April 28, 2024

Bhavana Tv

Its Your Channel

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿOದ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಿಬ್ಬಂಧಿಗಳಿಗೆ ಅಭಿನಂದನಾ ಕಾರ್ಯಕ್ರಮ

ಹೊನ್ನಾವರ :- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘ ತಾಲೂಕಾ ಘಟಕ ಹೊನ್ನಾವರ ಇವರು ಸಂಘ ಒಂದು ವರ್ಷ ಅವಧಿ ಪೂರೈಸಿದ ಶುಭ ಸಂದರ್ಭದಲ್ಲಿ ಶಿಕ್ಷಕರಿಗೆ ಉತ್ತಮ ರೀತಿಯ ಸೇವೆ, ಸಹಕಾರ ಮತ್ತು ಮಾರ್ಗದರ್ಶನ ನೀಡಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ: ಸವಿತಾ ನಾಯಕ ಹಾಗೂ ಕಛೇರಿಯ ಮ್ಯಾನೇಜರ್ ಭಾರತಿ ಕರ್ಕಿ ಹಾಗೂ ಕಛೇರಿಯ ಸಿಬ್ಬಂಧಿUಳಿಗೆ ಅಭಿನಂದನಾ ಕಾರ್ಯಕ್ರಮಮ ಏರ್ಪಡಿಸಿತ್ತು.
ಈ ಸಮಯದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಂ. ಜಿ. ನಾಯ್ಕ ರವರು ಮಾತನಾಡಿ ನಮ್ಮ ನೂತನ ಸಂಘ ಅಸ್ತಿತ್ವಕ್ಕೆ ಬಂದು ಒಂದು ವರ್ಷಗಳಾದವು. ಈ ಒಂದು ವರ್ಷದ ಅವಧಿಯಲ್ಲಿ ಶಿಕ್ಷಕರಿಗೆ ಸಂಬoಧಿಸಿದ ಯಾವುದೇ ಸಮಸ್ಯೆಗಳಿಗೆ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಡಾ: ಸವಿತಾ ನಾಯಕ ಹಾಗೂ ಕಚೇರಿಯ ಮ್ಯಾನೇಜರ್ ಭಾರತಿ ಕರ್ಕಿರವರು ಹಾಗೂ ಸಿಬ್ಬಂಧಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದಾರೆ. ಮುಖ್ಯವಾಗಿ ಹೊನ್ನಾವರ ತಾಲೂಕಾ ಶಿಕ್ಷಕರಿಗೆ ಸಿಗಬೇಕಾದ ಎಲ್ಲಾ ಸೇವಾ ಸೌಲಭ್ಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಒದಗಿಸಿ ಶಿಕ್ಷಕರು ತುಂಬಾ ಖುಷಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ವೇತನ ಶಿಕ್ಷಕರ ಸಮಸ್ಯೆಗಳ ಪರಿಹಾರ ಕುರಿತು ಶಿಕ್ಷಣ ಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ಸೇರಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳು, ಕಾಲನಿಮಿತಿ ಬಡ್ತಿ ಇ- ಮೇಲ್ ಮೂಲಕ ಶಿಕ್ಷಕರಿಗೆ ಪ್ರತಿ ತಿಂಗಳು ವೇತನ ವಿವರ ತಲುಪಿಸುವ ಕಾರ್ಯಕ್ರಮ, ಕಳೆದ 6 ವರ್ಷಗಳಿಂದ ಬಾಕಿ ಇದ್ದ ಗುರು ಸ್ಪಂದನ ಕಾರ್ಯಕ್ರಮವನ್ನು ಪ್ರತಿ ಕ್ಲಸ್ಟರ್ ಹಂತದಲ್ಲಿ ಏರ್ಪಡಿಸಿ ಶಿಕ್ಷಕರ ಸೇವಾ ಪುಸ್ತಕಗಳನ್ನು ಅವರಿಗೆ ನೀಡುವುದರ ಮೂಲಕ ಪರಿಶೀಲನೆ ಮತ್ತು ಸ್ಥಳದಲ್ಲಿಯೇ ಸಿಬ್ಬಂಧಿಗಳು ಉಪಸ್ಥಿತರಿದ್ದು, ಸಮಸ್ಯೆಗಳ ಪರಿಹಾರ ಇವೆಲ್ಲವನ್ನು ಸಂಘದ ಕೋರಿಕೆಯಂತೆ ಅತ್ಯಂತ ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ಕಛೇರಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ನೆರೆವೇರಿಸಿದ್ದಾರೆ. ಜಿಲ್ಲೆಯಲ್ಲಿಯೇ ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಅತ್ಯಂತ ಪ್ರಾಮಾಣಿಕ ಸಿಬ್ಬಂಧಿಗಳನ್ನು ಹೊಂದಿದ ಮಾದರಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ: ಸವಿತಾ ನಾಯಕರವರು ತಾವು ಅಧಿಕಾರ ವಹಿಸಿಕೊಂಡ ಅಲ್ಪಾವಧೀಯಲ್ಲೆ ಅತ್ಯಂತ ಉತ್ತಮವಾದ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸೇವೆಯನ್ನು ಒದಗಿಸಿದ್ದಾರೆ.ಎಂದು ಹೇಳಿ ಶಿಕ್ಷಕರ ಪರವಾದ ಸಂಘದ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದನೆ ನೀಡಿ ಪರಿಹಾರ ಮಾಡಿದಕ್ಕೆ ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದಿಸಿದರು. ಹೊನ್ನಾವರ ತಾಲೂಕು ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಶಿಕ್ಷಕರನ್ನು ಹೊಂದಿದೆ. ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದ ತಾಲೂಕು. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ದೊರಕಿದರೆ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯ. ಈ ದೀಸೆಯಲ್ಲಿ ಸಂಘ ಶಿಕ್ಷಕÀರ ಪರವಾಗಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೊನ್ನಾವರ ತಾಲೂಕಾ  ಕ್ಷೇತ್ರಶಿಕ್ಷಣಾಧಿಕಾರಿಗಳಾದ  ಡಾ: ಸವಿತಾ ನಾಯಕ  ರವರು ಮಾತನಾಡಿ  ತಮ್ಮ ಕಛೇರಿ ಅತ್ಯುತ್ತಮವಾದ   ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅನುಭವಿ  ಸಿಬ್ಬಂಧಿಗಳನ್ನು ಹೊಂದಿದ ಕಛೇರಿ.  ಸಂಘದ ಕೋರಿಕೆಯಂತೆ ಒಂದು ವರ್ಷದ ಅವಧಿಯಲ್ಲಿ  ಶಿಕ್ಷಕರಿಗೆ ಸಂಬAಧಿಸಿದ  ಶೇಕಡಾ 99 ರಷ್ಟು ಸಮಸ್ಯೆಗಳನ್ನು  ಪರಿಹರಿಸುವ ನಿಟ್ಟಿನಲ್ಲಿ  ಉತ್ತಮ ಪ್ರಾಮಾಣಿಕ ಸೇವೆಯನ್ನು  ಒದಗಿಸುವ ಕಾರ್ಯ  ಮಾಡಿದ್ದೇವೆ,  ಇದಕ್ಕೆಲ್ಲ ಕಾರಣ  ತನ್ನ ಕಛೇರಿಯ ಮ್ಯಾನೇಜರ್ ಭಾರತಿ ಕರ್ಕಿ ಹಾಗೂ ಸಿಬ್ಬಂಧಿಗಳು. ಹೊನ್ನಾವರ ತಾಲೂಕು ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ಶೈಕ್ಷಣಿಕ ಗುಣ ಮಟ್ಟ ಹೊಂದಿದ ತಾಲೂಕು. ಇಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿದ್ದಾರೆ. ಅತ್ಯಂತ ಕುಗ್ರಾಮಗಳನ್ನು ಹೊಂದಿದ ನಮ್ಮ ತಾಲುಕು ಉತ್ತಮ ಗುಣಮಟ್ಟದ ಶಿಕ್ಷಣ  ವ್ಯವಸ್ಥೆ ಹೊಂದಿದೆ ಎಂದರೆ  ಅದಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣ. ಈ ಕಾರಣದಿಂದ ಅವರು ಉತ್ತಮ ರೀತಿಯ ಕೆಲಸ ಮಾಡಬೇಕೆಂದರೆ ಅವರಿಗೆ ಸಿಗಬೇಕಾದ ಅಗತ್ಯ ಸೇವಾ ಸೌಲಭ್ಯಗಳನ್ನು  ಒದಗಿಸುವ ಕೆಲಸ ತಮ್ಮ ಕಛೇಯಿಂದಾಗಬೇಕು.  ಅವರು ಅನಾವಶ್ಯಕವಾಗಿ ಕಛೇರಿ ಅಲೆದಾಡುವುದನ್ನು  ತಪ್ಪಿಸಬೇಕು ಎನ್ನುವ ದೃಷ್ಟಿಯಿಂದ ಸಂಘದ ಸಹಕಾರ ಹಾಗೂ ಸಿಬ್ಬಂಧಿಗಳ ಸಹಕಾರದೊಂದಿಗೆ  ಈ ಕಾರ್ಯ ಮಾಡಿದ್ದೇವೆ. ಹೊನ್ನಾವರ ತಾಲೂಕು ಅತ್ಯುತ್ತವಾದ ಕ್ರಿಯಾಶೀಲವಾದ ಶಿಕ್ಷಕರ ಸಂಘ ಹೊಂದಿದೆ. “ಸಂಘ” ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕೆಲಸ ಪ್ರಾಮಾಣಿಕ ಕೆಲಸಮಾಡುತ್ತಿದೆ. ಈ ಕಾರ್ಯ ಮುಂದುವರಿಯಲಿ. ಶಿಕ್ಷಕರ ಯಾವತ್ತೂ ಒಳ್ಳೆಯ  ಕಾರ್ಯಗಳಿಗೆ  ಸಂಘಕ್ಕೆ  ತಮ್ಮ ಬೆಂಬಲ  ಸಹಕಾರ ಇದೆ ಎಂದು ಹೇಳಿದರು. ಹೊನ್ನಾವರ ತಾಲೂಕನ್ನು ಶೈಕ್ಷಣಿಕವಾಗಿ ಮಾದರಿ ತಾಲೂಕನ್ನಾಗಿ ಮಾಡೋಣ ಇದಕ್ಕೆ  ಸಂಘÀದ ಸಹಕಾರ ಕೋರಿದರು.ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ತಮ್ಮ ವೃತ್ತಿಗೆ ಸಂಬAಧಿಸಿದ ವಿಚಾರಗಳಿಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಶೈಕ್ಷಣಿಕ ಕಾರ್ಯಗಾರ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಿ ಎಂದು ಸಂಘಕ್ಕೆ ಕರೆ ನೀಡಿದರು.
    “ಕಛೆರಿಯ ಮ್ಯಾನೇಜರ್‌ರವರಾದ  ಭಾರತಿ ಕರ್ಕಿರವರು ಮಾತನಾಡಿ  ಶಿಕ್ಷಕರು ತಮ್ಮ ಶಾಲೆಗಳಲ್ಲಿ   ಉತ್ತಮವಾಗಿ ಕೆಲಸ  ನಿರ್ವಹಿಸಬೇಕು ಎಂದಾದರೆ  ಅವರಿಗೆ  ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಆ ಕೆಲಸವನ್ನು ನಾವು ಮಾಡಿದ್ದೇವೆ. ಇದಕ್ಕೆ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಕಾರಣ. ಪ್ರತಿಯೊಬ್ಬರು ತಮ್ಮ ಪಾಲಿನ ಕಾರ್ಯವನ್ನು ಪ್ರಾಮಾಣಿಕವಾಗಿ, ಶೃದ್ದೆಯಿಂದ  ಮಾಡಿದರೆ ಯಾವುದು ದೊಡ್ಡದಲ್ಲ,  ಕಛೇರಿಯ  ಮ್ಯಾನೇಜರ್  ಆ ಕೆಲಸವನ್ನು  ಶೃದ್ದೆಯಿಂದ  ಮಾಡಿದ್ದೇವೆ ಎನ್ನುವ ತೃಪ್ತಿ ಇದೆ.  ಇದು ನಮ್ಮ ಕರ್ತವ್ಯ. ಅದನ್ನು ನಾವು ಮಾಡಿದ್ದೇವೆ. ಸಂಘÀವು ಕೂಡ ನಮ್ಮ ಕೆಲಸ ಕಾರ್ಯಗಳಲ್ಲಿ  ಉತ್ತಮವಾಗಿ ಸಹಕಾರ ನೀಡಿದ್ದಾರೆ. ಇನ್ನು ಮುಂದೆಯೂ ಕೂಡ ಪ್ರಾಮಾಣಿಕವಾದ  ಸೇವೆ ಒದಗಿಸುವ   ಕೆಲಸ ಮಾಡುತ್ತೇವೆ.  ಹಾಗೂ ಇದಕ್ಕೆ  ಕಾರಣಿಕರ್ತರಾದ  ತನ್ನ ಅಧೀನ ಸಿಬ್ಬಂಧಿಗಳಿಗೆ ಧನ್ಯವಾಧ ಹೇಳಿದರು. 

ಈ ಸಂದರ್ಭದಲ್ಲಿ ಅತ್ಯುತ್ತಮವಾದ ಕಾರ್ಯ ನಿರ್ವಹಿಸಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ: ಸವಿತಾ ನಾಯಕ ಇವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ, ಕಛೇರಿಯ ಮ್ಯಾನೇಜರ್ ಭಾರತಿ ಕರ್ಕಿ ಹಾಗೂ ಸಿಬ್ಬಂಧಿಗಳನ್ನು ಹೂ ಗುಚ್ಛ ನೀಡುವುದರ ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಆರ್.ಸಿ ಸಮನ್ವಯಾಧಿಕಾರಿಗಳಾದ ಎಸ್.ಎಂ. ಹೆಗಡೆ ಶಿಕ್ಷಣ ಸಂಯೋಜಕರಾದ ದೀಪಾ ಶೆಟ್ಟಿ, ಈ ಸಂದರ್ಭದಲ್ಲಿ ಬಿ.ಆರ್.ಸಿ ಸಮನ್ವಯಾಧಿಕಾರಿಗಳಾದ ಎಸ್.ಎಂ. ಹೆಗಡೆ ಶಿಕ್ಷಣ ಸಂಯೋಜಕರಾದ ಶ್ರೀಮತಿ ದೀಪಾ ಶೆಟ್ಟಿ ,ಜಿಲ್ಲಾ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ, ಕಾರ್ಯದರ್ಶಿ ಕೆ. ಎಂ. ಹೆಗಡೆ, ಜಿಲ್ಲಾ ಉಪಾಧ್ಯಕ್ಷೆ ಸಾಧನಾ ಬರ್ಗಿ, ಜಿಲ್ಲಾ ಸಂಘಟಾ ಕಾರ್ಯದರ್ಶಿ ಪ್ರಶಾಂತ ಭಟ್ಟ, ತಾಲೂಕಾ ಪದಾಧಿಕಾರಿಗಳಾದ ಶ್ರೀ ಸುರೇಶ ನಾಯ್ಕ,ಲಕ್ಷ್ಮಿ ಎಚ್., ಶಾರದಾ ಎಂ. ಹೆಗಡೆ, ಪ್ರತಿಮಾ ಹೆಗಡೆ, ಮತ್ತು ಸದಸ್ಯರು ಹಾಜರಿದ್ದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ. ಎಂ. ಹೆಗಡೆ ಸರ್ವರನ್ನು ವಂದಿಸಿದರು.

error: