April 29, 2024

Bhavana Tv

Its Your Channel

ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಹೊನ್ನಾವರ:- ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು.ಧ್ಜಜಾರೋಹಣ ನಡೆಸಿ ಮಾತನಾಡಿದ ತಾಲೂಕಾ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಮಾತನಾಡುತ್ತ “ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದು. ಸಾರ್ವಜನಿಕ ಸೇವೆಯಲ್ಲಿರುವ ನಮ್ಮೆಲ್ಲರ ಮೇಲೆ ಹೆಚ್ಚಿನ ಜವಬ್ದಾರಿ ಇದೆ. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರ ಪರಿಶ್ರಮ ಇದೆ. ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಇನ್ನು ಉತ್ತಮ ಸೇವೆ ನೀಡಲು ಪ್ರಯತ್ನಿಸೋಣ.ಆಸ್ಪತ್ರೆಗೆ ಬರುವ ಸಾರ್ವಜನಿಕರು ಸಹ ಆಸ್ಪತ್ರೆಯ ಬೆಳವಣಿಗೆಯಲ್ಲಿ ಸಹಕರಿಸಬೇಕಿದೆ. ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಆಯುಷ್ಮಾನ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಲಭ್ಯವಿದ್ದು ಪಲಾನುಭವಿಗಳಾಗುವವರು ದಯವಿಟ್ಟು ಆಧಾರ ಕಾರ್ಡ,ರೇಶನ್ ಕಾರ್ಡ, ಮತ್ತು ಆರೋಗ್ಯ ಕಾರ್ಡಗಳನ್ನು ತಂದು ನೊಂದಣಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಯಲ್ಲಿ ಬೈಯೋ ಕೆಮಸ್ಟಿç ಸೇರಿದಂತೆ ವಿವಿಧ ರೀತಿಯ ರಕ್ತ ಪರೀಕ್ಷೆಗಳು ನಡೆಯುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಹೆಚ್ಚಿನ ಅನೂಕೂಲವಾಗಲಿದೆ.ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಆಸ್ಪತ್ರೆ ಆಯುಷ್ಮಾನ ಆರೋಗ್ಯ ಕರ್ನಾಟಕ ಮತ್ತು ಕಾಯಕಲ್ಪದ ಅನುಷ್ಟಾನದಲ್ಲಿ ಜಿಲ್ಲೆಯಲ್ಲಿ ಮುಂಚುಣಿ ಸ್ಥಾನದಲ್ಲಿ ಇರುವುದು ಸಂತೋಷದ ವಿಚಾರ.ಎಲ್ಲರಿಗೂ ಗಣರಾಜ್ಯೋತ್ಸದ ಶುಭಾಶಯಗಳು” ಎಂದು ಹೇಳಿದರು. ಧ್ವಜಾರೋಹಣಕ್ಕೆ ಸರಕಾರಿ ನೌಕರರ ಸಂಘದ ಹೊನ್ನಾವರ ಶಾಖೆಯ ಉಪಾದ್ಯಕ್ಷರಾದ ಚಂದ್ರಶೇಖರ ಕಳಸ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂಧಿ ವರ್ಗ ಹಾಜರಿದ್ದರು.


ಉತ್ತಮ ಸಾರ್ವಜನಿಕ ಸೇವೆಗಾಗಿ ಆಯುಷ್ಮಾನ ಆರೋಗ್ಯ ಕರ್ನಾಟಕ ಸಿಬ್ಬಂದಿಗಳಿಗೆ ಸನ್ಮಾನ:-
ಈ ಸಲದ ಗಣರಾಜ್ಯೋತ್ಸವ ಸಂದರ್ಬದಲ್ಲಿ ಉತ್ತಮ ಸಾರ್ವಜನಿಕ ಸೇವೆಗಾಗಿ ಆಯುಷ್ಮಾನ ಆರೋಗ್ಯ ಕರ್ನಾಟಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮಿತ್ರರಾದ ವೆಂಕಟೇಶ ಅನಂತ ಪಟಗಾರ, ಕ್ಲೆöÊಮ್ ಎಕ್ಸಿಕ್ಯೂಟಿವ್ ಸುನಿತಾ ಸುರೇಶ ನಾಯ್ಕ, ಡಾಟಾ ಎಂಟ್ರಿ ಆಪರೆಟರ್ ಅನುಷಾ ಆನಂದ ನಾಯ್ಕ ರವರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ವೈದ್ಯಾದಿಕಾರಿಗಳಾ ಡಾ|| ರಾಜೇಶ ಕಿಣಿ, ತಜ್ಞ ವೈದ್ಯರುಗಳಾದ ಡಾ|| ಪ್ರಕಾಶ ನಾಯ್ಕ, ಡಾ|| ಕೃಷ್ಣಾ ಜಿ, ಡಾ|| ಜೈಮಿನಿ, ಡಾ|| ಅನುರಾಧ, ಸಹಾಯಕ ಆಡಳಿತ ಅಧಿಕಾರಿಗಳಾದ ಶಶಿಕಲಾ ನಾಯ್ಕ, ಸರಕಾರಿ ನೌಕರ ಸಂಘದ ತಾಲಕಾ ಉಪಾದ್ಯಕ್ಷರಾದ ಚಂದ್ರಶೇಖರ ಕಳಸ ರವರು ಉಪಸ್ಥಿತರಿದ್ದರು. ತಾಲುಕಾ ಆಸ್ಪತ್ರೆ ಹೊನ್ನಾವರದಲ್ಲಿ ಆಯುಷ್ಮಾನ ಆರೋಗ್ಯ ಕರ್ನಾಟಕ ಜಾರಿಗೆ 2018 ಮಾರ್ಚ ನಿಂದ ಜಾರಿಗೆ ಬಂದಿದ್ದು ಇಲ್ಲಿಯವರೆಗೆ ಸುಮಾರು 7110 ರೋಗಿಗಳು ಈ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಡೇ ಕೇರ್ ಚಿಕಿತ್ಸೆ ಸಹ ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದ್ದು ದಿನದಿಂದ ದಿನಕ್ಕೆ ಯೋಜನೆಯ ಪಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ಯೋಜನೆಅನುಷ್ಟಾನ ಆದಾಗಿನಿಂದ ಇಲ್ಲಿಯವರೆಗೂ ತಾಲೂಕಾ ಆಸ್ಪತ್ರೆ ಹೊನ್ನಾವರ ಜಿಲ್ಲಾ ಮಟ್ಟದಲ್ಲಿ ಮುಂಚುಣಿಯಲ್ಲಿದೆ. ಸದಾ ಕೆಲಸ ಮತ್ತು ಸಾರ್ವಜನಿಕರ ಒತ್ತಡದಲ್ಲಿರುವ ವಿಭಾಗ ಇದಾಗಿದ್ದು ಇಲ್ಲಿಯ ಸಿಬ್ಬಂಧಿಗಳು ತಾಳ್ಮೆಯಿಂದ ಕಾರ್ಯನಿರ್ವಹಿಸುತ್ತ, ಹೆಚ್ಚಿನ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಉನ್ನತ ಚಿಕಿತ್ಸೆಗಾಗಿ ಒಂದು ಸಾವಿರ ಏಂಟನೂರುಕ್ಕೂ ಹೆಚ್ಚಿನ ರೋಗಿಗಳಿಗೆ ಈ ಯೋಜನೆಯಡಿಯಲ್ಲಿ ಮೂರನೆ ಹಂತದ ಆಸ್ಪತ್ರೆಗಳಿಗೆ ರೆಪರ್ ಮಾಡುವ ಮುಖಾಂತರ ಅನೂಕೂಲ ಕಲ್ಪಿಸಲಾಗಿದೆ. ಈ ಯೋಜನೆಯಿಂದ ಆಸ್ಪತ್ರೆಯ ಅಭಿವೃದ್ದಿಗೂ ಹೆಚ್ಚಿನ ಆರ್ಥಿಕ ಬಲ ಸಿಗುತ್ತಿದೆ. ಹೊನ್ನಾವರದಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಯಶಸ್ವಿನ ಹಿಂದೆ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮಿತ್ರ ವೆಂಕಟೇಶ ಅನಂತ ಪಟಗಾರ ರವರ ಪರಿಶ್ರಮವನ್ನು ಮರೆಯುವಂತಿಲ್ಲ. ಕೆಲಸದಿಂದ ನಿವೃತ್ತಿ ಹೊಂದಿದ ಶ್ರೀಮತಿ ಕಮಲಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉತ್ತಮ ಶುಶ್ರೂಷಕಾಧಿಕಾರಿ ಎಂದು ತಾಲೂಕಾ ಆಡಳಿತದಿಂದ ವಿದ್ಯಾ ನಾಯ್ಕ ರವರನ್ನು ಸನ್ಮಾನಿಸಲಾಯಿತು.

error: