April 28, 2024

Bhavana Tv

Its Your Channel

ರಾಜ್ಯಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಹೊನ್ನಾವರ ತಾಲೂಕಿನ ಸಂತೆಗುಳಿಯ ಶ್ರೀ ಮಹಾಸತಿ ಕ್ರೀಡಾಂಗಣದಲ್ಲಿ ಹವ್ಯಕ ವಿಕಾಸ ವೇದಿಕೆ ಆಯೋಜಿಸಿದ 10ನೇ ವರ್ಷದ ರಾಜ್ಯಮಟ್ಟದ ಹವ್ಯಕ ಕ್ರಿಕೇಟ್ ಪಂದ್ಯಾವಳಿಗೆ ಶ್ರೀ ರಾಮಚಂದ್ರಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾಲನೆ ನೀಡಿದರು.

ಬಳಿಕ ಆರ್ಶಿವಚನ ನೀಡಿದ ಮನುಷ್ಯನ ಅರಿವು ವೃದ್ದಿಸಲು ಕ್ರೀಡೆ ಹಾಗೂ ಕಲೆ ಎನ್ನುವ ಎರಡು ಮಾರ್ಗಗಳಿದ್ದು, ಅದನ್ನು ಅನುಸರಿಸುವ ಮೂಲಕ ಆರೊಗ್ಯದ ಜೊತೆಗೆ ಜೀವನದ ಹಲವು ಪಾಠಗಳನ್ನು ಕಲಿಯಬಹುದು ಬದುಕು ನಿಂತ ನೀರಾಗದೇ ಹರಿಯುವ ನೀರಿನಂತಿರಬೇಕು. ಬದುಕನ್ನು ರಸಮಯಗೊಳಿಸಲು ಕ್ರೀಡೆ ಎಂದರೆ ತಪ್ಪಾಗಲಾರದು. ಕ್ರೀಡೆಯಂತೆ ಜೀವನದಲ್ಲಿಯೂ ಸೋಲು ಗೆಲವು ಇದ್ದು, ಮರಳಿ ಯತ್ನ ಮಾಡಿದಾಗ ಯಶಸ್ಸು ಸಿದ್ದಿಸುತ್ತದೆ. ಸವಾಲುಗಳು ಅನಿರೀಕ್ಷಿತವಾಗಿ ಯಾವ ಸಮಯದಲ್ಲಿಯೂ ಎದುರಾಗಬಹುದು. ಪ್ರತಿ ಕ್ಷಣವು ಜಾಗೃತವಾಗಿದ್ದು, ಸವಾಲುಗಳನ್ನು ಎದುರಿಸಬೇಕು. ಸಂಘಟಿತರಾಗಿ ಕಾರ್ಯನಿರ್ವಹಿಸಿದ್ದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಹವ್ಯಕ ವಿಕಾಸ ವೇದಿಕೆಯೇ ನಿದರ್ಶನವಾಗಿದೆ ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಸಂಘಟನೆಯು ಕ್ರೀಡೆ ಜೊತೆಗೆ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿದೆ. ಕಳೆದ 10 ವರ್ಷದಿಂದ ಯಶಸ್ವಿ ಸಂಘಟನೆಯ ಮೂಲಕ ಕಾರ್ಯಕ್ರಮ ನಡೆಸಲು ಹಲವರ ಪರಿಶ್ರಮವಿದೆ. ಮುಂದಿನ ದಿನವು ಈ ಕಾರ್ಯ ಮುಂದುವರೆಯಲಿ ಎಂದು ಶುಭಹಾರೈಸಿದರು.

ನಿವೃತ್ತ ಇಂಜನಿಯರ್ ಎಂ.ವಿ.ಹೆಗಡೆ, ಹವ್ಯಕ ಮಹಾಸಭಾ ನಿರ್ದೇಶಕ ಆರ್.ಜಿ.ಹೆಗಡೆ ಗೊಳಿಬೈಲ್ ಮಾತನಾಡಿದರು.
ವಿಷ್ಣುಗುಪ್ತ ವಿದ್ಯಾಪೀಠಕ್ಕೆ ಹವ್ಯಕ ವಿಕಾಸ ವೇದಿಕೆಯ ವತಿಯಿಂದ 50ಸಾವಿರ ಧನಸಹಾಯವನ್ನು ಗುರುಗಳ ಮೂಲಕ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಜಿ.ಜಿ.ಸಭಾಹಿತ ಮಾತನಾಡಿ ರಾಜ್ಯದ ವಿವಿಧಡೆ ಇರುವ ಸಮಾಜದವರನ್ನು ಒಟ್ಟುಗೂಡಿಸಿ ವಿಚಾರ ನಡೆಸಲು ಈ ವೇದಿಕೆ ಉಪಯುಕ್ತಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹವ್ಯಕ ವಿಕಾಸ ವೇದಿಕೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕ್ರಿಕೇಟ್ ಪಂದ್ಯಾವಳಿಯನ್ನು ಕೆಲ ನಿಮಿಷಗಳ ಕಾಲ ಶ್ರೀಗಳು ವೀಕ್ಷಿಸಿ ಎಲ್ಲಾ 28 ತಂಡದ ಆಟಗಾರರಿಗೂ ಶುಭಹಾರೈಸಿದರು.

error: