್ರಮುಖ ಮೂರು ಪಕ್ಷದವರು ಚಕಾರ ಎತ್ತದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. . ೨೦೦೯ರಂದು ಅಂದಿನ ಅಧ್ಯಕ್ಷ ಸದಾನಂದ ಭಟ್ ಅವಧಿಯಲ್ಲಿ ವಿಲೇವಾರಿ ಘಟಕ ಆರಂಭಿಸಿ ಪಟ್ಟಣದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿತ್ತು. ಇದೀಗ ಕುಮಟಾ ಪುರಸಭೆಯ ಕಸವನ್ನು ಅಲ್ಲಿಗೆ ಹಾಕುತ್ತಿರುವುದಕ್ಕೆ ವಿರೋಧವಿದ್ದು, ಇಂದಿನಿAದ ಕಸ ಹಾಕುವುದನ್ನು ನಿಲ್ಲಿಸಬೇಕು. ಗೇಟಿಗೆ ಬೀಗ ಹಾಕಿ ಯಾವುದೇ ಕಾರಣಕ್ಕೂ ಕುಮಟಾ ವಾಹನ ಒಳಪ್ರವೇಶಿಸಬಾರದು. ಒಂದೊಮ್ಮೆ ಪ್ರವೇಶ ಮಾಡಿದ್ದೆ ಆದಲ್ಲಿ ಮುಂದಿನ ಅನಾಹುತಕ್ಕೆ ಕುಮಟಾ ಪುರಸಭೆ ಹಾಗೂ ಶಾಸಕ ದಿನಕರ ಶೆಟ್ಟಿ ನೇರ ಹೋಣೆ ಯಾಗಲಿದ್ದಾರೆ. ಈ ಕುರಿತು ಹೊನ್ನಾವರ ಪಟ್ಟಣ ಪಂಚಾಯತಿ ಸದಸ್ಯರ ತುರ್ತು ಸಭೆ ಕರೆದು ನಿರ್ಣಯ ಮಾಡುವಂತೆ ಒತ್ತಾಯಿಸಿದರು. ಒಂದೊಮ್ಮೆ ಮರಾಕಲ್ ಯೋಜನೆಯಿಂದ ಹೊನ್ನಾವರ ಪಟ್ಟಣಕ್ಕೆ ಸರಬರಾಜು ಆಗುವ ನೀರು ತಡೆ ಹಿಡಿಯಲಿದ್ದೆವೆ ಎಂದು ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿದರೆ ಪಟ್ಟಣ ಮತ್ತು ತಾಲೂಕಿನ ಜನತೆಯು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡಲು ಸಿದ್ದರಿದ್ದೇವೆ ಎಂದು ಗಂಟಾಗೋಷವಾಗಿ ಹೇಳಿದರು. ಇಂತಹ ಅಚಾರ್ತುಯಕ್ಕೆ ಅವಕಾಶ ನೀಡಬಾರದು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಮುಖ್ಯಾದಿಕಾರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾಜಿ.ಪಟ್ಟಣ ಪಂಚಾಯತಿ ಅಧ್ಯಕ್ಷ ಸದಾನಂದ ಭಟ್ ಮಾತನಾಡಿ ನೆರೆ ಮನೆಯ ಕಸವನ್ನು ನಮ್ಮ ಮನೆಯ ಅಂಗಳದಲ್ಲಿ ಹಾಕಿಕೊಳ್ಳುವುದು ಹೇಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೇಯೆ ನೆರೆ ತಾಲೂಕಿನ ಕಸ ನಮ್ಮಲ್ಲಿಗೆ ತೆಗದುಕೊಳ್ಳಲು ಸಾಧ್ಯವಿಲ್ಲ. ಹೊನ್ನಾವರವನ್ನು ಶಾಸಕರು ನಿಲಕ್ಷ ಮಾಡುತ್ತಿದ್ದಾರೆ. ಕೇವಲ ಮತಕಷ್ಟೆ ಸೀಮೀತವಾಗಿರಿಸಿಕೊಂಡಿದ್ದಾರೆ. ಪಟ್ಟಣ ಪಂಚಾಯತಿಗೆ ಮೂರು ವರ್ಷದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಶಾಸಕರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ. ಇದರ ಜೊತೆ ಕಸವನ್ನು ಮತ್ತೆ ತಂದರೆ ಮುಂದಿನ ಎಲ್ಲಾ ಅನಾಹುತಗಳಿಗೆ ಶಾಸಕರು, ಕುಮಟಾ ಪುರಸಭೆ ನೇರ ಹೋಣೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಬಳಿಕ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಈಗಾಗಲೇ ಪ್ರಕರಣ ನ್ಯಾಯಲಯದ ಹಂತದಲ್ಲಿದ್ದು, ಯಾವ ವಿಧದಲ್ಲಿದೆ ಎಂದು ಹೊಸದಾಗಿ ವಕೀಲರ ನೇಮಕ ಮಾಡಿ ಕಸ ಹಾಕಲು ತಡೆ ತರುತ್ತೇವೆ . ಕುಮಟಾ ವಾಹನ ಹೋಗದಂತೆ ಬೀಗ ಅಳವಡಿಕೆ ಇಂದೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ನೀತಿಸಂಹಿತೆ ಜಾರಿ ಇರುದರಿಂದ ಸಭೆ ಮಾಡಲು ಅನುಮತಿ ಇಲ್ಲ. ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುದಾಗಿ ಭರವಸೆ ನೀಡಿದರು.
ಕರವೇ ಅಧ್ಯಕ್ಷ ಉದಯರಾಜ ಮೇಸ್ತ, ಉಮೇಶ ಮೇಸ್ತ, ಲೋಕೇಶ ಮೇಸ್ತ, ಸುರೇಶ ಸಾರಂಗ, ಗಿರೀಶ ನಾಯ್ಕ ಹಡಿಕಲ್, ಪ್ರದೀಪ ಶೆಟ್ಟಿ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ..

error: