April 28, 2024

Bhavana Tv

Its Your Channel

ಹವ್ಯಕ ವಿಕಾಸ ವೇದಿಕೆ ದಶಮಾನೋತ್ಸವ ಸಂಭ್ರಮ

ಹೊನ್ನಾವರ ; ಹವ್ಯಕ ವಿಕಾಸ ವೇದಿಕೆಯ ವತಿಯಿಂದ 10 ನೇ ವರ್ಷದ ರಾಜ್ಯ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 20 ರಿಂದ 26 ರ ವರೆಗೆ ತಾಲೂಕಿನ ಸಂತೆಗುಳಿಯ ಶ್ರೀ ಮಹಾಸತಿ ಕ್ರೀಡಾಂಗಣದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಂದ ಉದ್ಘಾಟಣೆ ಗೊಂಡು ಡಿಸೆಂಬರ್ 26 ರಂದು ಬೆಳಿಗ್ಗೆಯಿಂದ ಹವ್ಯಕ ಹಬ್ಬ ನಡೆಯಲಿದೆ ಎಂದು ಹೊನ್ನಾವರದ ಖಾಸಗಿ ಹೊಟೇಲ್‌ನ ಸಭಾಭವನದಲ್ಲಿ ಶನಿವಾರ ನಡೆದ ಸುದ್ದಿಗೊಷ್ಟಿಯಲ್ಲಿ ವೆಂಕಟ್ರಮಣ ಹೆಗಡೆ ಮಾಹಿತಿ ನೀಡಿದರು

ಕಳೆದ 9 ವರ್ಷದ ಹಿಂದೆ ವೇದಿಕೆ ಆರಂಭಗೊAಡು ಈ ವರ್ಷ ತನ್ನ 10ನೇ ವರ್ಷದ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಹವ್ಯಕರಲ್ಲಿ ರಾಜ್ಯ ಮಟ್ಟದ ಕ್ರೀಕೆಟ್ ಪಂದ್ಯಾವಳಿ ನಡೆಸಿದ ಹೆಮ್ಮೆ ನಮ್ಮ ಹೊನ್ನಾವರ ಸಂಘಕಿದೆ ಎಂದರು. ಕಳೆದ 9 ವರ್ಷದಿಂದ ಸಮಾನ ಮನಸ್ಕರೆಲ್ಲರೂ ಸೇರಿ ಸಂಘದ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದು ಡಿಸೆಂಬರ್ 26 ರಂದು ಬೆಳಿಗ್ಗೆಯಿಂದ ಹವ್ಯಕ ಹಬ್ಬ ನಡೆಯಲಿದ್ದು , ಹವ್ಯಕ ಸಾಧಕರಿಗೆ ಸನ್ಮಾನ, ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಟಿ.ಜಿ.ಹೆಗಡೆ ಮಾತಮಾಡಿ ರಾಜ್ಯದಾದ್ಯಂತ 28 ಹವ್ಯಕ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗವಹಿಸಲಿವೆ ಪಂದ್ಯವು ಲೀಗ್ ಕಮ್ ನಾಕೌಟ್ ಆದರದ ಮೇಲೆ ನಡೆಯಲಿದ್ದು ಒಟ್ಟಿ 41 ಪಂದ್ಯ ನಡೆಯಲಿದ್ದು ಪ್ರತಿ ಪಂದ್ಯಕ್ಕೂ ಪದ್ಯ ಪುರುಷ, ಸರಣಿ ಪುರುಷ, ಬೆಷ್ಟ ಬಾಲ್, ಬೆಷ್ಟ ಬ್ಯಾಟ್ಸಮನ್ ಹಾಗೂ ಆಲ್ ರೌಡರ್ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಉದ್ಘಾಟಣಾ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಜಿ.ಜಿ. ಸಭಾಹಿತ ವಹಿಸುವರು. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕಡತೋಕಾ ಶಿವಾನಂದ ಹೆಗಡೆ, ನಿವೃತ್ತ ಇಂಜನಿಯರ್ ಎಂ.ವಿ.ಹೆಗಡೆ, ಹವ್ಯಕ ಮಹಾಸಭಾದ ನಿರ್ದೇಶಕ ಆರ್.ಜಿ. ಹೆಗಡೆ ಗೋಳಿಬೈಲ್ ಪಾಲ್ಗೊಳ್ಳುವರು.
ಡಿ.26 ರಂದು ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಹುಮಾನ ವಿತರಕರಾಗಿ ಹವ್ಯಕ ಮಹಾಮಂಡಲದ ಉಪಾಧ್ಯಕ್ಷ ಶ್ರೀಧರ ಭಟ್, ಅತಿಥಿಗಳಾಗಿ ಕಿಮ್ಸ್ ಕಾರವಾರದ ಸರ್ಜನ್ ಡಾ. ವಿನಾಯಕ ಆರ್. ಭಟ್ ಪಾಲ್ಗೊಳ್ಳುವರು. ಹೊನ್ನಾವರ ಹವ್ಯಕ ವಿಕಾಸ ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಅಧ್ಯಕ್ಷತೆ ವಹಿಸುವರು.
ವಿಜೇತರಿಗೆ ಪ್ರಥಮ 50 ಸಾವಿರ ರೂ. ದ್ವಿತೀಯ ಬಹುಮಾನ 30 ಸಾವಿರ ರೂ., ಉಪಾಂತ್ಯ ಪ್ರವೇಶ ಬಹುಮಾನ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 26 ರಂದು ಬೆಳಿಗ್ಗೆ 9,30 ಗಂಟೆಗೆ ಹವ್ಯಕ ಹಬ್ಬ ನಡೆಯಲಿದೆ. ಉದ್ಘಾಟಕರಾಗಿ ಶ್ರೀ ಕ್ಷೇತ್ರ ಹೊರನಾಡಿನ ಕಲಾವಿದ ರಾಜಗೋಪಾಲ ಜೋಶಿ, ಅತಿಥಿಗಳಾಗಿ ವೈದ್ಯ ಕುಮಟಾದ ಡಾ. ಜಿ.ಜಿ. ಹೆಗಡೆ, ನಿವೃತ್ತ ಪ್ರಾಚಾರ್ಯ ಜಯರಾಮ ಭಟ್ಟ, ಸಹಕಾರಿ ಧುರೀಣ ಎನ್.ಆರ್.ಹೆಗಡೆ ರಾಘೋಣ ಪಾಲ್ಗೊಳ್ಳುವರು. ಕೆ.ಪಿ.ಟಿ.ಸಿ.ಎಲ್ ನಿವೃತ್ತ ಅಧೀಕ್ಷಕ ಇಂಜನಿಯರ್ ಗಜಾನನ ಶರ್ಮ ಅಧ್ಯಕ್ಷತೆ ವಹಿಸುವರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಸ್ವರ ಮಾಧುರ್ಯ ಲಘು ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು. ಸುದ್ದಿಗೊಷ್ಟಿಯಲ್ಲಿ ಗೋಪಾಲಕೃಷ್ಣ ಹೆಗಡೆ ಕಲ್ಬಾಗ, ವಿ.ಎನ್.ಹೆಗಡೆ, ಶಂಭು ಹೆಗಡೆ, ಎಲ್.ಎ. ಭಟ್ ಉಪಸ್ಥಿತರಿದ್ದರು.

error: