May 4, 2024

Bhavana Tv

Its Your Channel

ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ

ಹೊನ್ನಾವರ: ಮಂಗಳವಾರ ಹೊನ್ನಾವರದ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ಹೊನ್ನಾವರದಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಕುಮಾರ ಜಿ., ಹಿರಿಯ ಸಿವಿಲ್ ನ್ಯಾಯಾಧೀಶರು, ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಇವರು ದೀಪವನ್ನು ಬೆಳಗಿಸುವದರ ಮೂಲಕ ಮತದಾನದ ಮಹತ್ವದ ಕುರಿತು ಸಭೆಯಲ್ಲಿ ವಿವರಿಸಿದರು. ಮತ್ತು ಜಿ.ಯು.ಭಟ್ಟ, ಹಿರಿಯ ವರದಿಗಾರರು ಯುವ ಮತದಾರರಿಗೆ ಸಂದೇಶ ನೀಡುವ ಬಗ್ಗೆ ಮಾತನಾಡಿದರು.
ಹಾಜರಿದ್ದ ಸಭಿಕರಿಗೆ ತಹಶೀಲದ್ದಾರ ನಾಗರಾಜ ನಾಯ್ಕಡಇವರು ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಡಿ.ಎಂ. ಕಾಲೇಜ ಹೊನ್ನಾವರ ಉಪನ್ಯಾಸಕರು, ಪ್ರಶಾಂತ ಹೆಗಡೆ, ಇವರು ರಾಷ್ಟ್ರೀಯ ಮತದಾರರ ದಿನಾಚರಣೆ ಮಹತ್ವದ ಕುರಿತು ಸುದೀರ್ಘವಾಗಿ ಉಪನ್ಯಾಸ ನೀಡಿದರು.ಸಹಾಯಕ ಆಯುಕ್ತರಾದ ಮಮತಾದೇವಿ ಜಿ.ಎಸ್ ಸಭೆಯ ಅಧ್ಯಕ್ಷತೆ ವಹಿಸಿ ಮತದಾನದ ಮಹತ್ವದ ಬಗ್ಗೆ ಹಾಗೂ ನವರಾಷ್ಟ್ರ ನಿರ್ಮಾಣದಲ್ಲಿ ಯುವ ಮತದಾರರ ಪಾತ್ರವನ್ನು ವಿವರಿಸಿದರು. ನಂತರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ 15 ಮತಗಟ್ಟೆಗಳಿಂದ ಬಂದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು,.

ಈ ಕಾರ್ಯಕ್ರಮದಲ್ಲಿ ಕುಮಾರ ಜಿ., ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು, ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ, ಜಿ.ಬಿ.ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ಹೊನ್ನಾವರ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ, ಡಾ: ವಿಜಯಲಕ್ಷ್ಮಿ ನಾಯ್ಕ, ಪ್ರಾಂಶುಪಾಲರು, ಎಸ್.ಡಿ.ಎಂ. ಪದವಿ ಕಾಲೇಜು ಹೊನ್ನಾವರ, ಜಿ.ವಿ.ಭಟ್ಟ, ವಕೀಲರು, ಅಧ್ಯಕ್ಷರು ವಕೀಲರ ಸಂಘ ಹೊನ್ನಾವರ, ಸಂಪದಾ ಗುನಗಾ, ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ಕಾರ್ಯಕಾರಿ ಸದಸ್ಯ ಕಾರ್ಯದರ್ಶಿಗಳು, ತಾಲೂಕಾ ಕಾನೂನು ಸೇವಾ ಸಮಿತಿ ಹೊನ್ನಾವರ, ಶ್ರೀ ಪ್ರಮೋದ ಎಲ್. ಭಟ್ಟ, ಹೆಚ್ಚುವರಿ ಸರಕಾರಿ ವಕೀಲರು ಹೊನ್ನಾವರ, ವೆಂಕಟೇಶ ಗೌಡ, ಹೆಚ್ಚುವರಿ ಸಹಾಯಕ ಸರಕಾರ ಅಭಿಯೋಜಕರು ಹೊನ್ನಾವರ, ಶ್ರೀ ಪ್ರಶಾಂತ ಹೆಗಡೆ, ಉಪನ್ಯಾಸಕರು, ಎಸ್.ಡಿ.ಎಂ. ಪದವಿ ಕಾಲೇಜು ಹೊನ್ನಾವರ, ಎಲ್.ಎ.ಭಟ್ಟ, ಶಿರಸ್ತೆದಾರ (ಚುನಾವಣೆ), ಕೇಶವ ನಾಯ್ಕ, ಪ್ರದ.ಸ. ಸುಧೀಶ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ತಾಲೂಕ ಪಂಚಾಯತ ಹೊನ್ನಾವರ ಹಾಗೂ ಪಟ್ಟಣ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಮತ್ತು ಯುವ ಮತದಾರರು ಉಪಸ್ಥಿತರಿದ್ದರು.

ಸುಧೀಶ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ತಾಲೂಕ ಪಂಚಾಯತ ಹೊನ್ನಾವರ ಹಾಗೂ ವಿದ್ಯಾದರ ಕಡತೋಕಾ, ಉಪನ್ಯಾಸಕರು, ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ಹೊನ್ನಾವರ ರವರು ಕಾರ್ಯಕ್ರಮ ನಿರ್ವಹಿಸಿದರು

error: