April 28, 2024

Bhavana Tv

Its Your Channel

ಕ್ರಿಸ್ ಮಸ್ ಅಂಗವಾಗಿ ಫ್ಯಾನ್ಸಿ ಡ್ರೆಸ್ ಮತ್ತು ಕಾರಲ್ ಸಿಂಗಿಂಗ್ ಸ್ಪರ್ಧೆ

ಹೊನ್ನಾವರ: ಕ್ರಿಸ್ ಮಸ್ ಅಂಗವಾಗಿ ಕ್ಯಾಥೋಲಿಕ್ ಅಸೋಶಿಯೋಸನ್ ಡೈಸಿಸ್ ಆಫ್ ಕಾರವಾರ ವತಿಯಿಂದ ಹೊನ್ನಾವರ ವಿಭಾಗದ ಫ್ಯಾನ್ಸಿ ಡ್ರಸ್ ಸ್ಪರ್ಧೆ ಮತ್ತು ಕಾರಲ್ ಸಿಂಗಿಂಗ್ ಸ್ಪರ್ಧೆ ಹೊನ್ನಾವರ ಪಟ್ಟಣದ ಜೀವನ್ ಜೋತಿ ಹಾಲನಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿವಿಧ ಚರ್ಚನ ಧರ್ಮಗುರುಗಳು ಹಾಗೂ ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಸ್ಪರ್ಧಾ ಕಾರ್ಯಕ್ರಮದ ನಂತರ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಧರ್ಮಗುರುಗಳಾದ ಫಾದರ್ ಥಾಮಸ್ ಫರ್ನಾಂಡಿಸ್ ಮಾತನಾಡಿ ಕ್ರಿಸ್ ಮಸ್ ಎಂದರೆ ಅಶಾಂತಿಯನ್ನು ದೂರಮಾಡಿ ಶಾಂತಿಯನ್ನು ನೀಡುವುದಾಗಿದೆ. ದೇವರು ಪ್ರೀತಿಯ ಸಂಕೇತವಾಗಿದ್ದಾನೆ. ನಿನ್ನ ನೆರೆಹೊರೆಯವರನ್ನು ಪ್ರೀತಿಸು, ಶತ್ರುಗಳನ್ನು ಪ್ರೀತಿಸು ಎಂದು ಏಸು ಹೇಳಿದ್ದರು. ಕ್ರಿಸ್ ಮಸ್ ಎನ್ನುವುದು ಆಡಂಬರದ ಹಬ್ಬವಲ್ಲ. ಪ್ರೀತಿ ಹಂಚುವ ಹಬ್ಬ. ಇದು ಯಾವುದೇ ಜಾತಿ,ಮತ,ಪಂತ,ರಾಜ್ಯ,ದೇಶ ಎನ್ನುವಂತಿಲ್ಲ. ಇವೆಲ್ಲವನ್ನು ಮಿರಿದ್ದಾಗಿದೆ. ನಾವೆಲ್ಲರು ಪ್ರೀತಿ,ಸಹಬಾಳ್ವೆಯಿಂದ ಬದುಕಬೆನ್ನುವುದು ದೇವರ ಉದ್ದೇಶವಾಗಿತ್ತು. ಜಗತ್ತು ಶಾಂತಿಯಿAದ ಬಾಳ್ವೆ ನಡೆಸುವಂತೆ ಕ್ರಿಸ್ಮಸ್ ಸಂದೇಶ ಸಾರಬೇಕಿದೆ ಎಂದರು
ಕಾರ್ಯಕ್ರಮದ ನೇತ್ರತ್ವ ವಹಿಸಿದ ಹೆನ್ರಿ ಲಿಮಾ ಮಾತನಾಡಿ ನಾವು ಸನ್ಮಾರ್ಗದತ್ತ ನಡೆಯುವಂತೆ ಏಸು ಕ್ರಿಸ್ತರು ಸಂದೇಶ ಸಾರಿದ್ದರು. ಅವರ ಸವಿ ನೆನಪಿಗಾಗಿ ಕ್ರಿಸ್ಮಸ್ ಆಚರಿಸುತ್ತೇವೆ. ನಾವೆಲ್ಲರು ಪ್ರೀತಿಯಿಂದ ಇದ್ದರೆ ಪ್ರತಿನಿತ್ಯ ಏಸು ಜನಿಸುತ್ತಾನೆ. ಪ್ರೀತಿ,ಸಹಬಾಳ್ವೆಯೆ ನಾವು ಜಗತ್ತಿಗೆ ನೀಡುವ ದೊಡ್ಡ ಉಡುಗೊರೆ.ಪ್ರಪಂಚದಲ್ಲಿ ಎಲ್ಲಿ ನೋಡಿದರು ಅಶಾಂತಿ, ಹಿಂಸೆ, ಪರಸ್ಪರರ ನಡುವೆ ವೈರತ್ವ ತಾಂಡವವಾಡುತ್ತಿದೆ. ಈ ಮಧ್ಯೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದರು.

ವೇದಿಕೆಯಲ್ಲಿ ಧರ್ಮಗುರುಗಳಾದ ಫಾದರ್ ರೇಗನ್ ಫರ್ನಾಂಡಿಸ್, ಡಾ ಸಿ ಫರ್ನಾಂಡಿಸ್ ಕೋ ಒಪರೀಟಿವ್ ಬ್ಯಾಂಕನ ಅಧ್ಯಕ್ಷ ಪಿಟರ್ ಮೇಡೋನ್ಸಾ, ಜೂಜೆ ಅಂತೋನ್, ಕ್ರೀಸ್ಟಿನ್ ಲಿಮಾ, ಮತ್ತಿತರರು ಉಪಸ್ಥಿತರಿದ್ದರು..

error: