April 26, 2024

Bhavana Tv

Its Your Channel

ಪ್ರಜಾರಾಜ್ಯೋತ್ಸವ ಕಪ್ 2022 ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ದಂಡಾಧಿಕಾರಿ ನಾಗರಾಜ್ ನಾಯ್ಕಡ್

ಹೊನ್ನಾವರದ ಕರ್ನಾಟಕ ರಾಜ್ಯ ನೌಕರರ ಸಂಘದ ಅಡಿಯಲ್ಲಿ ಪ್ರಜಾರಾಜ್ಯೋತ್ಸವ ಕಪ್ 2022 ಕ್ರಿಕೆಟ್ ಪಂದ್ಯಾವಳಿಯನ್ನು, ಸಂತೆಗುಳಿ ಕ್ರೀಡಾಂಗಣದಲ್ಲಿ ಹೊನ್ನಾವರದ ಸನ್ಮಾನ್ಯ ದಂಡಾಧಿಕಾರಿಗಳಾದ ಶ್ರೀ ನಾಗರಾಜ್ ನಾಯ್ಕಡ್‌ರವರು ಉದ್ಘಾಟಿಸಿದರು

ನಂತರ ಮಾತನಾಡಿ, ಪ್ರತಿ ವರ್ಷವೂ ಕೂಡ ಹೊನ್ನಾವರದ ಸರ್ಕಾರಿ ನೌಕರರ ಸಂಘ ವಿವಿಧ ಇಲಾಖೆಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತರುವುದು ಹೆಮ್ಮೆಯ ವಿಷಯ. ಇವತ್ತು ಸರ್ಕಾರಿ ನೌಕರ ತುಂಬಾ ಒತ್ತಡದಲ್ಲಿ, ನೌಕರರ ಕೊರತೆ ನಡುವೆಯೂ ಕೆಲಸ ನಿರ್ವಹಿಸುತ್ತಿದ್ದಾನೆ. ಈ ಸಂದರ್ಭಕ್ಕೆ ಕ್ರೀಡಾಕೂಟಗಳು ಅವರಿಗೆ ವಿಶೇಷವಾದ ಉತ್ತೇಜನ ಕೊಡುವಂತಾಗಿದೆ. ಸರ್ಕಾರಿ ನೌಕರರ ಸಂಘ ಸರ್ಕಾರಿ ನೌಕರರ ಬಗ್ಗೆ ಮಧ್ಯೆ ಇಂತಹ ಉತ್ತಮ ವಾತವರಣ ನಿರ್ಮಿಸಿ ಸರ್ಕಾರಿ ನೌಕರ ಪ್ರಾಮಾಣೀಕವಾಗಿ ಶ್ರದ್ಧೆಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವಾಗಿ ಸರ್ಕಾರಿ ನೌಕರರ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಕ್ರೀಡಾಕೂಟಗಳು ಸರ್ಕಾರಿ ವಿಶೇಷವಾದ ಟಾನಿಕ್ ಇದ್ದ ಹಾಗೆ. ವಿವಿಧ ಇಲಾಖೆಗಳ ನಡುವೆ ಇಂತಹ ಕ್ರೀಡಾಕೂಟಗಳು ಸೌಹಾರ್ದ ಮನೋಭಾವನೆಯನ್ನು ಉಂಟು ಮಾಡುತ್ತದೆ ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭಾಶಯ ಕೋರಿದರು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಸುರೇಶ ನಾಯ್ಕ ರವರು ಮಾತನಾಡಿ ಸಂಘ ಸಂಘಟನೆ ನಮಗೆಲ್ಲ ಅತ್ಯಂತ ಅನಿವಾರ್ಯ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಕ್ಷರಿ ರವರು ನೌಕರರ ಪರವಾಗಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ನಾವೆಲ್ಲಾ ನೌಕರರು ಒಂದೇ ಕುಟುಂಬದ ಸದಸ್ಯರಿದ್ದ ಹಾಗೆ, ಇವತ್ತು ಸರ್ಕಾರಿ ನೌಕರ ಒತ್ತಡದಲ್ಲಿ ಕಾರ್ಯ ನಿರ್ವಹಣೆ ಮಾಡುವ ಪ್ರಸಂಗ ಬಂದೊದಗಿದೆ. ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿದ್ದಾಗ್ಯೂ ನಮ್ಮ ನಡುವೆ ಇರುವ ನೌಕರರು ಅದೆಲ್ಲವನ್ನು ಸರಿದೂಗಿಸಿಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತದ್ದಾರೆ. ಹೊನ್ನಾವರದ ನೌಕರರ ಸಂಘ ನೌಕರರ ಮಧ್ಯೆ ಇಂತಹ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತರುವುದು ಖುಷಿಯ ವಿಚಾರ, ನೌಕರರಿಗೆ ಇದು ಬೇಕು. ಇಷ್ಟೇ ಅಲ್ಲದೆ ಹೊನ್ನಾವರದ ನೌಕರ ಸಂಘ ಅನೇಕ ವಿಶಿಷ್ಟ ಕಾರ್ಯಕ್ರಮಗಳ ಮೂಲಕ, ಹೋರಾಟದ ಮೂಲಕ ಸರ್ಕಾರಿ ನೌಕರರಿಗೆ ವಿಶೇಷವಾದ ಧೈರ್ಯ ತುಂಬುವ ಉತ್ತೇಜನ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು. ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಹೊನ್ನಾವರದ ಅಧ್ಯಕ್ಷರಾದ ರಾಜಕುಮಾರ ನಾಯ್ಕ ರವರು ಮಾತನಾಡಿ ಕಳೆದ 8 ವರ್ಷಗಳಿಂದ ನಮ್ಮ ಹೊನ್ನಾವರದ ಸಂಘ ವಿವಿಧ ಇಲಾಖೆಗಳ ನಡುವೆ ಪ್ರಜಾ ರಾಜ್ಯೋತ್ಸವದ ಸಂದರ್ಭದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದೆ, ನಮ್ಮೆಲ್ಲಾ ಸರ್ಕಾರಿ ನೌಕರರು ಒಂದು ಕುಟುಂಬ ಇದ್ದ ಹಾಗೆ. ಕ್ರೀಡಾಕೂಟಗಳ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆ ಮಾಡಲು ಸಾಧ್ಯ. ಇವತ್ತು ಅನೇಕ ಕಾರಣಗಳಿಂದ ಹೊನ್ನಾವರದ ನೌಕರರ ಸಂಘಕ್ಕೆ ತನ್ನದೇ ಆದ ಸ್ವಂತ ಕಟ್ಟಡ ಇಲ್ಲ, ಈ ಬಗ್ಗೆ ನಾವೆಲ್ಲ ನೌಕರ ಬಂಧುಗಳು ಹೋರಾಟ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರು ನಮ್ಮ ನೌಕರರ ಸಂಘಕ್ಕೆ ನಿವೇಶನ ಸಲುವಾಗಿ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಬೇಕಾಗಿ ಸಮಸ್ತ ನೌಕರರ ಪರವಾಗಿ ಕೇಳಿಕೊಳ್ಳುತ್ತೇನೆ. ಸಂಘ ಸಂಘಟನೆ ಇದ್ದಾಗ ಮಾತ್ರ ಮಾತ್ರ ನಾವು ಸಂಘಟಿತರಾಗಲು ಜೊತೆಗೆ ನಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ನಾವೆಲ್ಲ ಸರ್ಕಾರಿ ನೌಕರರು ಒಂದಾಗಬೇಕು. ಒಮ್ಮನಸ್ಸಿನಿಂದ ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ನಮ್ಮ ಪ್ರಯತ್ನ ತುಂಬಾ ದೊಡ್ಡದು. ಆ ದಿಶೆಯಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಲಿ ಕ್ರಿಕೆಟ್ ಪಂದ್ಯಾವಳಿ ನಮ್ಮ ನಡುವೆ ಸಂಬAಧವನ್ನು ಗಟ್ಟಿ ಗೊಳಿಸುವುದರ ಜೊತೆಗೆ, ನಮ್ಮಲ್ಲಿ ಮಾನಸಿಕವಾಗಿ ಸದೃಢ ಮತ್ತು ಸಶಕ್ತರನ್ನಾಗಿಸಲು ಕಾರಣವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ತಾಲೂಕು ಆರೊಗ್ಯ ಅಧಿಕಾರಿಗಳಾದ ಡಾಕ್ಟರ್ ರಾಜೇಶ ಕಿಣಿ, ಹೆಸ್ಕಾಂನ ಸಹಾಯಕ ಅಭಿಯಂತರರಾದ ಆರ್.ಎನ್.ಭಟ್, ಎಸ್.ಡಿ.ಎಮ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಆರ್.ಕೆ.ಮೇಸ್ತ, ಸಂಘದ ಉಪಾಧ್ಯಕ್ಷರಾದ ಶ್ರೀ ಕಳಸ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ನಾಯ್ಕ, ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಎಂ.ಜಿ.ನಾಯ್ಕ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ ಅಣ್ಣಪ್ಪ ಮುಕ್ರಿ, ಪ್ರಧಾನ ಕಾರ್ಯದರ್ಶಿಗಳು ವಂದಿಸಿದರು. ಯುವಜನ ಸೇವಾ ಕ್ರೀಡಾ ಅಧಿಕಾರಿಗಳಾದ ಸುದೀಶ್ ನಾಯ್ಕ ನಿರೂಪಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಹೆಸ್ಕಾಂ, ಅರಣ್ಯ, ಕಂದಾಯ, ಪಂಚಾಯತ್ ರಾಜ್, ಪ್ರೌಢ ಶಿಕ್ಷಣ, ಆರೋಗ್ಯ, ಇಲಾಖೆಯ ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ಎರಡು ದಿನಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ವಿವಿಧ ಇಲಾಖೆಂiಅಧಿಕಾರಿಗಳು, ನೌಕರರು, ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ನಾಗಪ್ಪ ಕುಟ್ಟೂರು ಇವರು ವಿಶೇಷವಾದ ಸ್ಕೋರ್ ಬೊರ್ಡ ವ್ಯವಸ್ಥೆಯನ್ನು ಮಾಡಿದರು.

error: